ಸಿಎಸ್​ಕೆಗೆ ಟೆನ್ಶನ್ ಕೊಟ್ಟ MS ಧೋನಿ; ತಲಾ ಸಸ್ಪೆನ್ಸ್​​ ಸೂತ್ರದ ಹಿಂದಿನ ಸೀಕ್ರೆಟ್​ ಏನು..?

author-image
Ganesh
Updated On
ಕೋಟಿ ಕೋಟಿ ಹಣ ಕಳೆದುಕೊಂಡ MS ಧೋನಿ.. ಮಾಜಿ ಕ್ಯಾಪ್ಟನ್ ಲಾಸ್ ಆಗಿದ್ದು ಹೇಗೆ?
Advertisment
  • ಧೋನಿ ಸಂಪರ್ಕಿಸಿದ ಫ್ರಾಂಚೈಸಿ.. ಸಿಕ್ಕಿಲ್ಲ ಉತ್ತರ
  • ಧೋನಿಯನ್ನ ಬಿಟ್ಟು ಮುಂದೆ ಸಾಗ್ತಿದ್ಯಾ ಸಿಎಸ್​ಕೆ..?
  • ಪಂತ್​​ ಮಿಡ್​ನೈಟ್​​ ಪೋಸ್ಟ್​ಗೂ CSKಗೂ ಲಿಂಕ್​​..?

ಐಪಿಎಲ್​ ರಿಟೈನ್ಡ್​ ಪ್ಲೇಯರ್​​ಗಳ ಅನೌನ್ಸ್​ಮೆಂಟ್​ಗೆ ಎರಡೇ ಎರಡು ವಾರಗಳು ಮಾತ್ರ ಬಾಕಿ ಉಳಿದಿವೆ. ಧೋನಿ ಐಪಿಎಲ್​ ಆಡ್ತಾರಾ? ಇಲ್ವಾ? ಅನ್ನೋ ಪ್ರಶ್ನೆ ಈಗಲೂ ಪ್ರಶ್ನೆಯಾಗೇ ಉಳಿದಿದೆ. ಒಂದೆಡೆ ಧೋನಿ ಮೌನಕ್ಕೆ ಜಾರಿದ್ರೆ, ಇನ್ನೊಂದೆಡೆ ಸಿಎಸ್​ಕೆ ಫ್ರಾಂಚೈಸಿ ಧೋನಿಯನ್ನ ಬಿಟ್ಟು ಮುಂದೆ ಸಾಗೋ ಸೂಚನೆ ನೀಡ್ತಿದೆ.

IPL ರಿಟೈನ್ಶನ್​ ಡೆಡ್​​ ಲೈನ್​ ಹತ್ತಿರವಾದಂತೆ ಕ್ರಿಕೆಟ್​ ವಲಯದ ಕುತೂಹಲ ಹೆಚ್ಚಾಗ್ತಿದೆ. ಫ್ರಾಂಚೈಸಿಗಳು ತಾವು ರಿಟೈನ್​ ಮಾಡಿಕೊಂಡ ಆಟಗಾರರ ಪಟ್ಟಿಯನ್ನು ಅನೌನ್ಸ್​ ಮಾಡಲು ಇನ್ನು ಕೇವಲ 14 ದಿನಗಳು ಮಾತ್ರ ಬಾಕಿ ಉಳಿದಿವೆ. ಈ ತಿಂಗಳ 31ರೊಳಗೆ ರಿಟೈನ್ಡ್​ ಆಟಗಾರರ ಪಟ್ಟಿಸಲ್ಲಿಸಬೇಕಿದ್ದು, ಫ್ರಾಂಚೈಸಿಗಳ ವಲಯದಲ್ಲಿ ಚಟುವಟಿಗಳು ಗರಿಗೆದರಿವೆ. 5 ಬಾರಿಯ ಚಾಂಪಿಯನ್​ ಸಿಎಸ್​ಕೆ ಫ್ರಾಂಚೈಸಿಯಲ್ಲಿ ಗೊಂದಲಗಳೇ ಬಗೆಹರಿದಿಲ್ಲ. ಧೋನಿ ಆಡ್ತಾರಾ? ಇಲ್ವಾ? ಅನ್ನೋ ಬಿಲಿಯನ್​ ಡಾಲರ್​ ಪ್ರಶ್ನೆಗೆ ಉತ್ತರವೇ ಸಿಕ್ಕಿಲ್ಲ.

