Advertisment

ಡಾಲಿಗೆ ಶಾಕ್ ಕೊಟ್ಟ ರಿಯಲ್ ಸ್ಟಾರ್ ಉಪೇಂದ್ರ.. ಕೆಂಪೇಗೌಡ ಟೈಟಲ್ ಯಾರ ಪಾಲಾಯ್ತು?

author-image
Bheemappa
Updated On
ಡಾಲಿಗೆ ಶಾಕ್ ಕೊಟ್ಟ ರಿಯಲ್ ಸ್ಟಾರ್ ಉಪೇಂದ್ರ.. ಕೆಂಪೇಗೌಡ ಟೈಟಲ್ ಯಾರ ಪಾಲಾಯ್ತು?
Advertisment
  • ಕೆಂಪೇಗೌಡ ಟೈಟಲ್ ಬಳಸದಂತೆ ಕೋರ್ಟ್​ನಲ್ಲಿ ಮನವಿ ಸಲ್ಲಿಕೆ
  • ಸತತ 1 ತಿಂಗಳ ಕಾಲ ಟೈಟಲ್​ಗಾಗಿ ನಡೆದ ಕಾನೂನು ಹೋರಾಟ
  • ಡಾಲಿ ಹಾಗೂ ಉಪ್ಪಿ ಸಿನಿಮಾ ನಡುವೆ ಬಿಗ್ ಪೈಪೋಟಿ ನಡೆದಿತ್ತು

ಕಳೆದೊಂದು ತಿಂಗಳಿಂದ ನಾಡಪ್ರಭು ಕೆಂಪೇಗೌಡರ ಟೈಟಲ್ ವಾರ್ ಜೋರಾಗಿ ನಡೀತಿತ್ತು. ನಾ ಮುಂದು, ತಾ ಮುಂದು ಅಂತಾ ಕೋರ್ಟ್ ಕದ ತಟ್ಟಿ ಹೋರಾಟಕ್ಕಿಳಿದಿದ್ರು. ಡಾಲಿ ಹಾಗೂ ಉಪ್ಪಿ ಸಿನಿಮಾ ನಡುವೆ ಪೈಪೋಟಿ ನಡೆದಿತ್ತು. ಕೋರ್ಟ್​​ ಆದೇಶದಿಂದ ಕೊನೆಗೂ ಈ ಟೈಟಲ್ ವಾರ್​ಗೆ ಬ್ರೇಕ್ ಬಿದ್ದಿದೆ.

Advertisment

ಇದನ್ನೂ ಓದಿ: ನಟ ದರ್ಶನ್ ತಾಯಿ ಮೀನಾ, ಸಹೋದರ ದಿನಕರ ಜೈಲಿಗೆ ಭೇಟಿ.. ಮಗನ ಸಂಕಟ ನೋಡಿ ಅಮ್ಮ ಭಾವುಕ..

ಎಲ್ಲಾ ಅಂದ್ಕೊಂಡಂತೆ ಆಗಿದ್ರೆ, ಈ ವಾರ ನಾಡಪ್ರಭು ಕೆಂಪೇಗೌಡರ ಜಯಂತಿಗೆ‌‌ ಸ್ಪೆಷಲ್ ಸುದ್ದಿಯೊಂದು ಹೊರ ಬರಬೇಕಿತ್ತು. ದಶಕದಿಂದ ಕನಸಾಗೇ ಉಳಿದಿದ್ದ ಕೆಂಪೇಗೌಡರ ಇತಿಹಾಸ ಆಧಾರಿತ ಸಿನಿಮಾವೊಂದರ ಮುಹೂರ್ತ ಆಗ್ಬೇಕಿತ್ತು. ಆದ್ರೆ 2 ತಂಡಗಳ ಟೈಟಲ್ ವಾರ್​ನಿಂದ ಕೆಂಪೇಗೌಡರ ಹೆಸರು ಕೋರ್ಟ್ ಮೆಟ್ಟಿಲು ಹತ್ತುವಂತಾಯ್ತು.

ಇದನ್ನೂ ಓದಿ: ರೋಹಿತ್ ಶರ್ಮಾ ಟೀಮ್​ ಬಗ್ಗೆ KL ರಾಹುಲ್ ಏನಂದ್ರು..? ವಿಶ್ವಕಪ್ ಗೆಲುವಿನ ಬಗ್ಗೆ ಕನ್ನಡಿಗನ ಮನದ ಮಾತುಗಳು

Advertisment

publive-image

ಒಂದೆಡೆ ಡಾಲಿ ಧನಂಜಯ್ ಹಾಗೂ ಕಿರಣ್ ತೋಟಂಬೈಲು ಕಾಂಬಿನೇಷನ್​ನ ನಾಡಪ್ರಭು ಕೆಂಪೇಗೌಡ ಸಿನಿಮಾ, ಇನ್ನೊಂದೆಡೆ, ಉಪ್ಪೇಂದ್ರ ಹಾಗೂ ಟಿ.ಎಸ್ ನಾಗಭರಣ್ ಕಾಂಬಿನೇಷನ್​ನ ಧರ್ಮಬೀರು ನಾಡಪ್ರಭು ಕೆಂಪೇಗೌಡ ನಡುವೆ ಶುರುವಾಗಿದ್ದ ಟೈಟಲ್ ವಾರ್ ಕೋರ್ಟ್​ನಲ್ಲಿ ಫುಲ್​ಸ್ಟಾಪ್ ಬಿದ್ದಿದೆ.

