newsfirstkannada.com

ಆ 45 ನಿಮಿಷ..! ಜ್ಯೋತಿಷ್ಯದ ಟೈಂ ಪ್ರಕಾರವೇ ರೇವಣ್ಣ ಎಸ್​ಐಟಿಗೆ ಶರಣು..

Share :

Published May 5, 2024 at 7:36am

Update May 5, 2024 at 8:39am

  ಜಾಮೀನು ಅರ್ಜಿ ತಿರಸ್ಕಾರದ ಬೆನ್ನಲ್ಲೇ ರೇವಣ್ಣ ಅರೆಸ್ಟ್​

  ಅರೆಸ್ಟ್​ ಆಗಲು ಕೂಡ ಕರೆಕ್ಟ್​ ಟೈಂ ನೋಡಿದ ಹೆಚ್​.ಡಿ ರೇವಣ್ಣ!

  ಕೆ.ಆರ್​ ನಗರ ಕೇಸ್​ನಲ್ಲಿ ಎಸ್​ಐಟಿ ವಶಕ್ಕೆ ಹೆಚ್​ಡಿ ರೇವಣ್ಣ

ಮಾಜಿ ಸಚಿವ ಹೆಚ್​.ಡಿ ರೇವಣ್ಣ ಮೇಲೆ ಕೆ.ಆರ್​ ನಗರದಲ್ಲಿ ದಾಖಲಾಗಿದ್ದ ಸಂತ್ರಸ್ತೆ ಕಿಡ್ನ್ಯಾಪ್​ ಪ್ರಕರಣವು ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರಕರಣ ಸಂಬಂಧ ಜಾಮೀನು ಅರ್ಜಿ ವಿಚಾರಣೆ ಆಲಿಸಿದ ಕೋರ್ಟ್​​, ಅಂತಿಮವಾಗಿ ಅರ್ಜಿಯನ್ನ ವಜಾಗೊಳಿಸಿದೆ.

ಬೇಲ್ ಅರ್ಜಿ ವಜಾ ಆಗ್ತಿದ್ದಂತೆ ದೇವೇಗೌಡರ ಮನೆಯಲ್ಲಿ ರೇವಣ್ಣ ಇರೋದು ಪಕ್ಕಾ ಮಾಡಿಕೊಂಡ ಎಸ್​ಐಟಿ ತಂಡ ಅಲ್ಲಿಗೆ ದೌಡಾಯಿಸಿತ್ತು. ದೇವೇಗೌಡರ ನಿವಾಸದ ಮುಂದೆ ಎಸ್​ಐಟಿ ತಂಡ ಜಮಾಯಿಸಿ ಬರೋಬ್ಬರಿ ಮುಕ್ಕಾಲು ಗಂಟೆ ಕಾದ್ರು ರೇವಣ್ಣ ದರ್ಶನ ಮಾತ್ರ ಸಿಗಲಿಲ್ಲ. ಕೊನೆಗೆ ಮುಕ್ಕಾಲು ಗಂಟೆ ಕಾಯಿಸಿದ ಬಳಿಕ ತಾವೇ ಡೋರ್​ ಓಪನ್​ ಮಾಡಿ ಮನೆಯಿಂದ ಹೊರಬಂದ ರೇವಣ್ಣ, ಎಸ್​ಐಟಿ ತಂಡದ ಮುಂದೆ ಶರಣಾದರು.

ಇದನ್ನೂ ಓದಿ:ರೇವಣ್ಣ ಅರೆಸ್ಟ್​ ಬೆನ್ನಲ್ಲೇ ತಡರಾತ್ರಿ ದೇವೇಗೌಡರ ನಿವಾಸದಲ್ಲಿ ಏನೆಲ್ಲ ನಡೀತು..? ಕಂಪ್ಲೀಟ್ ಮಾಹಿತಿ..

ಅಷ್ಟಕ್ಕೂ ಈ ಮುಕ್ಕಾಲು ಗಂಟೆ ರೇವಣ್ಣ ಮಾಡಿದ್ದೇನು ಅನ್ನೋದೆ ಎಲ್ಲರಿಗೂ ಯಕ್ಷ ಪ್ರಶ್ನೆಯಾಗಿತ್ತು. ಹೇಳಿ ಕೇಳಿ ಎಲ್ಲದಕ್ಕೂ ಘಳಿಗೆ-ಮುಹೂರ್ತ ನೋಡೋ ರೇವಣ್ಣ, ಶರಣಾಗಲು ಸಹ ಮಹೂರ್ತ ಫಿಕ್ಸ್​ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಜ್ಯೋತಿಷ್ಯ ಪ್ರಕಾರ 5 ಗಂಟೆ 17 ನಿಮಿಷದಿಂದ 6 ಗಂಟೆ 50 ನಿಮಿಷದವರೆಗೆ ಇದ್ದಿದ್ದು ಕಾಲಲಗ್ನ.. ಹೀಗಾಗಿ ಸಂಜೆ 6.50ರ ಬಳಿಕ ಲಾಭಲಗ್ನ ಇರೋದ್ರಿಂದ ಅದೇ ಹೊತ್ತಿಗೆ ರೇವಣ್ಣ ಶರಣಾಗಿದ್ದಾರೆ ಅನ್ನೋ ಮಾತು ಕೇಳಿ ಬರ್ತಿದೆ.

