newsfirstkannada.com

ರೀಮಲ್ ಚಂಡಮಾರುತ ಅವಾಂತರ; ಬಿರುಗಾಳಿ ಸಮೇತ ಭಾರೀ ಮಳೆಗೆ 7 ಮಂದಿ ಸಾವು

Share :

Published May 27, 2024 at 10:23pm

    ಭಾರೀ ಮಳೆಗೆ ಸಮುದ್ರ ತೀರದ ನೂರಾರು ಮನೆಗಳು ಜಲಾವೃತ

    ಬಾಂಗ್ಲಾದೇಶ, ಪಶ್ಚಿಮ ಬಂಗಾಳ ಸೇರಿ ಈಶಾನ್ಯ ರಾಜ್ಯಗಳಲ್ಲಿ ಮಳೆ

    ಏಳು ಜಿಲ್ಲೆಗಳಲ್ಲಿ ರೆಡ್ ಅಲರ್ಟ್,11 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್

ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ರೀಮಲ್ ಚಂಡಮಾರುತ ಭಾರಿ ಅವಾಂತರಗಳನ್ನು ಸೃಷ್ಟಿಸಿದೆ. ಬಾಂಗ್ಲಾ ಕರಾವಳಿಗೆ ಅಪ್ಪಳಿಸಿರುವ ರಣಚಂಡಿ ಮಾರುತ 7 ಜನರನ್ನು ಬಲಿ ಪಡೆದಿದೆ. ಬಾಂಗ್ಲಾದೇಶ, ಪಶ್ಚಿಮ ಬಂಗಾಳ ಸೇರಿ ಈಶಾನ್ಯ ರಾಜ್ಯಗಳಲ್ಲಿ ಭಾರಿ ಮಳೆಯಾಗ್ತಿದೆ. ನದಿಗಳು ಉಕ್ಕಿದ ಹರಿದ ಪರಿಣಾಮ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ಹೀಗಾಗಿ ಅಲ್ಲಿನ ಜನಜೀವನ ತತ್ತರಗೊಂಡಿದೆ.

ಇದನ್ನೂ ಓದಿ: ‘ನಾನು ಡಿಪ್ರೆಶನ್‌ಗೆ ಹೋಗಿ ಐಸೋಲೇಷನ್‌ಗೆ ಒಳಗಾಗಿದ್ದೆ’- ಪ್ರಜ್ವಲ್​ ರೇವಣ್ಣ ವಿಡಿಯೋದಲ್ಲಿ ಹೇಳಿದ್ದೇನು?

ಪಶ್ಚಿಮ ಬಂಗಾಳದ ಸಾಗರದ್ವೀಪ ಕರಾವಳಿ ಹಾಗೂ ಬಾಂಗ್ಲಾದೇಶದ ಖೇಪಪುರ ನಡುವೆ ಅಪ್ಪಳಿಸಿರುವ ಶಕ್ತಿಶಾಲಿ ರೀಮಲ್ ಚಂಡಮಾರುತ ಚಂಡಿ ಅವತಾರ ತಾಳಿದೆ. 135 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು ಪಶ್ಚಿಮ ಬಂಗಾಳ ಹಾಗೂ ಈಶಾನ್ಯ ರಾಜ್ಯಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಧಾರಾಕಾರ ಮಳೆ ಹಾಗೂ ರಭಸದ ಗಾಳಿಯಿಂದಾಗಿ ಕರಾವಳಿ ಭಾಗಗಳಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ ಹೀಗಾಗಿ ಅಲ್ಲಿನ ಪರಿಸ್ಥಿತಿ ಅಯೋಮವಾಗಿದೆ. ಬಾಂಗ್ಲಾದೇಶದ ಸಮುದ್ರ ತೀರದ ನೂರಾರು ಮನೆಗಳು ಜಲಾವೃತಗೊಂಡಿವೆ. ಚಂಡಮಾರುತಕ್ಕೆ ಸಿಲುಕಿ 7 ಮಂದಿ ಮೃತಪಟ್ಟಿದ್ದಾರೆ.

ಮೊಂಗ್ಲಾ ಎಂಬಲ್ಲಿ ಮಗು ಸೇರಿ ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ. ವಿದ್ಯುತ್ ಕಂಬಗಳು ಧರೆಗುರುಳಿದಿದ್ದು ಲಕ್ಷಾಂತರ ಜನ ಕರೆಂಟ್ ಇಲ್ಲದೇ ಕತ್ತಲೆಯಲ್ಲೇ ಕಾಲ ಕಳೆಯುವಂತಾಗಿದೆ. ಬಾಂಗ್ಲಾದ ನೈಋತ್ಯ ಕರಾವಳಿಯ ಕೆಳ ಹಂತದ ಪ್ರದೇಶಗಳಿಂದ 8 ಲಕ್ಷಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದೆ. ಪಾತುಖಾಲಿ ತೀರದಲ್ಲಿ ಅಲೆಗಳ ಅಬ್ಬರಕ್ಕೆ ವ್ಯಕ್ತಿಯೊಬ್ಬ ಕೊಚ್ಚಿ ಹೋಗಿದ್ದು ಹಲವರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಕೋಲ್ಕತ್ತಾದಲ್ಲಿ ಭಾರಿ ವರ್ಷಧಾರೆಗೆ ಭೂಕುಸಿತ ಸಂಭವಿಸಿದೆ. ನೂರಾರು ಮರಗಳು ಧರೆಗುರುಳಿದ್ದು ಹಲವರು ಗಾಯಗೊಂಡಿದ್ದಾರೆ.

ಬೃಹತ್ ಮರಗಳು ಬಿದ್ದ ಪರಿಣಾಮ ಹಲವೆಡೆ ಮನೆಗಳು ಜಖಂ ಆಗಿವೆ. ಮತ್ತೊಂದೆಡೆ ಭಾರಿ ಮಳೆಗೆ ರಸ್ತೆಗಳು ಸಂಪೂರ್ಣ ಜಲಾವೃತವಾಗಿದೆ. ಸಂಚಾರ ಅಸ್ತವ್ಯಸ್ತಗೊಂಡಿದೆ. ಕೃಷಿ ಭೂಮಿಗಳು ಮುಳುಗಿದ್ದು ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ. ಕೋಲ್ಕತ್ತಾದ ಬಿಬೀರ್ ಬಗಾನ್ ಪ್ರದೇಶದಲ್ಲಿ ಗೋಡೆ ಕುಸಿದು 51 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಇನ್ನು, ಭಾರಿ ಮಳೆಯಿಂದ ಸುಮಾರು 300 ವಿಮಾನಗಳ ಹಾರಾಟದಲ್ಲಿ ವ್ಯತ್ಯಯಗೊಂಡಿದೆ. ಕೆಲ ವಿಮಾನ ಸಂಚಾರದಲ್ಲಿ ವಿಳಂಬವಾಗಿದ್ರೆ ಮತ್ತೆ ಕೆಲವು ವಿಮಾನಗಳ ಲ್ಯಾಂಡಿಂಗ್, ಟೇಕಾಫ್ ನಲ್ಲಿ ವಿಳಂಬ ಆಗ್ತಿದೆ. 21 ಗಂಟೆಗಳ ಬಳಿಕ ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರಬೋಸ್ ಏರ್ ಪೋರ್ಟ್​ನಲ್ಲಿ ವಿಮಾನ ಸಂಚಾರ ಆರಂಭ ಆಗಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ.

ಅಸ್ಸಾಂ ರಾಜ್ಯದಲ್ಲಿ ರೆಡ್ ಅಲರ್ಟ್ ಘೋಷಣೆ!

ಅಸ್ಸಾಂನ ಏಳು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಹಾಗೂ 11 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ನಾಳೆ ಹಾಗೂ ನಾಡಿದ್ದು ಅಸ್ಸಾಂ ಹಾಗೂ ಇತರೆ ಈಶಾನ್ಯ ರಾಜ್ಯಗಳಲ್ಲಿ ನಿರಂತರ ಮಳೆಯಾಗಲಿದೆ ಅಂತ ಐಎಂಡಿ ಎಚ್ಚರಿಸಿದೆ. ದಕ್ಷಿಣ ಅಸ್ಸಾಂ ಮತ್ತು ಮೇಘಾಲಯದಲ್ಲಿ ಗಂಟೆಗೆ 40- 50 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಪ್ರಧಾನಿ ಮೋದಿ ಚಂಡಮಾರುತದಿಂದ ತತ್ತರಿಸಿರುವ ಜನರ ನೆರವಿಗೆ ಧಾವಿಸಿದ್ದಾರೆ. ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದ್ದಾರೆ. ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆ, ಪರಿಹಾರ ಹಾಗೂ ಸೌಲಭ್ಯಗಳ ಕುರಿತು ಚರ್ಚೆ ನಡೆಸಿದ್ದಾರೆ. ಒಟ್ಟಾರೆ, ಚಂಡಮಾರುತ ಅಪ್ಪಳಿಸುವುದಕ್ಕೂ ಮುನ್ನ ಹೈಅಲರ್ಟ್ ಘೋಷಿಸಿದ್ದ ವಿಪತ್ತು ನಿರ್ವಹಣಾ ಅಧಿಕಾರಿಗಳು ಹೆಚ್ಚು ಹಾನಿ ತಪ್ಪಿಸಲು ಮುಂಜಾಗ್ರತಾ ಕ್ರಮಕೈಗೊಂಡಿದ್ದರು. ಸದ್ಯ ಚಂಡಮಾರುತ ಬಾಂಗ್ಲಾದೇಶದ ಖುಲ್ನಾದ ಕೊಯಿರಾ ಬಳಿ ನೆಲೆಗೊಂಡಿದೆ. ಸೈಕ್ಲೋನ್ ಆರ್ಭಟ ತಣ್ಣಗಾಗುತ್ತಿದ್ದು ಈಶಾನ್ಯ ಭಾಗದ ಕಡೆಗೆ ಚಲಿಸಿ ಕ್ರಮೇಣ ದುರ್ಬಲವಾಗಲಿದೆ ಅಂತ ಹವಾಮಾನ ಇಲಾಖೆ ತಿಳಿಸಿದೆ. ಆದ್ರೆ ಈಗಾಗಲೇ ಬಿದ್ದಿರುವ ಮಳೆ ಪಶ್ಚಿಮ ಬಂಗಾಳ ಕರಾವಳಿಯಾದ್ಯಂತ ವ್ಯಾಪಕ ಹಾನಿ ಸೃಷ್ಟಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೀಮಲ್ ಚಂಡಮಾರುತ ಅವಾಂತರ; ಬಿರುಗಾಳಿ ಸಮೇತ ಭಾರೀ ಮಳೆಗೆ 7 ಮಂದಿ ಸಾವು

https://newsfirstlive.com/wp-content/uploads/2024/05/asam-REMAL-CYCLONE1.jpg

Load More