‘ಕೆಂಪೇಗೌಡ’ ಟೈಟಲ್ ವಾರ್

  • ಟಿ.ಎಸ್.ನಾಗಾಭರಣ್​ರಿಂದ ನಾಡಪ್ರಭು ಕೆಂಪೇಗೌಡ ಸಿನಿಮಾ
  • ಈ ಬೆನ್ನಲ್ಲೇ ಧರ್ಮಬೀರು ನಾಡಪ್ರಭು ಕೆಂಪೇಗೌಡ ಅನೌನ್ಸ್​​
  • ಕೋರ್ಟ್ ಮೂಲಕ ತಡೆಯಾಜ್ಞೆ ತಂದಿದ್ದ ಟಿ.ಎಸ್.ನಾಗಾಭರಣ್
  • ಕೆಂಪೇಗೌಡ ಟೈಟಲ್ ಬಳಸದಂತೆ ಕೋರ್ಟ್​ನಲ್ಲಿ ಮನವಿ ಸಲ್ಲಿಕೆ
  • ಈ ಬೆನ್ನಲ್ಲೇ ಇನ್ನೊಂದು ಚಿತ್ರತಂಡದಿಂದಲೂ ಕಾನೂನು ಹೋರಾಟ
  • ಸತತ ಒಂದು ತಿಂಗಳ ಕಾಲ ನಡೆದ ಕಾನೂನು ಹೋರಾಟ
  • ಧರ್ಮಬೀರು ನಾಡಪ್ರಭು ಕೆಂಪೇಗೌಡ ಟೈಟಲ್ ಕಿರಣ್ ಪಾಲು
  • ಕಿರಣ್ ತೋಟಂಬೈಲುಗೆ ಜಯ, ನಾಗಾಭರಣ್ ಹಿನ್ನೆಡೆ

ಇದನ್ನೂ ಓದಿ: ರಾತ್ರಿ ಅಂತ್ಯಸಂಸ್ಕಾರ ಮಾಡಿದ್ದ ಮಗುವಿನ ಮೃತದೇಹ.. ಬೆಳಗ್ಗೆ ಉಯ್ಯಾಲೆಯಲ್ಲಿ ಪ್ರತ್ಯಕ್ಷ..! ಗಾಬರಿಬಿದ್ದ ಜನ

Advertisment

publive-image

ರಿಜಿಸ್ಟರ್ ಮಾಡಬೇಕು ಅಂದರೆ ಅದಕ್ಕೆ ಕಾಪಿರೈಟ್ಸ್​ ಮಾಡಿಸಬೇಕು. ಕಾಪಿರೈಟ್ಸ್​ ಮಾಡಿಸಿ ಸರ್ಕಾರದ ಪ್ರಕಾರ ಆಗುತ್ತದೆ. ಬಟ್ ನಾಡಪ್ರಭು ಕಂಪೇಗೌಡ ತೆಗೆದುಕೊಂಡರೆ ಕಾಪಿರೈಟ್ಸ್​​ಗೆ ಬರಲ್ಲ. ಕೆಲವು ಹೆಸರುಗಳು ಕಾಪಿರೈಟ್ಸ್​ಗೆ ಬರಲ್ಲ. ಮೋದಿ, ಗಾಂಧಿ, ಕಂಪೇಗೌಡರು ಈ ಹೆಸರುಗಳು ಕಾಪಿರೈಟ್ಸ್​ಗೆ ಬರಲ್ಲ. ಆದರೆ ನಾಗಭರಣ ಅವರು ಇದನ್ನ ಕಾಪಿರೈಟ್ಸ್ ಮಾಡಿಸಿದ್ದೀನಿ. ಇವರು ಆ ಹೆಸರಲ್ಲಿ ಸಿನಿಮಾ ಮಾಡ್ತಿದ್ದಾರೆ ಎಂದು ಸುಳ್ಳು ಡಿಕ್ಲೇರೆಷನ್ ಕೊಟ್ಟು ಕೋರ್ಟ್​ಗೆ ಹೋಗಿದ್ದರು. ಇದರಿಂದ ಕೋರ್ಟ್​ ಸಮಯ, ನಮ್ಮ ಸಮಯ ಎಲ್ಲ ವ್ಯರ್ಥ ಆಯಿತು. ನನ್ನ ಹಣ ಹಾಳಾಯಿತು. ಹಂಗಾಗಿ ಅವರ ಮೇಲೆ ಪೊಲೀಸ್ ಕಂಪ್ಲೇಟ್​ ಫೈಲ್ ಮಾಡಿದ್ದೀವಿ.

ಕಿರಣ್ ತೋಟಂಬೈಲು, ನಿರ್ಮಾಪಕ

ಉಳಿದಂತೆ ಇತ್ತೀಚೆಗಷ್ಟೇ ಡಾಲಿ ನಾಯಕತ್ವದಲ್ಲಿ ಟಿ.ಎಸ್.ನಾಗಾಭರಣ ನಾಡಪ್ರಭು ಕೆಂಪೇಗೌಡದ ಥೀಮ್ ಪೋಸ್ಟರ್ ರಿಲೀಸ್ ಮಾಡಿದ್ದು, ಇತ್ತ ಕಿರಣ್ ಅಂಡ್ ಟೀಂ ಕೂಡ ಉಪ್ಪಿ ನಾಯಕತ್ವದಲ್ಲಿ ಸಿನಿಮಾ ಮಾಡಲು ತುದಿಗಾಲಲ್ಲಿ ನಿಂತಿದೆ. ಸದ್ಯದ ಮಟ್ಟಿಗೆ ನಾಡಪ್ರಭು ಕೆಂಪೇಗೌಡ ಟೈಟಲ್ ವಾರ್ ಕೊಂಚ ತಣ್ಣಗಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment