newsfirstkannada.com

ಧೋನಿ ಉಳಿಸಿಕೊಳ್ಳಲು BCCI ಮುಂದೆ ಹಳೇ ಅಸ್ತ್ರ ಇಟ್ಟ CSK ; ಕಾವ್ಯ ಮಾರನ್ ತೀವ್ರ ವಿರೋಧ..!

Share :

Published August 3, 2024 at 2:59pm

    18ನೇ IPL ನಲ್ಲಿ ಧೋನಿ ಉಳಿಸಿಕೊಳ್ಳಲು CSK ಪಟ್ಟು..!

    'ಅನ್​​ಕ್ಯಾಪ್ಡ್​​​ ಪ್ಲೇಯರ್'​​​​ ಆಗಿ ಎಂಟ್ರಿಕೊಡ್ತಾರಾ ಮಹಿ..?

    ಈ ರೂಲ್ಸ್​ಗೆ ಹಲವು ಫ್ರಾಂಚೈಸಿಗಳ ವಿರೋಧವೇಕೆ..?

ಎಂಎಸ್ ಧೋನಿ 18ನೇ ಐಪಿಎಲ್​​ ಆಡ್ತಾರಾ, ಇಲ್ವೋ ಅನ್ನೋದು ಸಸ್ಪೆನ್ಸ್ ಆಗಿದೆ. ಚಾಂಪಿಯನ್​ ಕ್ಯಾಪ್ಟನ್​​ನ ಉಳಿಸಿಕೊಳ್ಳಲು ಸಿಎಸ್​ಕೆ ಇನ್ನಿಲ್ಲದ ಸರ್ಕಸ್​ ನಡೆಸ್ತಿದೆ. ಅದಕ್ಕಾಗಿ ಯೆಲ್ಲೋ ಆರ್ಮಿ ಹೊಸ ದಾಳ ಉರುಳಿಸಿದೆ. ಈ ದಾಳದಿಂದ ಹಲವು ಫ್ರಾಂಚೈಸಿಗಳ ಕಣ್ಣು ಕೆಂಪಾಗಿದೆ.

ಎಮ್​​​ಎಸ್ ಧೋನಿ..! ಕ್ಯಾಪ್ಟನ್ಸ್​ ಆಫ್​​ ಕ್ಯಾಪ್ಟನ್​​​. ತಂತ್ರಗಳ ನಿಪುಣ. ಈ ಜೀನಿಯಸ್ ಕ್ರಿಕೆಟರ್​​ ಐಪಿಎಲ್ ಭವಿಷ್ಯವೇನು ಅನ್ನೋದು ಎಲ್ಲರನ್ನ ಕಾಡ್ತಿದೆ. 18ನೇ ಐಪಿಎಲ್ ಸೀಸನ್​ನಲ್ಲಿ ತಲಾ ಧೋನಿ ಆಡ್ತಾರಾ ಅಥವಾ ಇಲ್ಲ ಅನ್ನೋದಕ್ಕೆ ಕ್ಲಾರಿಟಿ ಸಿಕ್ಕಿಲ್ಲ. ಆಡಬೇಕೆಂದು ಅಭಿಮಾನಿಗಳ ಭಕ್ತವರ್ಗ ಕಾಯ್ತಿದೆ. ಅತ್ತ ಸಿಎಸ್​ಕೆ ಫ್ರಾಂಚೈಸಿ ಕೂಡ ಮಾಜಿ ನಾಯಕನನ್ನ ಉಳಿಸಿಕೊಳ್ಳಲೇಕೆಂದು ನಿಶ್ಚಯಿಸಿದ್ದು, ಅದಕ್ಕಾಗಿ ಹೊಸ ಸ್ಟ್ರಾಟಜಿ ರೂಪಿಸಿದೆ.

ಇದನ್ನೂ ಓದಿ:ರೋಹಿತ್​ಗೆ ಬೇಕಿತ್ತು ಪಂತ್.. ರಾಹುಲ್​ಗೆ ಚಾನ್ಸ್​ ಸಿಕ್ಕಿರುವ ಹಿಂದಿದೆ ಓರ್ವ ಸೂತ್ರಧಾರನ ಕೈವಾಡ..!

18ನೇ IPL ನಲ್ಲಿ ಧೋನಿ ಉಳಿಸಿಕೊಳ್ಳಲು CSK ಪಟ್ಟು
ಇತ್ತೀಚೆಗಷ್ಟೇ ಮುಂಬೈನಲ್ಲಿ ಬಿಸಿಸಿಐ, ಐಪಿಎಲ್ ಫ್ರಾಂಚೈಸಿಗಳ ಜೊತೆ ಮೀಟಿಂಗ್ ನಡೆಸಿತ್ತು. ಇದೇ ಸಭೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ತಂಡ ಅನ್​​ಕ್ಯಾಪ್ಡ್ ಪ್ಲೇಯರ್​​ ರೂಲ್​​ಗೆ ಡಿಮ್ಯಾಂಡ್​ ಇಟ್ಟಿದೆ. ದಿ ಗ್ರೇಟ್​​​ ಮಾಹಿಯನ್ನ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದೆ.
ಆಟಗಾರರ ರಿಟೆನ್ಷನ್​​ನಲ್ಲಿ ಚೆನ್ನೈ ತಂಡ ಧೋನಿಯನ್ನ ಉಳಿಸಿಕೊಳ್ಳುವುದು ಕಷ್ಟ ಎಂದು ಹೇಳಲಾಗ್ತಿದೆ. ರಿಟೇನ್​ ಪ್ಲೇಯರ್ಸ್​ ಹೆಚ್ಚಳ ಡಿಮ್ಯಾಂಡ್​​ ಬಿಸಿಸಿಐ ಕೋರ್ಟ್​ನಲ್ಲಿದೆ. ಒಂದು ವೇಳೆ ನಾಲ್ಕಕ್ಕಿಂತ ಹೆಚ್ಚಿನ ಪ್ಲೇಯರ್ಸ್​ ಉಳಿಸಿಕೊಳ್ಳಲು ಬಿಸಿಸಿಐ ಅಸ್ತ್ರು ಎನ್ನದಿದ್ರೆ, ಮಾಹಿ 18ನೇ ಐಪಿಎಲ್​​ಗೆ ಗುಡ್​ಬೈ ಹೇಳಬಹುದು. ಇದರಿಂದ ಸಿಎಸ್​ಕೆ ತಂಡಕ್ಕೆ ದೊಡ್ಡ ಲಾಸ್ ಆಗಲಿದೆ. ಇದನ್ನರಿತ ಚೆನ್ನೈ ಫ್ರಾಂಚೈಸಿ ಹಳೆಯ ಅನ್​ಕ್ಯಾಪ್ಡ್ ಪ್ಲೇಯರ್​​ ರೂಲ್​ನ ಮತ್ತೆ​​​​​ ಜಾರಿಗೊಳಿಸುವಂತೆ ಬಿಸಿಸಿಐಗೆ ಮನವಿ ಮಾಡಿದೆ.

ಇದನ್ನೂ ಓದಿ:ಪಂದ್ಯಕ್ಕೆ ಅನಿರೀಕ್ಷಿತ ಟ್ವಿಸ್ಟ್​ ಕೊಟ್ಟ ಅಸಲಂಕಾ.. ಸ್ವಯಂಕೃತ ಅಪರಾಧಗಳಿಗೆ ಬೆಲೆ ತೆತ್ತ ಟೀಂ ಇಂಡಿಯಾ..!

ನಿರ್ಧಾರ ಕೈಗೊಂಡಿಲ್ಲ

ರಿಟೆನ್ಷನ್​ ಪಾಲಿಸಿ ಹೇಗಿದೆ ಅಂತ ನೋಡಬೇಕು. ನಿಯಮಗಳು ಇನ್ನೂ ಅಂತಿಮಗೊಂಡಿಲ್ಲ. ಬಳಿಕವೇ ನಾವು ತಂಡಕ್ಕಾಗಿ ಉತ್ತಮ ನಿರ್ಧಾರ ತೆಗೆದುಕೊಳ್ಳಬಹುದು. ಅದರಿಂದ ತಂಡಕ್ಕೆ ಒಳ್ಳೆದಾಗಬೇಕು ಅಷ್ಟೇ-ಎಂಎಸ್ ಧೋನಿ, ಕ್ರಿಕೆಟಿಗ

ಅನ್​​ಕ್ಯಾಪ್ಡ್ ಪ್ಲೇಯರ್ ಧೋನಿಗೆ 4 ಕೋಟಿ ರೂ..?
ಓರ್ವ ಆಟಗಾರ ಆಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಕೊಟ್ಟು 5 ಅಥವಾ ಅದಕ್ಕಿಂತ ಹೆಚ್ಚು ವರ್ಷವಾಗಿದ್ರೆ ಅವರನ್ನ ಅನ್​ಕ್ಯಾಪ್ಡ್​ ಪ್ಲೇಯರ್ ಆಗಿ ಪರಿಗಣಿಸೋ ಹಳೆ ರೂಲ್ಸ್​ ಐಪಿಎಲ್​ನಲ್ಲಿತ್ತು. ಅದನ್ನೇ ಮತ್ತೆ ಜಾರಿ ಮಾಡಬೇಕೆಂದು ಸಿಎಸ್​ಕೆ, ಬಿಸಿಸಿಐಗೆ ಮನವಿ ಮಾಡಿದೆ. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಕೊಟ್ಟು 5 ವರ್ಷವಾಗಿದೆ. ಈ ರೂಲ್ ಜಾರಿಯಾದ್ರೆ ಮಾಹಿ ಅನ್​ಕ್ಯಾಪ್ಡ್​ ಪ್ಲೇಯರ್ ಆಗಿ ಐಪಿಎಲ್​ನಲ್ಲಿ ಕಾಣಿಸಿಕೊಳ್ಳಬಹುದು. ಈ ನಿಯಮದಡಿ ಫ್ರಾಂಚೈಸಿ ಧೋನಿಗೆ 4 ಕೋಟಿ ರೂಪಾಯಿ ನೀಡಲಿದೆ ಎಂದು ವರದಿಯಾಗಿದೆ.

ಅನ್​​ಕ್ಯಾಪ್ಡ್​ ರೂಲ್​ 2008 ರಿಂದ 2021ರ ತನಕ ಜಾರಿಯಲ್ಲಿತ್ತು. ಈ ರೂಲ್​ ಪ್ರಕಾರ ಒಂದು ಫ್ರಾಂಚೈಸಿ ತಲಾ ನಾಲ್ವರು ಆಟಗಾರರನ್ನ ರಿಟೇನ್ ಮಾಡಿಕೊಳ್ಳಬಹುದಿತ್ತು. ಅದರಲ್ಲಿ ಇಬ್ಬರು ಅನ್​ಕ್ಯಾಪ್ಡ್​​ ಆಟಗಾರರನ್ನ ಉಳಿಸಿಕೊಳ್ಳುವ ಅವಕಾಶವಿತ್ತು. 2022ರ ಬಳಿಕ ಈ ರೂಲ್ಸ್​​​ ಅನ್ನ ಕೈಬಿಡಲಾಗಿದ್ದು, ಮರುಜಾರಿಗೊಳಿಸುವಂತೆ ಸಿಎಸ್​ಕೆ, ಬಿಸಿಸಿಐಗೆ ಮನವಿ ಮಾಡಿದೆ.

ಇದನ್ನೂ ಓದಿ:‘14 ಬಾಲ್​ಗೆ 1 ರನ್ ಬೇಕಿತ್ತು.. ಆದರೂ ಗೆಲ್ಲಲು ಆಗಲಿಲ್ಲ’ ರೋಹಿತ್ ಶರ್ಮಾ ಆಕ್ರೋಶ

ಹಳೇ ರೂಲ್ಸ್​ಗೆ ಹಲವು ಫ್ರಾಂಚೈಸಿಗಳು ವಿರೋಧ
ಸಿಎಸ್​ಕೆ ಏನೋ ಧೋನಿಯನ್ನ ಉಳಿಸಿಕೊಂಡೇ ತೀರಲು ಅನ್​ಕ್ಯಾಪ್ಡ್​ ಪ್ಲೇಯರ್ ರೂಲ್​ಗೆ ಡಿಮ್ಯಾಂಡ್​ ಮಾಡ್ತಿದೆ. ಇದಕ್ಕೆ ಬಹುತೇಕ ಫ್ರಾಂಚೈಸಿಗಳು ವಿರೋಧಿಸಿವೆ. ಸನ್​ರೈಸರ್ಸ್​ ಹೈದ್ರಾಬಾದ್​ ಒಡತಿ ಕಾವ್ಯ ಮಾರನ್​​ ಬಲವಾಗಿ ಖಂಡಿಸಿದ್ದು, ಆಟಗಾರರ ಹರಾಜಿನ ಮೌಲ್ಯ ಹೆಚ್ಚು ಇರುವುದರಿಂದ ಅದು ವ್ಯಕ್ತಿಯನ್ನು ಅಗೌರವಿಸಿದಂತಾಗುತ್ತೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಅನ್​​ಕ್ಯಾಪ್ಡ್ ಪ್ಲೇಯರ್ ರೂಲ್ಸ್ ಮೂಲಕ ಧೋನಿಯನ್ನ ಉಳಿಸಿಕೊಳ್ಳಲು ಸಿಎಸ್​ಕೆ ಫ್ರಾಂಚೈಸಿ ಪಟ್ಟು ಹಿಡಿದಿದೆ. ಚೆನ್ನೈನ ಈ ಹಳೇ ರೂಲ್​ ಡಿಮ್ಯಾಂಡ್​​​ಗೆ ಬಿಸಿಸಿಐ ಅಸ್ತು ಎನ್ನುತ್ತಾ ? ಮಾಹಿ ಅನ್​ಕ್ಯಾಪ್ಡ್ ಪ್ಲೇಯರ್​ ಆಗಿ 18ನೇ ಐಪಿಎಲ್​​ಗೆ ಎಂಟ್ರಿಕೊಡ್ತಾರಾ ಅನ್ನೋದನ್ನ ಕಾದು ನೋಡೋಣ.

ಇದನ್ನೂ ಓದಿ:ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಕಪ್ಪು ಪಟ್ಟಿ ಧರಿಸಿದ್ದೇಕೆ..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಧೋನಿ ಉಳಿಸಿಕೊಳ್ಳಲು BCCI ಮುಂದೆ ಹಳೇ ಅಸ್ತ್ರ ಇಟ್ಟ CSK ; ಕಾವ್ಯ ಮಾರನ್ ತೀವ್ರ ವಿರೋಧ..!

https://newsfirstlive.com/wp-content/uploads/2024/08/MS-DHONI-2.jpg

Load More