/newsfirstlive-kannada/media/post_attachments/wp-content/uploads/2024/05/KOLKATHA_RAIN_2.jpg)
ಕೋಲ್ಕತ್ತಾ: ರೆಮಲ್ ಚಂಡಮಾರುತ ಪಶ್ಚಿಮ ಬಂಗಾಳ ಹಾಗೂ ಬಾಂಗ್ಲಾದೇಶದ ಕರಾವಳಿ ಭಾಗದಲ್ಲಿ ಭಾರೀ ಆತಂಕವನ್ನು ಉಂಟು ಮಾಡಿದೆ. ಭೀಕರ ಗಾಳಿ ಜೊತೆಗೆ ಮಳೆ ಬೀಳುತ್ತಿದ್ದರಿಂದ ಬಾಂಗ್ಲಾದಲ್ಲಿ ಇಬ್ಬರು ಹಾಗೂ ಕೋಲ್ಕತ್ತಾದಲ್ಲಿ 51 ವರ್ಷದ ವ್ಯಕ್ತಿ ಓರ್ವ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: KKRTC ಬಸ್- ಬೈಕ್ ಮಧ್ಯೆ ಭೀಕರ ಅಪಘಾತ.. ಸ್ಥಳದಲ್ಲೇ ಉಸಿರು ಚೆಲ್ಲಿದ ಮೂವರು ಯುವಕರು
ರೆಮಲ್ ಚಂಡಮಾರುತ ಗಂಟೆಗೆ 135 ಕಿಮೀ ವೇಗದಲ್ಲಿ ಬೀಸುತ್ತಿದ್ದು ಕೋಲ್ಕತ್ತಾ ನಗರ ಹಾಗೂ ಸುತ್ತಾಮುತ್ತಾಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ನಗರದ ರಸ್ತೆಗಳೆಲ್ಲ ಸಂಪೂರ್ಣ ಜಲಾವೃತ್ತವಾಗಿದ್ದು ಆಟೋ, ಬೈಕ್, ಕಾರು ಸೇರಿದಂತೆ ಇತರೆ ವಾಹನಗಳ ಅದೇ ನೀರಿನಲ್ಲೇ ಓಡಾಡುತ್ತಿವೆ. ರೆಮಲ್ ಚಂಡಮಾರುತ ಹೊಡೆತಕ್ಕೆ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಕೆಲವು ಕಡೆ ಭೂಕುಸಿತ ಸಂಭವಿಸಿದೆ. ಹೀಗಾಗಿ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಾದ್ಯಂತ ವಿಪತ್ತು ನಿರ್ವಹಣಾ ಅಧಿಕಾರಿಗಳು ಮತ್ತು ಭದ್ರತಾ ಪಡೆಗಳನ್ನು ಹೈ ಅಲರ್ಟ್ ಆಗಿರುವಂತೆ ಕೇಂದ್ರ ಸೂಚನೆ ನೀಡಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ:IPL ಫೈನಲ್ ಮ್ಯಾಚ್ನಲ್ಲಿ ಕ್ಯಾಮೆರಾಮೆನ್ ಆಗಿ ಕೆಲಸ ಮಾಡಿದ್ರಾ ನಟ ಸೋನ್ ಸೂದ್..?
Waterlogging witnessed in parts of West Bengal's Kolkata following heavy rain.
Visuals from Bowbazar area #CycloneRemalpic.twitter.com/VWL50xnulA— newspointJ&K (@NewspointjK)
Waterlogging witnessed in parts of West Bengal's Kolkata following heavy rain.
Visuals from Bowbazar area #CycloneRemalpic.twitter.com/VWL50xnulA— newspointJ&K (@NewspointjK) May 27, 2024
">May 27, 2024
ರೆಮಲ್ ಚಂಡಮಾರುತ ಈಗಾಗಲೇ ಸಾಕಷ್ಟು ಅವಾಂತರಗಳನ್ನು ಸೃಷ್ಟಿ ಮಾಡಿದ್ದು ಕೆಲವು ಕಡೆ ಸಂಪರ್ಕಗಳನ್ನು ಕಡಿತ ಮಾಡಲಾಗಿದೆ. ಕೋಲ್ಕತ್ತಾ ಮತ್ತು ದಕ್ಷಿಣ ಬಂಗಾಳದಲ್ಲಿ ರೈಲು ಮತ್ತು ರಸ್ತೆ ಸಾರಿಗೆಯನ್ನು ಭೀಕರ ಮಳೆ, ಗಾಳಿ ಅಡ್ಡಿಪಡಿಸಿದ್ದಾವೆ. ಪೂರ್ವ ಮತ್ತು ಆಗ್ನೇಯ ರೈಲ್ವೆ ಇಲಾಖೆಗೆ ಹಲವು ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ಹೇಳಲಾಗಿದೆ. ಕೋಲ್ಕತ್ತಾದ ಸುಭಾಸ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 21 ಗಂಟೆಗಳ ಕಾಲ ವಿಮಾನ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಇದು 394 ವಿಮಾನಗಳ ಮೇಲೆ ಪರಿಣಾಮ ಬೀರಿದೆ. ರೆಮಲ್ ಚಂಡಮಾರುತದಿಂದ ಕೋಲ್ಕತ್ತಾದ ಶ್ಯಾಮ ಪ್ರಸಾದ್ ಮುಖರ್ಜಿ ಬಂದರುನಲ್ಲಿನ ಕಾರ್ಯಾಚರಣೆಯನ್ನು ಸ್ಥಗಿತ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