ಸುಮಾರು 2 ಗಂಟೆಗಳ ಕಾಲ ರೇವಣ್ಣಗೆ ಮೆಡಿಕಲ್​ ಚೆಕಪ್
ಬಂಧನದ ಬಳಿಕ ಸಿಐಡಿ ಕಚೇರಿಯಿಂದ ಬೌರಿಂಗ್ ಆಸ್ಪತ್ರೆಗೆ ರೇವಣ್ಣರನ್ನ ಕರೆದೊಯ್ದ ಎಸ್​ಐಟಿ ಪೊಲೀಸರು ಮೆಡಿಕಲ್ ಚೆಕಪ್ ಮಾಡಿಸಿದ್ದಾರೆ. ಬರೋಬ್ಬರಿ 2 ಗಂಟೆ ರೇವಣ್ಣ ಆರೋಗ್ಯ ತಪಾಸಣೆ ನಡೆಸಿದ ಆರೋಗ್ಯ ಸಿಬ್ಬಂದಿ, ಬಿ.ಪಿ, ಶುಗರ್, ಯೂರಿನ್, ಬ್ಲಡ್​ ಚೆಕಪ್​ ಮಾಡಿದ್ದಾರೆ. ಈ ವೇಳೆ ರೇವಣ್ಣಗೆ ಅಧಿಕ ರಕ್ತದೊತ್ತಡ ಕಾಣಿಸಿಕೊಂಡ ಹಿನ್ನಲೆ ಮುಂಜಾಗ್ರತಾ ಕ್ರಮವಾಗಿ ಇಸಿಜಿ ಸಹ ಮಾಡಿಸಲಾಗಿದೆ.

ಇದನ್ನೂ ಓದಿ:ಪ್ರಚಾರಕ್ಕೆ ದುಡಿಲ್ಲ..! ಟಿಕೆಟ್ ವಾಪಸ್ ಕೊಟ್ಟು ಕಾಂಗ್ರೆಸ್​ಗೆ ಬಿಗ್​ ಶಾಕ್ ನೀಡಿದ ಅಭ್ಯರ್ಥಿ..!

ಮೆಡಿಕಲ್​ ಚೆಕಪ್​ ಬಳಿಕ ಸಿಐಡಿ ಕಚೇರಿಗೆ ರೇವಣ್ಣ ವಾಪಸ್​
ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್​ ಚೆಕಪ್​ ಮುಗಿಸಿದ ಬಳಿಕ ಹೆಚ್​.ಡಿ ರೇವಣ್ಣರನ್ನ ಸಿಐಡಿ ಕಚೇರಿಗೆ ವಾಪಸ್​ ಕರೆತರಲಾಯ್ತು.. ರೇವಣ್ಣಗಾಗಿ ಹೊಸ ಹಾಸಿಗೆ ಹಾಗೂ ಬೆಡ್ ಶೀಟ್ ವ್ಯವಸ್ಥೆ ಮಾಡಲಾಗಿತ್ತು. ಈವರೆಗೆ ಸುಖದ ಸುಪ್ಪತ್ತಿನಲ್ಲಿದ್ದ ರೇವಣ್ಣ, ಬಂಧನಕ್ಕೆ ಒಳಗಾಗಿ ಸಿಐಡಿ ಕಚೇರಿಯಲ್ಲೇ ರಾತ್ರಿ ಕಳೆಯುವಂತಾಯ್ತು.

ಒಟ್ನಲ್ಲಿ ರಾಜಕೀಯ ಮೇರು ಪರ್ವತದಲ್ಲಿ ಮಿರಿ ಮಿಂಚಿದ್ದ ದೊಡ್ಡಗೌಡರ ಕುಟುಂಬದ ಕುಡಿಯೊಂದು ಇಂತದೊಂದು ಪ್ರಕರಣದ ಸುಳಿಗೆ ಸಿಲುಕಿರೋದು ವಿಪರ್ಯಾಸ. ರೇವಣ್ಣ ಬಂಧನದ ಬಳಿಕ ಇಡೀ ಗೌಡರ ಕುಟುಂಬವೇ ಚಿಂತೆಗೆ ಬಿದ್ದಿದೆ. ಕುಟುಂಬದ ಗೌರವ, ಘನತೆಗೆ ಈ ಪ್ರಕರಣ ಬಹುದೊಡ್ಡ ಪೆಟ್ಟು ನೀಡಿದಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆ 45 ನಿಮಿಷ..! ಜ್ಯೋತಿಷ್ಯದ ಟೈಂ ಪ್ರಕಾರವೇ ರೇವಣ್ಣ ಎಸ್​ಐಟಿಗೆ ಶರಣು..

https://newsfirstlive.com/wp-content/uploads/2024/05/revanna3.jpg

Load More