ಇದನ್ನೂ ಓದಿ:ರೋಹಿತ್ ಪಡೆಗೆ ಭಾರೀ ಮುಖಭಂಗ; ಸೊನ್ನೆ ಸುತ್ತಿದ 5 ಬ್ಯಾಟ್ಸ್​ಮನ್, ಕೇವಲ 46 ರನ್​ಗೆ ಎಲ್ಲಾ ವಿಕೆಟ್ ಢಮಾರ್..!

ಧೋನಿ ಆಡ್ತಾರಾ? ಇಲ್ವಾ? CSKಗೇ ಇಲ್ಲ ಕ್ಲಾರಿಟಿ
ಐಪಿಎಲ್​ ರಿಟೈನ್ಶನ್​ ರೂಲ್ಸ್​ ರಿಲೀಸ್​ ಆದ ಬೆನ್ನಲ್ಲೇ ಧೋನಿಗಾಗಿಯೇ ಅನ್​ಕ್ಯಾಪ್ಡ್​ ರೂಲ್ಸ್​ ಜಾರಿಗೊಳಿಸಲಾಗಿದೆ ಎನ್ನಲಾಗಿತ್ತು. ರೂಲ್ಸ್​ ಜಾರಿಯಾಗಿ ಇಷ್ಟು ದಿನಗಳಾದ್ರೂ ಧೋನಿ ಆಡ್ತಾರಾ? ಇಲ್ವಾ? ಅನ್ನೋದೇ ಕನ್​ಫರ್ಮ್​ ಆಗಿಲ್ಲ. ಫ್ಯಾನ್ಸ್​ಗಲ್ಲ.. ಚೆನ್ನೈ ಸೂಪರ್​ ಕಿಂಗ್ಸ್​​​ ಫ್ರಾಂಚೈಸಿಗೂ ಈ ವಿಚಾರದಲ್ಲಿ ಕ್ಲಾರಿಟಿ ಇಲ್ಲ.

ಧೋನಿ ಸಂಪರ್ಕಿಸಿದ ಫ್ರಾಂಚೈಸಿಗೆ ಸಿಕ್ಕಿಲ್ಲ ಉತ್ತರ
ಅಸಲಿಗೆ ರಿಟೈನ್ಶನ್​ ರೂಲ್ಸ್​ ಜಾರಿಯಾದ ಬೆನ್ನಲ್ಲೇ ಸಿಎಸ್​ಕೆ ಸಿಇಒ ಕಾಶಿ ವಿಶ್ವನಾಥನ್​ ಕೂಡ ಈ ತಿಂಗಳ 2ನೇ ವಾರದಲ್ಲಿ ಚರ್ಚೆ ನಡೆಸೋದಾಗಿ ತಿಳಿಸಿದ್ರು. ಅದರಂತೆ, ಧೋನಿಯನ್ನ ಸಿಎಸ್​ಕೆ ಫ್ರಾಂಚೈಸಿ ಸಂಪರ್ಕಿಸಿದೆ. ಧೋನಿ ಈವರೆಗೂ ಯಾವುದೇ ಉತ್ತರವನ್ನೇ ನೀಡಿಲ್ಲ. ಆಡ್ತೀನಿ.. ಅಥವಾ ಆಡಲ್ಲ.. ಅನ್ನೋ ಕ್ಲಾರಿಟಿ ಧೋನಿಯಿಂದ ಬರದೇ ಸಿಎಸ್​ಕೆಗೆ ಮುಂದಿನ ನಿರ್ಧಾರ ತೆಗೆದುಕೊಳ್ಳೋಕೆ ಆಗ್ತಿಲ್ಲ. ಧೋನಿಯ ಮೌನದ ನಡೆ ಸದ್ಯ ಸಿಎಸ್​ಕೆ ಫ್ರಾಂಚೈಸಿಯನ್ನ ಗೊಂದಲಕ್ಕೆ ದೂಡಿದೆ.

ಧೋನಿಯಿಂದ ಇನ್ನೂ ಉತ್ತರ ಬಂದಿಲ್ಲ
ನಾವು ಈಗಾಗಲೇ ಧೋನಿಯನ್ನ ಸಂಪರ್ಕಿಸಿದ್ದೇವೆ. ಧೋನಿಯಿಂದ ಇನ್ನೂ ಉತ್ತರ ಬಂದಿಲ್ಲ. ಮುಂದಿನ ಸೀಸನ್​ಗೆ ಸಿದ್ಧತೆಯ ದೃಷ್ಟಿಯಿಂದ ಕೆಲವು ಚರ್ಚೆಗಳನ್ನ ನಡೆಸಬೇಕಿದೆ. ಒಮ್ಮೆ ಧೋನಿಯನ್ನ ಭೇಟಿಯಾದ ಬಳಿಕ ನಿರ್ಧಾರ ತೆಗೆದುಕೊಳ್ಳಲಿದ್ದೇವೆ. ಆಡುವ ಅಂತಿಮ ನಿರ್ಧಾರವನ್ನು ಧೋನಿಗೆ ಬಿಟ್ಟಿದ್ದೇವೆ-CSK ಅಧಿಕಾರಿ

ಇದನ್ನೂ ಓದಿ:RCB ವಿರುದ್ಧ ಸೋತಾಗ ಕೋಪದಲ್ಲಿ TV ಒಡೆದು ಹಾಕಿದ ಧೋನಿ! ಅಚ್ಚರಿಯ ಘಟನೆ ಬಿಚ್ಚಿಟ್ಟ ಪತ್ರಕರ್ತ

ಧೋನಿ ಬಿಟ್ಟು ಮುಂದೆ ಸಾಗ್ತಿದ್ಯಾ CSK?
ಕಳೆದ 2-3 ಸೀಸನ್​ಗಳ ಆರಂಭಕ್ಕೂ ಮುನ್ನ ಇದೇ ಧೋನಿಯ ಕೊನೆ ಐಪಿಎಲ್​ ಅನ್ನೋ ಟಾಕ್ಸ್​ ಕೇಳಿ ಬರ್ತಿದ್ವು. ಆಗ ಪ್ರತಿ ಸೀಸನ್​ಗೂ ಮುನ್ನ ಧೋನಿಯ ಮನವೊಲಿಕೆಗೆ ಸಿಎಸ್​ಕೆ ಫ್ರಾಂಚೈಸಿ ಮುಂದಾಗ್ತಿತ್ತು. ಪರಿಣಾಮ ಇಂಜುರಿಗೆ ತುತ್ತಾಗಿದ್ರೂ ಆ ನೋವಿನ ನಡುವೆಯೂ ಧೋನಿ ಆಡಿದ್ರು. ಈ ಬಾರಿ ಸಿಎಸ್​ಕೆ ಅಂತಿಮ ನಿರ್ಧಾರ ಧೋನಿಗೇ ಬಿಟ್ಟಿದ್ದು ಎಂದು ಹೇಳಿದೆ. ಈಗ ಮಾತ್ರವಲ್ಲ.. ಕಳೆದ IPL ಮುಕ್ತಾಯದ ಬಳಿಕ ಧೋನಿ ವಿಚಾರದಲ್ಲಿ ಸಿಎಸ್​ಕೆ ಫೈನಲ್​ ನಿರ್ಧಾರ ಧೋನಿಯದ್ದೇ ಎಂದು ಹೇಳ್ತಾನೇ ಬರ್ತಿದೆ. ಇದು ಚೆನ್ನೈ ಫ್ರಾಂಚೈಸಿ ಧೋನಿಯನ್ನ ಬಿಟ್ಟು ಮುಂದೆ ಸಾಗ್ತಿದ್ಯಾ ಎಂಬ ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ.

ಪಂತ್​​ ಮಿಡ್​ನೈಟ್​​ ಪೋಸ್ಟ್​ಗೂ CSKಗೂ ಲಿಂಕ್​?
ಒಂದೆಡೆ ಧೋನಿಯ ಐಪಿಎಲ್​ ಭವಿಷ್ಯ ಉತ್ತರ ಸಿಗದ ಪ್ರಶ್ನೆಯಾಗಿದೆ. ಇದರ ನಡುವೆ ಡೆಲ್ಲಿ ಕ್ಯಾಪಿಟಲ್ಸ್​ ಕ್ಯಾಪ್ಟನ್​ ರಿಷಭ್​ ಪಂತ್​​, ಮಿಡ್​ನೈಟ್​ ಟ್ವೀಟ್​ ಮಾಡಿ ಫ್ರಾಂಚೈಸಿ ತೊರೆಯುವ ಸೂಚನೆ ನೀಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಪಂತ್​​ ನಮ್ಮ ಮೊದಲ ರಿಟೈನ್ಶನ್ ಆಯ್ಕೆ ಮಾಲೀಕ ಪಾರ್ಥ್​ ಜಿಂದಾಲ್​ ಹೇಳಿದ್ರು. ಆ ಬಳಿಕ ಸಹ ಮಾಲೀಕ ಜಿಎಮ್​ಆರ್​ ಗ್ರೂಪ್​ನ ಕಿರಣ್​ ಕುಮಾರ್​​, ಪಂತ್​ ಜೊತೆಗೆ ರಿಟೈನ್​ಗೆ ಸಂಭಂದಿಸಿದಂತೆ ಸಭೆ ಕೂಡ ನಡೆಸಿದ್ರು. ಆ ಸಭೆ ನಡೆದ ನಡುರಾತ್ರಿಯೇ ಪಂತ್​, ಆಕ್ಷನ್​ಗೆ ಎಂಟ್ರಿ ಕೊಡೋ ಸುಳಿವು ನೀಡಿ ಟ್ವೀಟ್​ ಮಾಡಿದ್ದಾರೆ.

ರಿಷಭ್​ ಪಂತ್​ ಮೇಲೆ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಕಣ್ಣಿದೆ ಅನ್ನೋ ರೂಮರ್ಸ್​​​ ಕಳೆದ ಐಪಿಎಲ್​ ಅಂತ್ಯದಿಂದಲೂ ಇತ್ತು. ಪಂತ್​ ಇದೀಗ ಡೆಲ್ಲಿ ಕ್ಯಾಪಿಟಲ್ಸ್​ ಜೊತೆಗಿನ ಸಭೆಯ ಬೆನ್ನಲ್ಲೇ ಮಿಡ್​ ನೈಟ್​​ ಟ್ವೀಟ್ ಮಾಡಿರೋದು ಆ ರೂಮರ್ಸ್​ಗೆ ಮತ್ತಷ್ಟು ಪುಷ್ಟಿ ನೀಡಿದೆ. ಜೊತೆಗೆ ಡೆಲ್ಲಿ ತೊರೆದು ಧೋನಿ ಉತ್ತರಾಧಿಕಾರಿಯಾಗಿ ಪಂತ್​, ಚೆನ್ನೈ ಸೇರ್ಪಡೆಯಾಗ್ತಾರಾ.? ಅನ್ನೋ ಚರ್ಚೆಗಳು ಮತ್ತೆ ಆರಂಭವಾಗಿದೆ.

ಇದನ್ನೂ ಓದಿ:6 ಆಟಗಾರರ​ ರಿಟೈನ್​ಗೆ ಅನುಮತಿ.. ಧೋನಿಗೂ ಗುಡ್​ನ್ಯೂಸ್ ಕೊಟ್ಟ ಬಿಸಿಸಿಐ..!​

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment