Advertisment

ಪ.ಬಂಗಾಳ ಹಾಗೂ ಒಡಿಶಾಗೆ ‘ಡಾನಾ‘ಚಂಡಮಾರುತದ ಭೀತಿ: ಹವಾಮಾನ ಇಲಾಖೆ ಹೇಳಿದ್ದೇನು ?

author-image
Gopal Kulkarni
Updated On
ಪ.ಬಂಗಾಳ ಹಾಗೂ ಒಡಿಶಾಗೆ ‘ಡಾನಾ‘ಚಂಡಮಾರುತದ ಭೀತಿ: ಹವಾಮಾನ ಇಲಾಖೆ ಹೇಳಿದ್ದೇನು ?
Advertisment
  • ಅಕ್ಟೋಬರ್ 24 ಮತ್ತು 25 ರಂದು ಬರಲಿದೆ ಡಾನಾ ಚಂಡಮಾರುತ!
  • ಒಡಿಶಾ, ಪಶ್ಚಿಮ ಬಂಗಾಳಕ್ಕೆ ಬಂದು ಅಪ್ಪಳಿಸಲಿರುವ ‘ಡಾನಾ‘!
  • ಎರಡು ರಾಜ್ಯಗಳಲ್ಲಿ ರೆಡ್​ ಅಲರ್ಟ್​, ಸ್ಥಳಕ್ಕೆ NDRF ತಂಡ ರವಾನೆ

ಅಕ್ಟೋಬರ್ 24 ಹಾಗೂ 25 ರಂದು ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಚಂಡಮಾರುತದಿಂದಾಗಿ ಭಾರೀ ಮಳೆ ಉಂಟಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಡಾನಾ ಎಂಬ ಚೆಂಡಮಾರುತ ಸೃಷ್ಟಿಯಾಗಲಿದ್ದು. ಈ ಎರಡು ರಾಜ್ಯಗಳಿಗೆ ಅಪ್ಪಳಿಸಲಿದ್ದು ಎರಡು ದಿನ ಭೀಕರ ಮಳೆಯುಂಟಾಗುವ ಸಾಧ್ಯತೆ ಇದೆಯೆಂದು ಹವಾಮಾನ ಇಲಾಖೆ ವರದಿ ಮಾಡಿದೆ. ಬಂಗಾಳಕೊಲ್ಲಿಯಲ್ಲಿ ಅಕ್ಟೋಬರ್ 22 ರಂದು ವಾಯುಭಾರ ಕುಸಿತ ಉಂಟಾಗಿ 23ಕ್ಕೆ ಡಾನಾ ಚಂಡಮಾರುತ ಸೃಷ್ಟಿಯಾಗಲಿದೆ, ಅಕ್ಟೊಬರ್ 24ಕ್ಕೆ ಒಡಿಶಾ ಹಾಗೂ ಪಶ್ಚಿಮ ಬಂಗಾಳಕ್ಕೆ ಬಂದು ಅಪ್ಪಳಿಸಲಿದೆಯೆಂದು ಹೇಳಲಾಗಿದೆ.
ಬಂಗಾಳ ಕೊಲ್ಲಿಯ ಪೂರ್ವ ಮಧ್ಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಲಿದೆ. ಅದು ಉತ್ತರದ ಅಂಡಮಾನ್ ನಿಕೋಬಾರ್​ ಸಮುದ್ರತೀರದಲ್ಲಿ ಈಗಾಗಲೇ ಸೈಕ್ಲೋನ್​ ಸೃಷ್ಟಿಯ ಪರಿಣಾಮ ಕಾಣಿಸಿಕೊಳ್ಳುತ್ತಿವೆ.ಬಂಗಾಳಕೊಲ್ಲಿಯಲ್ಲಿಯೂ ಕೂಡ ಪರಿಣಾಮಗಳು ಕಾಣಿಸುತ್ತಿವೆ ಎಂದು ಹವಾಮಾನ ಇಲಾಖೆ ಹೇಳಿದೆ.

