Breaking News: ಗುತ್ತಿಗೆದಾರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ ಹೃದಯಾಘಾತದಿಂದ ನಿಧನ

author-image
AS Harshith
Updated On
Breaking News: ಗುತ್ತಿಗೆದಾರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ ಹೃದಯಾಘಾತದಿಂದ ನಿಧನ
Advertisment
  • ಹೃದಯಾಘಾತದಿಂದ ಇಂದು ಬೆಳಗ್ಗೆ ಕೆಂಪಣ್ಣ ನಿಧನ
  • 84 ವರ್ಷದ ಕೆಂಪಣ್ಣ ಜ್ಯೋತಿನಗರದಲ್ಲಿ ವಾಸವಾಗಿದ್ದರು
  • ಗುತ್ತಿಗೆದಾರರ ಪರವಾಗಿ ನಿಂತಿದ್ದ ಡಿ ಕೆಂಪಣ್ಣ

ಗುತ್ತಿಗೆದಾರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ ಇಂದು ನಿಧನರಾಗಿದ್ದಾರೆ. 84 ವರ್ಷ ವಯಸ್ಸಿನ ಅವರು ಬೆಂಗಳೂರಿನ ಜೋತಿಪುರ ನಿವಾಸದಲ್ಲಿ ನಿಧರಾಗಿದ್ದಾರೆ. ಹೃದಯಾಘಾತದಿಂದ ಕೆಂಪಣ್ಣ ಕೊನೆಯುಸಿರೆಳೆದಿದ್ದಾರೆ.

ಸಂಘದ ಅಧ್ಯಕ್ಷರಾಗಿದ್ದ ಕೆಂಪಣ್ಣನವರು ಗುತ್ತಿಗೆದಾರರ ಪರವಾಗಿ ನಿಂತಿದ್ದರು. ಈ ಹಿಂದೆ ಬಿಜೆಪಿ ಸರ್ಕಾರ ವಿರುದ್ಧ 40% ಆರೋಪ ಮಾಡಿದ್ದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ವಿರುದ್ಧ ಹೋರಾಡಿದ್ದರು. ಈ ವಿಚಾರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ಬಿಜೆಪಿಗೆ ಹೊಡೆತ ನೀಡಿತ್ತು.

publive-image

ಇದನ್ನೂ ಓದಿ: ಶಿವಣ್ಣನ ಕಾಲಿಗೆ ಬಿದ್ದ ಐಶ್ವರ್ಯಾ ರೈ ಮಗಳು.. ಅಮ್ಮನಂತೆ ಎಂಥಾ ಸಂಸ್ಕಾರ ಎಂದ ಅಭಿಮಾನಿಗಳು

ಆದರೀಗ ಇವರ ಹಠಾತ್​ ಸಾವು ಗುತ್ತಿಗೆದಾರರಿಗೆ ಬೇಸರ ತರಿಸಿದೆ. ಕೆಂಪಣ್ಣ ಅವರ ಸಾವಿಗೆ ಅನೇಕರು ಕಂಬನಿ ಸುರಿಸಿದ್ದಾರೆ. ಜೊತೆಗೆ ಬೇಸರ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment