newsfirstkannada.com

8 ತಿಂಗಳಿಂದ ಫಾರಿನ್​ನಲ್ಲಿರೋ ಕೊಹ್ಲಿ.. ‘ವಿರುಷ್ಕಾ’ ಜೋಡಿ ಲಂಡನ್​​​​​ನಲ್ಲಿ ಇರಲು ಇವೆ 5 ಕಾರಣ?

Share :

Published August 22, 2024 at 10:57am

Update August 22, 2024 at 10:58am

    ಭಾರತ ಬಿಟ್ಟು, ವಿರಾಟ್ ಕೊಹ್ಲಿ ಇಂಗ್ಲೆಂಡ್​ಗೆ ಹೋಗಿದ್ದು ಏಕೆ?

    ಸರಣಿ ಇದ್ದಾಗ ಭಾರತಕ್ಕೆ.. ಮುಗಿದ ತಕ್ಷಣ ಲಂಡನ್​​ಗೆ ವಾಪಸ್

    ಭಾರತವನ್ನ ಅಪಾರ ಪ್ರೀತಿಸೋ ಕೊಹ್ಲಿ, ವಿದೇಶದಲ್ಲಿ ನೆಲೆಸ್ತಾರಾ?

2024 ಶುರುವಾಗಿದ್ದೆ ಬಂತು. ಕಿಂಗ್ ಕೊಹ್ಲಿ ಭಾರತವನ್ನೇ ಮರೆತ್ತಿದ್ದಾರೆ. ಕ್ರಿಕೆಟ್​ ಆಡೋ ಟೈಮ್​ ಬಿಟ್ಟು, ಉಳಿದ್ಯಾವ ಸಮಯದಲ್ಲೂ ಭಾರತದಲ್ಲಿ ಕಾಣಿಸಿಕೊಳ್ತಿಲ್ಲ. ಪತ್ನಿ ಅನುಷ್ಕಾ ಶರ್ಮಾ ಹಾಗೂ ಮಕ್ಕಳ ಜೊತೆ ಲಂಡನ್​ನಲ್ಲಿ ಮೊಕ್ಕಾಂ ಹೂಡಿದ್ದಾರೆ. ಅಷ್ಟಕ್ಕೂ ಭಾರತವನ್ನ ಬಿಟ್ಟು, ವಿರಾಟ್​​​​ ಲಂಡನ್​ನಲ್ಲಿ ನೆಲೆಯೂರಿರೋದಾದ್ರೂ ಯಾಕೆ.?

8 ತಿಂಗಳಿಂದ ವಿದೇಶದಲ್ಲೆ ಕೊಹ್ಲಿ ದಂಪತಿ ಮೊಕ್ಕಾಂ..!

ಕೊಹ್ಲಿ..! ಜಂಟಲ್​​ಮೆನ್​ ಗೇಮ್​​ನ ಸೂಪರ್​ ಸ್ಟಾರ್​. ಈ ಮಾಡ್ರನ್ ಕ್ರಿಕೆಟ್ ದೊರೆ ಭಾರತ ಬಿಟ್ಟು ಪತ್ನಿ ಹಾಗೂ ಮಕ್ಕಳ ಜೊತೆ ಲಂಡನ್​​ನಲ್ಲಿ ಮೊಕ್ಕಾಂ ಹೂಡಿದ್ದಾರೆ. ಸರಣಿ ಇದ್ದಾಗ ಮಾತ್ರ ತವರಿಗೆ ವಾಪಾಸಾಗ್ತಾರೆ. ಅದು ಮುಗಿಯುತ್ತಿದ್ದಂತೆ ವಿದೇಶಕ್ಕೆ ಫ್ಲೈಟ್​ ಏರ್ತಾರೆ. ಕೊಹ್ಲಿ ದಂಪತಿ ಈ ವರ್ಷದಲ್ಲಿ ಲಂಡನ್​ನಲ್ಲಿ ಹೆಚ್ಚು ನೆಲೆಸಿದ್ದಾರೆ. ಭಾರತವನ್ನ ಅಪಾರ ಪ್ರೀತಿಸೋ ಕೊಹ್ಲಿ, ಲಂಡನ್​​ನಲ್ಲಿ ಹೆಚ್ಚು ಸಮಯ ಕಳೆಯುತ್ತಿರೋದ್ಯಾಕೆ ಅನ್ನೋ ಪ್ರಶ್ನೆ ಅಭಿಮಾನಿಗಳನ್ನ ಕಾಡ್ತಿದೆ. ಅದಕ್ಕೆ 5 ಕಾರಣಗಳಿವೆ.

ಇದನ್ನೂ ಓದಿ: ಸಮಂತಾ ಫಾಲೋ ಮಾಡ್ತಿರೋ ದಗ್ಗುಬಾಟಿ ಫ್ಯಾಮಿಲಿ.. ನಾಗ ಚೈತನ್ಯ ಭಾವಿ ಪತ್ನಿನಾ ಕಡೆಗಣಿಸಿದ್ರಾ?

ರೀಸನ್​ ನಂ.1 -ಸಾಮನ್ಯರಂತೆ ಜೀವನ

ಕೆಲ ತಿಂಗಳ ಹಿಂದೆ ಕಿಂಗ್ ಕೊಹ್ಲಿ ಭಾರತದಲ್ಲಿ ಸಾಮಾನ್ಯರಂತೆ ಇರಲು ಕಷ್ಟ ಆಗುತ್ತೆ. ವಿದೇಶದಲ್ಲಿ ನಾವು ಸಾಮಾನ್ಯರಂತೆ ಇರಬಹುದು ಎಂದು ಹೇಳಿಕೊಂಡಿದ್ರು. ಇದು ಲಂಡನ್​ ಮೊಕ್ಕಾಂಗೆ ಪ್ರಮುಖ ಕಾರಣ ಅಂದ್ರು ತಪ್ಪಲ್ಲ. ಯಾಕಂದ್ರೆ ವಿದೇಶದಲ್ಲಿ ಕೊಹ್ಲಿ ದಂಪತಿ ತಾವಂದುಕೊಂಡಂತೆ ಖಾಸಗಿತನ ಆನಂದಿಸಬಹುದು. ಅಲ್ಲಿ ಯಾರ ಡಿಸ್ಟರ್ಬೆನ್ಸ್​ ಇರಲ್ಲ ಹೆಚ್ಚಿನ ಖಾಸಗಿತನಕ್ಕೆ ಸಮಯ ಸಿಗಲಿದೆ.

ರೀಸನ್​ ನಂ.2 -ಮಕ್ಕಳ ಬೆಳವಣಿಗೆ

ಇನ್ನು ಕೊಹ್ಲಿ ಲಂಡನ್​ನಲ್ಲಿ ಠಿಕಾಣಿ ಹೂಡಲು ಇನ್ನೊಂದು ಕಾರಣ ಇದು. ವಿರಾಟ್ ದಂಪತಿಗೆ ಇಬ್ಬರೂ ಮಕ್ಕಳಿದ್ದಾರೆ. ಲಂಡನ್​ನಲ್ಲಿದ್ರೆ ಅವರಿಗೆ ಹೆಚ್ಚು ಸಮಯ ಕೊಡಬಹುದು. ಬೆಳವಣಿಗೆಗೆ ಕೂಡ ಸಹಕಾರಿ ಆಗಲಿದೆ. ಆದ್ರೆ ಭಾರತಕ್ಕೆ ಬಂದ್ರೆ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಲಿದ್ದಾರೆ. ಮಕ್ಕಳ ಕಡೆ ಹೆಚ್ಚು ಗಮನ ನೀಡಲು ಆಗಲ್ಲ. ಇದನ್ನರಿತೆ ಕೊಹ್ಲಿ ದಂಪತಿ ಲಂಡನ್​ನಲ್ಲಿ ಬೀಡು ಬಿಟ್ಟಿದ್ದಾರೆ.

ರೀಸನ್​ ನಂ.3 -ಲಂಡನ್ ಬ್ಯುಸಿನೆಸ್​​ ಹಬ್​​​..!

ಲಂಡನ್​​​​​​ ಜಾಗತಿಕ ಬ್ಯುಸಿನೆಸ್​​​​​​ ಹಬ್​ಗಳಲ್ಲಿ ಒಂದಾಗಿದೆ. ಕೊಹ್ಲಿ ಅನೇಕ ಜಾಹೀರಾತು ಕಂಪನಿಗಳ ಎಂಡೋರ್ಸ್​ಮೆಂಟ್​​​ ಹಾಗೂ ಸ್ವಂತ ವ್ಯಾಪಾರ ಉದ್ಯಮ ಹೊಂದಿದ್ದಾರೆ. ಲಂಡನ್​ನಲ್ಲಿದ್ರೆ, ಅಂತರಾಷ್ಟ್ರೀಯ ಬ್ರ್ಯಾಂಡ್​ಗಳೊಂದಿಗೆ ಸುಲಭವಾಗಿ ಸಂಪರ್ಕ ಸಾಧಿಸಬಹುದು. ಜೊತೆಗೆ ಬಂಡವಾಳ ಹೂಡಿಕೆಗೆ ಲಂಡನ್ ಸೂಕ್ತ ತಾಣವಾಗಿದ್ದು, ಬ್ಯುಸಿನೆಸ್​ನಲ್ಲಿ ಎಳ್ಗೆ ಕಾಣೋ ಉದ್ದೇಶವೂ ಕೊಹ್ಲಿ ಲಂಡನ್​ ವಾಸ್ತವ್ಯದ ಹಿಂದಿದೆ.

ರೀಸನ್​ ನಂ.4 -ಟ್ರೈನಿಂಗ್​ಗೆ ಉತ್ತಮ ಸೌಕರ್ಯ

ಲಂಡನ್​ನಲ್ಲಿ ಕ್ರಿಕೆಟ್​ಗೆ ಹೆಚ್ಚಿನ​​​ ಸೌಲಭ್ಯಗಳಿವೆ. ಟ್ರೈನಿಂಗ್​ಗೂ ಕೂಡ ಉತ್ತಮ ಸೌಲಭ್ಯ ಸಿಗಲಿದೆ. ಇದು ಸ್ಕಿಲ್ಸ್​ ಮೇಲೆ ವರ್ಕೌಟ್​ ಮಾಡಲು ಸಹಕಾರಿ ಆಗಲಿದೆ. ಅಲ್ಲದೇ ಕೊಹ್ಲಿ ಫಿಟ್ನೆಸ್​ಗೆ ಹೆಚ್ಚು ಆದ್ಯತೆ ನೀಡ್ತಾರೆ. ಕ್ರಿಕೆಟ್​​​ ಜನಕರ ನಾಡಲ್ಲಿ ವಿಶ್ವ ದರ್ಜೆಯ ಜಿಮ್​​ಗಳಿವೆ. ನುರಿತ NUTRITIONISTS ಇದ್ದು, ವಿರಾಟ್​ಗೆ ಇದು ಹೆಚ್ಚು ನೆರವಾಗಲಿದೆ.

ಇದನ್ನೂ ಓದಿ: ಎಗ್​ ರೈಸ್​ ತಿನ್ನಲು ಹೋಗಿದ್ದ 6 ವಿದ್ಯಾರ್ಥಿಗಳು.. 800 ಬಸ್ಕಿ ಶಿಕ್ಷೆಗೆ ಭಯ ಬಿದ್ದು SSLC ಸ್ಟೂಡೆಂಟ್ಸ್​ ನಾಪತ್ತೆ 

ರೀಸನ್​ ನಂ.5 -ಮಾನಸಿಕ ಒತ್ತಡ ನಿರ್ವಹಣೆ

ಪರಿಸರ ಬದಲಾವಣೆ ಮಾನಸಿಕ ಒತ್ತಡ ನಿರ್ವಹಣೆಗೆ ಸಹಕಾರಿಯಾಗಲಿದೆ. ರನ್ ಬರ ಎದುರಿಸ್ತಿರೋದ್ರಿಂದ ಇನ್ನಿಲ್ಲದ ಟೀಕೆಗಳನ್ನ ಎದುರಿಸಬೇಕಾಗಿದೆ. ಆನ್​ ಮತ್ತು ಆಫ್ ದಿ ಫೀಲ್ಡ್​ನಲ್ಲಿ ಕೊಹ್ಲಿಗೆ ಹೆಚ್ಚು ಒತ್ತಡವಿದೆ. ಫ್ಯಾನ್ಸ್​ ಕೂಡ ಕೊಹ್ಲಿ ಕಂಡ್ರೆ ಮುಗಿ ಬೀಳ್ತಾರೆ. ಸಪ್ತ ಸಾಗರದಾಚೆಗಿನ ಲಂಡನ್​ನಲ್ಲಿ ನೆಲೆಸಿರುವುದಿಂದ ಇದ್ಯಾವುದರ ಕಿರಿಕಿರಿ ಇಲ್ಲದೇ ನೆಮ್ಮದಿಯಿಂದ ಇರಬಹುದು.

ಇದನ್ನೂ ಓದಿ: ಸರ್ಕಾರ​ ಅಲುಗಾಡಿಸಲು ಹೋಗಿ ಕಷ್ಟಕ್ಕೆ ಸಿಲುಕಿತಾ ಮೈತ್ರಿ.. ಗವರ್ನರ್ ತಾರತಮ್ಯ ಮಾಡ್ತಿದ್ದಾರಾ?

ಕೌಟುಂಬಿಕ ಜೀವನ, ವೈಯಕ್ತಿಕ ಆರೋಗ್ಯ ಹಾಗೂ ಭವಿಷ್ಯದ ಕಾರ್ಯತಂತ್ರದ ಭಾಗವಾಗಿ ಲಂಡನ್​ನಲ್ಲಿ ಮೊಕ್ಕಾಂ ಹೂಡಿದ್ದಾರೆ. ಹೀಗಾಗಿಯೇ ಸದ್ಯ ಭಾರತವನ್ನ ಬಿಟ್ಟು ಕೊಹ್ಲಿ ಲಂಡನ್​ನಲ್ಲೇ ನೆಲೆಯೂರ್ತಾರಾ.? ಅನ್ನೋ ಪ್ರಶ್ನೆ ಎಲ್ಲರಲ್ಲೂ ಇದೆ. ಕೊಹ್ಲಿಯ ಸದ್ಯದ ನಡೆಯನ್ನ ನೋಡಿದ್ರೆ, ನಿವೃತ್ತಿ ಬಳಿಕ ಲಂಡನ್​ನಲ್ಲಿ ಖಾಯಂ ನೆಲೆಯೂರಿದ್ರೂ ಆಶ್ಚರ್ಯಪಡಬೇಕಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

8 ತಿಂಗಳಿಂದ ಫಾರಿನ್​ನಲ್ಲಿರೋ ಕೊಹ್ಲಿ.. ‘ವಿರುಷ್ಕಾ’ ಜೋಡಿ ಲಂಡನ್​​​​​ನಲ್ಲಿ ಇರಲು ಇವೆ 5 ಕಾರಣ?

https://newsfirstlive.com/wp-content/uploads/2024/08/VIRAT_ANUSHKA-1.jpg

Load More