Advertisment

ಇದನ್ನೂ ಓದಿ:ನದಿಗೆ ಉರುಳಿದ 18 ಮಕ್ಕಳಿದ್ದ ಶಾಲಾ ಬಸ್​.. ಚಾಲಕನ ನಿರ್ಲಕ್ಷವೇ ಕಾರಣ ಎಂದ ಸ್ಥಳೀಯರು

ಗಂಟೆಗೆ 15 ಕಿಲೋ ಮೀಟರ್ ವೇಗದಲ್ಲಿ ಹೊರಹೊಮ್ಮುವ ಡಾನಾ ಚಂಡಮಾರುತ ಮುಂದೆ ಆಗ್ನೇಯ ದಿಕ್ಕಿನಲ್ಲಿ ಗಂಟೆಗೆ 520 ಕಿಲೋ ಮೀಟರ್ ವೇಗದಲ್ಲಿ ಮುನ್ನುಗ್ಗಲಿದೆ. ಅಕ್ಟೋಬರ್​ 24ರಂದು ಉತ್ತರ ಒಡಿಶಾಗೆ ಬಂದು ಅಪ್ಪಳಿಸುವ ವೇಳೆ ತನ್ನ ಕಸುವು ಕಳೆದುಕೊಳ್ಳುವ ಚಂಡಮಾರತು ಗಂಟೆಗೆ 110 ರಿಂದ 120 ಕಿಲೋ ಮೀಟರ್ ವೇಗದಲ್ಲಿ ಒಡಿಶಾ ಹಾಗೂ ಪಶ್ಚಮ ಬಂಗಾಳಕ್ಕೆ ಬಂದ ಹೊಡೆಯುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆಯ ತಜ್ಞರು ಹೇಳಿದ್ದಾರೆ. ಉಭಯ ರಾಜ್ಯಗಳಲ್ಲಿ ಅಕ್ಟೋಬರ್ 24 ಮತ್ತು 25 ರಂದು 7 ರಿಂದ20 ಸೆಂಟಿಮೀಟರ್ ಮಳೆಯಾಗುವ ಸಾಧ್ಯತೆಯೂ ಕೂಡ ಇದೆ. ಹೀಗಾಗಿ ಮೀನುಗಾರರಿಗೆ ಸಮುದ್ರದತ್ತ ತೆರಳದಿರಲು ಸೂಚನೆ ನೀಡಲಾಗಿದೆ. ಎರಡು ರಾಜ್ಯಗಳಲ್ಲೂ ರೆಡ್ ಅಲರ್ಟ್​ ಘೋಷಣೆಯಾಗಿದೆ.

ಇದನ್ನೂ ಓದಿ: ಭಯ ಹುಟ್ಟಿಸಿದ ಡಾನಾ ಸೈಕ್ಲೋನ್; ನಿರಂತರ ಮಳೆಯ ನಡುವೆ ಮತ್ತೊಂದು ಎಚ್ಚರಿಕೆ..!

Advertisment

publive-image

ಹವಾಮಾನ ಇಲಾಖೆ ಹೇಳುವ ಪ್ರಕಾರ ಒಡಿಶಾದಲ್ಲಿ ಪುರಿ ಖರರ್ಧಾ, ಗಂಜಮ್, ಮಯುರ್ಬಂಜಿ, ಕಿಯೋಂಝಾರ್, ಬಲಸೋರೆ, ಭದ್ರಕ್ ಮತ್ತು ಜಗತ್​ಸಿಂಗಪುರ್​ನಲ್ಲಿ ಚಂಡಮಾರುತದ ಪರಿಣಾಮ ಭೀಕರವಾಗಿರಲಿದೆ . ಇನ್ನು ಪಶ್ಚಿಮ ಬಂಗಾಳದಲ್ಲಿ  ಕೊಲ್ಕತ್ತಾ ಪೂರ್ವ ಹಾಗೂ ಪಶ್ಚಿಮ ಮದಿನಾಪುರ್​ ಜಿಲ್ಲೆಗಳಿಗೆ ಚಂಡಮಾರುತ ಬಂದು ಅಪ್ಪಳಿಸಲಿದೆ ಎಂದು ಹೇಳಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಈಗಾಗಲೇ ಎನ್​ಡಿಆರ್​ಎಫ್​ನ 14 ಟೀಮ್​ ಪಶ್ಚಿಮ ಬಂಗಾಳಕ್ಕೆ ಹಾಗೂ 11 ಟೀಮ್ ಒಡಿಶಾಗೆ ಕಳುಹಿಸಿಕೊಡಲಾಗಿದೆ. ಚಂಡಮಾತು ಪರಿಣಾಮದಿಂದ ಸಮಸ್ಯೆಯಾಗಲಿರುವ ಗ್ರಾಮಗಳನ್ನು ಈಗಾಗಲೇ ಗುರುತಿಸಿ ಅವರಿಗಾಗಿ ಪರಿಹಾರ ಕೇಂದ್ರಗಳನ್ನು ರೆಡಿಮಾಡಿಕೊಂಡಿದ್ದು. ಜನರನ್ನು ಅಲ್ಲಿಗೆ ಸ್ಥಳಾಂತರಿಸುವ ಸಿದ್ಧತೆಯೂ ಕೂಡ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment