newsfirstkannada.com

ರೇವಣ್ಣ ಅರೆಸ್ಟ್.. ಒಂದೇ ಹೋಟೆಲ್​ನಲ್ಲಿ ಅಮಿತ್ ಶಾ, ಕುಮಾರಸ್ವಾಮಿ.. ಮಾತಿಲ್ಲ, ಕತೆ ಇಲ್ಲ..!

Share :

Published May 5, 2024 at 8:24am

Update May 5, 2024 at 11:35am

    ಪೆನ್​​ಡ್ರೈವ್​​ ಪ್ರಕರಣ ದಳಕ್ಕಷ್ಟೇ ಅಲ್ಲ, ಕಮಲಕ್ಕೂ ತಳಮಳ

    ರೇವಣ್ಣ ಅರೆಸ್ಟ್ ಬೆನ್ನಲ್ಲೇ ಪ್ರಕರಣದ ತನಿಖೆ ತೀವ್ರಗೊಂಡಿದೆ

    ಕುಮಾರಸ್ವಾಮಿ ಆಪ್ತರ ಜೊತೆ ರಹಸ್ಯ ಮಾತುಕತೆ, ಏನಾಯ್ತು?

ಮಾಜಿ ಸಚಿವ ಹೆಚ್​.ಡಿ ರೇವಣ್ಣ ಅವರನ್ನ ಎಸ್​ಐಟಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಈ ಮೂಲಕ ರೇವಣ್ಣ ಮೇಲೆ ಕೆ.ಆರ್​ ನಗರದಲ್ಲಿ ದಾಖಲಾಗಿದ್ದ ಸಂತ್ರಸ್ತೆ ಕಿಡ್ನ್ಯಾಪ್​ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

ಪ್ರಕರಣ ಸಂಬಂಧ ವಿಚಾರಣೆ ಆಲಿಸಿದ ಕೋರ್ಟ್,​ ಹೆಚ್​​.ಡಿ.ರೇವಣ್ಣ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿತು. ಬೇಲ್ ಅರ್ಜಿ ವಜಾ ಆಗ್ತಿದ್ದಂತೆ ದೇವೇಗೌಡರ ಮನೆಯಲ್ಲಿ ರೇವಣ್ಣ ಇರೋದು ಪಕ್ಕಾ ಮಾಡಿಕೊಂಡ ಎಸ್​ಐಟಿ ತಂಡ, ದೇವೇಗೌಡರ ನಿವಾಸದ ಮುಂದೆ ಕಾದು ಕುಳಿತಿತ್ತು. ಬಳಿಕ ಎಸ್​ಐಟಿ ಟೀಂ ಮಾಜಿ ಸಚಿವ ರೇವಣ್ಣ ಅವರನ್ನ ವಶಕ್ಕೆ ಪಡೆದುಕೊಂಡು ಬಂಧಿಸಿದೆ.

ಇದನ್ನೂ ಓದಿ:ರೇವಣ್ಣ ಅರೆಸ್ಟ್ ಆದ ಬಳಿಕ ಏನೆಲ್ಲ ಆಯ್ತು..? ಸಿಐಡಿ ಕಚೇರಿಯಲ್ಲಿ ಮೊದಲ ರಾತ್ರಿ ಕಳೆದ ಮಾಜಿ ಸಚಿವ..!

ಬೆನ್ನಲ್ಲೇ ಕುಮಾರಸ್ವಾಮಿ ಆಪ್ತರ ಜೊತೆ ರಹಸ್ಯ ಮಾತುಕತೆ ನಡೆಸಿದ್ದಾರೆ. ನಿನ್ನೆ ಮಧ್ಯಾಹ್ನವೇ ಒಂದು ಗಂಟೆಯಿಂದ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೊಟೇಲ್‌ನಲ್ಲಿ ವಾಸ್ತವ್ಯ ಹೂಡಿದ್ರು. ಇಡೀ ಬೆಳವಣಿಗೆ ಮೇಲೆ ನಿರಂತರ ಮಾಹಿತಿ ಪಡೆಯುತ್ತಿದ್ದ ಹೆಚ್​ಡಿಕೆ, ಆಪ್ತರ ಜೊತೆಗೆ ರಹಸ್ಯ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಜಿ.ಟಿ.ದೇವೇಗೌಡ, ಸಿ.ಎಸ್​​​.ಪುಟ್ಟರಾಜು, ನಿಖಿಲ್ ಕುಮಾರಸ್ವಾಮಿ ಸೇರಿ ಕೆಲ ಆಪ್ತರು ಭಾಗಿ ಆಗಿದ್ದರು.

ಇದನ್ನೂ ಓದಿ:ಅರೆಸ್ಟ್ ಆಗಲು ಜ್ಯೋತಿಷ್ಯದ ಪ್ರಕಾರವೇ ನಡೆದುಕೊಂಡ್ರಂತೆ ರೇವಣ್ಣ.. ಆ ಮುಕ್ಕಾಲು ಗಂಟೆ ಮಾಡಿದ್ದೇನು ಗೊತ್ತಾ..?

ಇತ್ತ ಪೆನ್​​ಡ್ರೈವ್​​ ಪ್ರಕರಣ ದಳಕ್ಕಷ್ಟೇ ಅಲ್ಲ, ಕಮಲಕ್ಕೂ ತಳಮಳ ಸೃಷ್ಟಿ ಮಾಡಿದಂತೆ ಕಾಣಿಸ್ತಿದೆ. ಸ್ವತಃ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಹ ಕೇಸ್​​ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಹೆಚ್​​ಡಿಕೆ ಇದ್ದ ಇದೇ ತಾಜ್ ವೆಸ್ಟ್ ಎಂಡ್ ಹೋಟೆಲ್‌ಗೆ ರಾತ್ರಿ 8:15ಕ್ಕೆ ಅಮಿತ್ ಶಾ ಆಗಮಿಸಿ ವಾಸ್ತವ್ಯ ಹೂಡಿದ್ದಾರೆ. ಅಮಿತ್ ಶಾ ಹೊಟೇಲ್‌ಗೆ ಬಂದು ಒಂದು ಗಂಟೆಯ ಬಳಿಕ ಕುಮಾರಸ್ವಾಮಿ ಭೇಟಿ ಆಗದೇ ಹೋಟೆಲ್‌ನಿಂದ ತೆರಳಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇವಣ್ಣ ಅರೆಸ್ಟ್.. ಒಂದೇ ಹೋಟೆಲ್​ನಲ್ಲಿ ಅಮಿತ್ ಶಾ, ಕುಮಾರಸ್ವಾಮಿ.. ಮಾತಿಲ್ಲ, ಕತೆ ಇಲ್ಲ..!

https://newsfirstlive.com/wp-content/uploads/2024/05/HD-KUMARASWAMY-1.jpg

Load More