Advertisment

ಯೂಟ್ಯೂಬ್ ಇತಿಹಾಸದಲ್ಲೇ ಕ್ರಿಸ್ಟಿಯಾನೋ ರೊನಾಲ್ಡೊ ರೆಕಾರ್ಡ್ ಬ್ರೇಕ್‌; 24 ಗಂಟೆಯಲ್ಲೇ ಡೈಮಂಡ್‌ ಬಟನ್‌!

author-image
admin
Updated On
ಯೂಟ್ಯೂಬ್ ಇತಿಹಾಸದಲ್ಲೇ ಕ್ರಿಸ್ಟಿಯಾನೋ ರೊನಾಲ್ಡೊ ರೆಕಾರ್ಡ್ ಬ್ರೇಕ್‌; 24 ಗಂಟೆಯಲ್ಲೇ ಡೈಮಂಡ್‌ ಬಟನ್‌!
Advertisment
  • ಕ್ರಿಸ್ಟಿಯಾನೋ ಚಾನೆಲ್‌ಗೆ 90 ನಿಮಿಷದಲ್ಲೇ 10 ಲಕ್ಷ ಚಂದಾದಾರರು
  • ಕೇವಲ 12 ಗಂಟೆಯ ಒಳಗೆ 10 ಮಿಲಿಯನ್‌ಗೂ ಹೆಚ್ಚು ಚಂದಾದಾರರು
  • ಒಂದೇ ದಿನಕ್ಕೆ ಯೂಟ್ಯೂಬ್‌ನಿಂದ ಡೈಮಂಡ್ ಬಟನ್ ಪಡೆದ ಭೂಪ!

ಕ್ರಿಸ್ಟಿಯಾನೋ ರೊನಾಲ್ಡೊ ಪೋರ್ಚುಗಲ್‌ನ ಪ್ರಖ್ಯಾತ ಫುಟ್ಬಾಲ್ ಆಟಗಾರ. ರೊನಾಲ್ಡೊಗೆ ಜಗತ್ತಿನಾದ್ಯಂತ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಫುಟ್ಬಾಲ್ ಪ್ರೇಮಿಗಳ ಹಾರ್ಟ್ ಫೇವರಿಟ್‌ ರೊನಾಲ್ಟ್‌ ಯೂಟ್ಯೂಬ್ ಇತಿಹಾಸದಲ್ಲೇ ಹೊಸ ರೆಕಾರ್ಡ್‌ ಬ್ರೇಕ್ ಮಾಡಿದ್ದಾರೆ. ಜಸ್ಟ್ ಒಂದು ಯೂಟ್ಯೂಬ್ ಚಾನೆಲ್‌ನಿಂದ ರೊನಾಲ್ಡೊ ಖ್ಯಾತಿ ಎಷ್ಟಿದೆ ಅನ್ನೋದನ್ನು ಇಡೀ ಜಗತ್ತಿಗೆ ಪರಿಚಯಿಸಿದ್ದಾರೆ.

Advertisment

ಇದನ್ನೂ ಓದಿ: 8 ತಿಂಗಳಿಂದ ಫಾರಿನ್​ನಲ್ಲಿರೋ ಕೊಹ್ಲಿ.. ‘ವಿರುಷ್ಕಾ’ ಜೋಡಿ ಲಂಡನ್​​​​​ನಲ್ಲಿ ಇರಲು ಇವೆ 5 ಕಾರಣ?

ಕ್ರಿಸ್ಟಿಯಾನೋ ರೊನಾಲ್ಡೊ ಅವರು ಇದೇ ಮೊದಲ ಬಾರಿಗೆ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ. ಆ ಚಾನೆಲ್ ಕೇವಲ 90 ನಿಮಿಷದಲ್ಲೇ 10 ಲಕ್ಷ ಚಂದಾದಾರರನ್ನು ಹೊಂದುವ ಮೂಲಕ ಅಭಿಮಾನಿಗಳು ರೊಚ್ಚಿಗೇಳುವಂತೆ ಮಾಡಿದೆ. ಅಷ್ಟೇ ಅಲ್ಲ 12 ಗಂಟೆಯೊಳಗೆ 100 ಲಕ್ಷ ಅಂದ್ರೆ 1 ಕೋಟಿಗೂ ಅಧಿಕ ಚಂದಾದಾರರನ್ನು ಸಂಪಾದಿಸಿಕೊಂಡು ಮುನ್ನುಗ್ಗುತ್ತಿದೆ.

publive-image

ಕ್ರಿಸ್ಟಿಯಾನೋ ರೊನಾಲ್ಡೊ ಅತಿ ಕಡಿಮೆ ಅವಧಿಯಲ್ಲಿ 1 ಕೋಟಿ ಚಂದಾದಾರರನ್ನು ಹೊಂದಿರೋ ಯೂಟ್ಯೂಬರ್‌ ಅನ್ನೋ ದಾಖಲೆ ಬರೆದಿದ್ದಾರೆ. ಕೇವಲ ಒಂದೇ ದಿನದಲ್ಲಿ ಯೂಟ್ಯೂಬ್ ಚಾನೆಲ್‌ಗೆ ಇಷ್ಟೊಂದು ಚಂದಾದಾರರಾಗಿರೋದು ರೆಕಾರ್ಡ್‌ ಬ್ರೇಕ್ ಮಾಡಿದೆ.

Advertisment

ಇದನ್ನೂ ಓದಿ: ಚಿಕ್ಕಪ್ಪನನ್ನೇ ಪ್ರೀತಿಸಿ ಮದುವೆಯಾದ ಯುವತಿ ಕೇಸ್​ಗೆ ಬಿಗ್​ ಟ್ವಿಸ್ಟ್​.. ಆಮೇಲೇನಾಯ್ತು ಗೊತ್ತಾ?


">August 22, 2024

ಆಗಸ್ಟ್ 21ರಂದು ರೊನಾಲ್ಡೊ ಅವರು ನಾನು ಯೂಟ್ಯೂಬ್ ಚಾನೆಲ್‌ ಆರಂಭಿಸುವುದಾಗಿ ಘೋಷಣೆ ಮಾಡಿದ್ದರು. ಇದಾದ UR ಕ್ರಿಸ್ಟಿಯಾನೋ ಚಾನೆಲ್ 90 ನಿಮಿಷಕ್ಕೆ 1 ಮಿಲಿಯನ್ ಹಾಗೂ 12 ಗಂಟೆಯಲ್ಲೇ 10 ಮಿಲಿಯನ್ ಚಂದಾದಾರರನ್ನು ಹೊಂದಿದೆ. ಈ ಮೂಲಕ ಇಡೀ ವಿಶ್ವದಲ್ಲೇ ಅತ್ಯಂತ ವೇಗದಲ್ಲಿ ಒಂದೇ ದಿನಕ್ಕೆ ಯೂಟ್ಯೂಬ್‌ನಿಂದ ಡೈಮಂಡ್ ಬಟನ್ ಪಡೆದ ಯೂಟ್ಯೂಬರ್ ಆಗಿ ಕ್ರಿಸ್ಟಿಯಾನೋ ರೊನಾಲ್ಡೋ ಹೊರ ಹೊಮ್ಮಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment