/newsfirstlive-kannada/media/post_attachments/wp-content/uploads/2024/05/CS-PUTTARAJU.jpg)
ಬೆಂಗಳೂರು: ರೇವಣ್ಣ ಬಂಧನದ ನಂತರ ಪ್ರಜ್ವಲ್ ರೇವಣ್ಣ ಕತೆ ಏನೂ ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ. ವಿದೇಶದಿಂದ ಇಂದು ಅಥವಾ ನಾಳೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿರೋ ಪ್ರಜ್ವಲ್ಗೆ ಇರೋದು ಒಂದೇ ದಾರಿ. ಅದು ಶರಣಾಗತಿ. ಹೀಗಾಗಿ ಬೆಂಗಳೂರಿಗೆ ಆಗಮಿಸ್ತಿದ್ದಂತೆ ನೇರವಾಗಿ ಎಸ್ಐಟಿ ಅಧಿಕಾರಿಗಳ ಮುಂದೆ ಪ್ರಜ್ವಲ್ ಹಾಜರಾಗಲಿದ್ದಾಂತೆ.
ಇದನ್ನೂ ಓದಿ:ರೇವಣ್ಣ ಅರೆಸ್ಟ್.. ಒಂದೇ ಹೋಟೆಲ್ನಲ್ಲಿ ಅಮಿತ್ ಶಾ, ಕುಮಾರಸ್ವಾಮಿ.. ಮಾತಿಲ್ಲ, ಕತೆ ಇಲ್ಲ..!
ಈ ಬಗ್ಗೆ ಮಾಹಿತಿ ನೀಡಿರೋ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಪ್ರಜ್ವಲ್ ರೇವಣ್ಣ ಸರೆಂಡರ್ ಆಗುವ ಕೆಲಸ ಆಗುತ್ತದೆ. ಪ್ರಜ್ವಲ್ ಶರಣಾಗ್ತಾರೆ ಎಂದು ತಿಳಿಸಿದ್ದಾರೆ. ರೇವಣ್ಣ ಅವರ ಬೇಲ್ ವಜಾಗೊಂಡಿದೆ. ಬಳಿಕ ದೇವೇಗೌಡರ ಆಶೀರ್ವಾದ ಪಡೆದು ಅವರೇ ಶರಣಾಗಿದ್ದಾರೆ. ಪ್ರಜ್ವಲ್ ರೇವಣ್ಣ ಅವರದ್ದು ಕಾನೂನು ಪ್ರಕಾರ ನಡೆಯುತ್ತಿದೆ. ಅವರು ಕೂಡ ಶರಣರಾಗುವ ಕೆಲಸ ಆಗಲಿದೆ. ಅವರು ಬರ್ತಾರೆ, ನಾನು ಕುಮಾರಸ್ವಾಮಿ ಜೊತೆ ಮಾತನಾಡಲು ಬಂದಿದ್ದೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