newsfirstkannada.com

ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಲೆ; 3 ವರ್ಷದಲ್ಲಿ ಭಾರೀ ಕ್ರೈಮ್​​; ಏನಿದು ಸ್ಟೋರಿ?

Share :

Published May 19, 2024 at 6:08am

  ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ಅಪರಾಧ ಕೇಸ್‌

  ಬಿಜೆಪಿ ನಿಯೋಗದಿಂದ ಪೊಲೀಸ್ ಇಲಾಖೆಗೆ ದೂರು

  ಟ್ವೀಟ್ ಮೂಲಕ ಸರ್ಕಾರದ ವಿರುದ್ಧ ಜೆಡಿಎಸ್ ಕಿಡಿ!

ರಾಜ್ಯದಲ್ಲಿ ಮೇಲಿಂದ ಮೇಲೆ ನಡೆಯುತ್ತಿರೋ ಅಪರಾಧ ಪ್ರಕರಣಗಳನ್ನೇ ಅಸ್ತ್ರಮಾಡಿಕೊಂಡಿರುವ ವಿಪಕ್ಷ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ದ ಸಮರ ಸಾರಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ, ಇದಕ್ಕೆಲ್ಲಾ ಸರ್ಕಾರವೇ ನೇರ ಹೊಣೆ ಅಂತ ಪೊಲೀಸ್ ಇಲಾಖೆ ಮೆಟ್ಟಿಲೇರಿದ್ದಾರೆ.

ಇದನ್ನೂ ಓದಿ: ನಂ​-18 ಅಂದ್ರೆ ವಿರಾಟ್​ ಧಗಧಗ ಉರಿತಾರೆ.. ಮೇ 18ರಂದೇ​ ಕೊಹ್ಲಿ ರಣಾರ್ಭಟದ ಬ್ಯಾಟಿಂಗ್ ಹೇಗಿರುತ್ತೆ?

ಬಿಜೆಪಿಯ ಹೋರಾಟಕ್ಕೆ ದೋಸ್ತಿ ಕೂಡ ಕೈಜೋಡಿಸಿದೆ. ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಕೊಲೆ, ಅತ್ಯಾಚಾರ ಹಾಗೂ ಪೋಕ್ಸೋ ಕೇಸ್​​​ನಂತಹ ಅಪರಾಧ ಪ್ರಕರಣಗಳು ಏರಿಕೆ ಕಂಡಿರುವ ಬಗ್ಗೆ ರಾಜ್ಯ ಕ್ರೈಂ ರೆಕಾರ್ಡ್​ ಬ್ಯೂರೋ ಅಂಕಿ ಅಂಶ ಸಮೇತ ತೆರೆದಿಟ್ಟಿದೆ. ನಿರಂತರವಾಗಿ ನಡೆಯುತ್ತಿರುವ ಅಪರಾಧ ಪ್ರಕರಣಗಳು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ಕಡೆ ಬೊಟ್ಟು ಮಾಡಿವೆ. ಕಳೆದ 3 ವರ್ಷಗಳಲ್ಲಿ ರಾಜ್ಯದಲ್ಲಿ ಕ್ರೈಂಗಳ ಸಂಖ್ಯೆ ಏರಿಕೆ ಕಂಡಿದ್ದು ಜನಸಾಮಾನ್ಯರನ್ನು ಬೆಚ್ಚಿಬೀಳಿಸಿವೆ. ಇದೇ ವಿಚಾರ ಹಿಡಿದು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ.

ರಾಜ್ಯದ ಕಾಂಗ್ರೆಸ್​​​ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ನಿಯೋಗ ಪೊಲೀಸ್ ಇಲಾಖೆಗೆ ದೂರು ನೀಡಿದೆ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಇದೆಯಾ ಅಂತ ಪ್ರಶ್ನಿಸಿದೆ. ಮಾಜಿ ಸಿಎಂ ಡಿ.ವಿ ಸದಾನಂದಗೌಡರ ನೇತೃತ್ವದಲ್ಲಿ ಪೊಲೀಸ್​ ಅಧಿಕಾರಿಗಳನ್ನ ಭೇಟಿ ಮಾಡಿರುವ ಬಿಜೆಪಿ ನಾಯಕರು ಎರಡು‌ ಪುಟಗಳ ಪತ್ರ ಬರೆದು, ಕಾನೂನು ಸುವ್ಯವಸ್ಥೆ ಇದೆ ಅಂತ ಹೇಳ್ತಿದ್ದಾರೆ, ಆದ್ರೇ ಅದು ಸತ್ಯಕ್ಕೆ ದೂರವಾದ ವಿಚಾರ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವೈಫಲ್ಯ ಆಗಿರೋ ವಿಚಾರಕ್ಕೆ ಜೆಡಿಎಸ್ ಕೂಡ ಸರ್ಕಾರದ ವಿರುದ್ಧ ಕಿಡಿಕಾರಿದೆ. ಹಾದಿಬೀದಿಯಲ್ಲಿ ಕೊಲೆಗಳಾಗುತ್ತಿವೆ.

ರಾಜ್ಯವು ಅತ್ಯಾಚಾರಿಗಳ ಆಡಂಬೋಲವಾಗಿದೆ, ಬೆಂಗಳೂರು ಮಹಾನಗರದಲ್ಲಿ ಮಾದಕ ವಸ್ತುಗಳ ದಂಧೆ ಅವ್ಯಾಹತವಾಗಿದೆ, ಕೇವಲ 4 ತಿಂಗಳಲ್ಲಿ ಇಷ್ಟೆಲ್ಲಾ ನಡೆದಿದೆ, ರಾಜ್ಯ ಗೃಹ ಇಲಾಖೆ ಎನ್ನುವುದು ಕೆಲಸ ಮಾಡುತ್ತಿದೆಯಾ ಅಥವಾ ನಿದ್ದೆ ಮಾಡುತ್ತಿದೆ ಅಂತ ಗೃಹಸಚಿವ ಡಾ.ಜಿ.ಪರಮೇಶ್ವರ್​ಗೆ ಪ್ರಶ್ನೆ ಮಾಡಿದೆ. ಒಟ್ಟಾರೆ, ರಾಜ್ಯ ಸರ್ಕಾರ ಈಗಲಾದ್ರೂ ಕಾನೂನು ಸುವ್ಯವಸ್ಥೆಯನ್ನ ಮತ್ತಷ್ಟು ಬಿಗಿಗೊಳಿಸಬೇಕಿದೆ. ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವ ಮೂಲಕ ರಾಜ್ಯದಲ್ಲಿ ಶಾಂತ ವಾತಾವರಣ ನೆಲೆಸುವಂತೆ ಮಾಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಲೆ; 3 ವರ್ಷದಲ್ಲಿ ಭಾರೀ ಕ್ರೈಮ್​​; ಏನಿದು ಸ್ಟೋರಿ?

https://newsfirstlive.com/wp-content/uploads/2024/05/death57.jpg

Load More