ನಿಮ್ಮ ಫೋನ್​​ನಲ್ಲಿ ಇವರ ನಂಬರ್ ಇದೆಯಾ? ಇಲ್ಲದಿದ್ರೆ ಈಗಲೇ ಸೇವ್ ಮಾಡಿಕೊಳ್ಳಿ..

author-image
Ganesh
Updated On
6 ಗಂಟೆ ಮೊಬೈಲ್ ಬಳಸಿದ್ರೆ ಹೃದಯಕ್ಕೆ ಕುತ್ತು.. ಹಾರ್ಟ್ ಅಟ್ಯಾಕ್‌ ಬಗ್ಗೆ ಬೆಚ್ಚಿ ಬೀಳಿಸೋ ಮಾಹಿತಿ ಬಹಿರಂಗ!
Advertisment
  • ನಿಮಗಾಗಿ ಕೇಂದ್ರ ಸರ್ಕಾರ ಹೊಸ ನಂಬರ್ ನೀಡಿದೆ
  • ನಿಮ್ಮ ಸಂಕಷ್ಟಕ್ಕೆ ಸಹಾಯ ಮಾಡಲು ಹೊಸ ಐಡಿಯಾ
  • ನೀವು ಮೋಸ ಹೋದರೆ ಖಂಡಿತ ಸಹಾಯ ಆಗುತ್ತೆ

ಸೈಬರ್ ಕ್ರೈಂ ತೀವ್ರ ಗತಿಯಲ್ಲಿ ಹೆಚ್ಚುತ್ತಿದೆ. ಪಟ್ಟಣ ಮತ್ತು ಹಳ್ಳಿಗಳಲ್ಲಿರುವ ಜನರು ವಂಚನೆಗಳಿಗೆ ಬಲಿಯಾಗುತ್ತಿದ್ದಾರೆ. ಜನರ ಖಾತೆಯಲ್ಲಿರುವ ಹಣವನ್ನು ನಾನಾ ರೀತಿಯಲ್ಲಿ ತೆಗೆಯುತ್ತಿದ್ದಾರೆ. ಚೀಟಿಂಗ್ ಮೆಸ್ಸೇಜ್ ಮತ್ತು ಲಿಂಕ್‌ಗಳ ಮೂಲಕ ನಿರಂತರವಾಗಿ ಸುಲಿಗೆ ಮಾಡ್ತಿದ್ದಾರೆ.

ಕಳೆದು ಹೋದ ಹಣವನ್ನು ಹಾಗೂ ಇಂಥ ಮೋಸದಿಂದ ಹೊರಬರಲು ಅನೇಕ ಮಾರ್ಗಗಳನ್ನ ಕಂಡುಕೊಂಡರೂ ಸೂಕ್ತ ಪರಿಹಾರ ಸಿಗುತ್ತಿಲ್ಲ. ಸೈಬರ್ ಕ್ರೈಮ್ ತಪ್ಪಿಸಲು ಮತ್ತು ಕಳೆದುಹೋದ ಹಣವನ್ನು ಮರಳಿ ಪಡೆಯಲು ಮಾರ್ಗಗಳಿವೆ ಎಂದು ಸೈಬರ್ ತಜ್ಞರು ಹೇಳುತ್ತಾರೆ.

publive-image

ಸೈಬರ್ ಕ್ರೈಂನಿಂದ ಪಾರಾಗುವ ಸಂಬಂಧ ರಾಜ್ಯ ಸರ್ಕಾರದಿಂದ ಹಿಡಿದು ಕೇಂದ್ರ ಸರ್ಕಾರದವರೆಗೆ, ಬ್ಯಾಂಕ್‌ಗಳಿಂದ ಭಾರತೀಯ ರಿಸರ್ವ್‌ ಬ್ಯಾಂಕ್‌ವರೆಗೆ ಜಾಗೃತಿ ಮೂಡಿಸ್ತಿದ್ದಾರೆ. ಯಾವುದೇ ಅನಧಿಕೃತ ವಹಿವಾಟು ನಡೆದರೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ತಜ್ಞರು ಎಚ್ಚರಿಕೆ ಕೊಡ್ತಿದ್ದಾರೆ.

ಇದನ್ನೂ ಓದಿ:Scam Call: ಸೈಬರ್​ ವಂಚಕರ ಕರೆಗೆ ತಾಯಿ ಶಾಕ್​.. ಹೃದಯಾಘಾತಕ್ಕೆ ಸರ್ಕಾರಿ ಶಾಲಾ ಶಿಕ್ಷಕಿ ಸಾ*ವು

ಇದರ ಭಾಗವಾಗಿ ಸೈಬರ್ ವಂಚನೆಗಳಿಂದ ಜನರ ರಕ್ಷಿಸಲು ಭಾರತ ಸರ್ಕಾರ ಸಹಾಯವಾಣಿ ತೆರೆದಿದೆ. ಅದರ ಸಂಖ್ಯೆ 1930. ನಿಮ್ಮ ಖಾತೆಯಿಂದ ಯಾವುದೇ ಅನಧಿಕೃತ ವಹಿವಾಟು ನಡೆದರೆ ತಕ್ಷಣವೇ 1930ಕ್ಕೆ ಕರೆ ಮಾಡಬೇಕು. ನಿಮ್ಮ ದೂರಿನ ನಂತರ ವಹಿವಾಟನ್ನು ತಕ್ಷಣವೇ ತಡೆಹಿಡಿಯಲಾಗುತ್ತದೆ. ಆಗ ನಿಮ್ಮ ಹಣ ಸುರಕ್ಷಿತವಾಗಿರಿಸುತ್ತದೆ.

publive-image

ಅಂತೆಯೇ ನೀವು cybercrime.gov.in ನಲ್ಲಿ ದೂರನ್ನೂ ನೀಡಬಹುದು. UPI ಪಾವತಿಗಳಲ್ಲಿ ದೋಷಗಳು ಅಥವಾ ವಂಚನೆ ನಡೆದರೂ ಕಂಪ್ಲೆಂಟ್ ಮಾಡಬೇಕು. ಅದಕ್ಕಾಗಿಯೇ ಪ್ರತಿಯೊಬ್ಬರ ಫೋನ್‌ನಲ್ಲಿ 1930 ನಂಬರ್ ಸೇವ್ ಇರುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ:ಕಾಂಗ್ರೆಸ್​ ವಿರುದ್ಧ ರೊಚ್ಚಿಗೆದ್ದ ಅಮೀರ್ ಖಾನ್, ಸೈಬರ್ ಕ್ರೈಂ ಠಾಣೆಯಲ್ಲಿ ಕೇಸ್​ ದಾಖಲು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment