Advertisment

ಬಸವಣ್ಣನ ನಾಡಲ್ಲೇ ಅಸ್ಪೃಶ್ಯತೆ ಜೀವಂತ! ದೇಗುಲ ಪ್ರವೇಶಿಸಿದ ದಲಿತ ಯುವಕನಿಗೆ ಕಂಬಕ್ಕೆ ಕಟ್ಟಿ ಥಳಿತ

author-image
AS Harshith
Updated On
ಬಸವಣ್ಣನ ನಾಡಲ್ಲೇ ಅಸ್ಪೃಶ್ಯತೆ ಜೀವಂತ! ದೇಗುಲ ಪ್ರವೇಶಿಸಿದ ದಲಿತ ಯುವಕನಿಗೆ ಕಂಬಕ್ಕೆ ಕಟ್ಟಿ ಥಳಿತ
Advertisment
  • ಇಡೀ ಸಮುದಾಯಕ್ಕೆ ಬಹಿಷ್ಕಾರ ಹಾಕಿರುವ ಗ್ರಾಮಸ್ಥರು
  • ಅವಮಾನ ಮಾಡಿದ ಗ್ರಾಮದ 18 ಜನರ ವಿರುದ್ಧ ಕೇಸ್
  • ಬಸವಣ್ಣನ ನಾಡಿನಲ್ಲಿ ಅನಿಷ್ಟ ಪದ್ಧತಿಗಳು ಇನ್ನೂ ಜೀವಂತ

ಸ್ವಾತಂತ್ರ್ಯ ಬಂದು 75 ವರ್ಷವೇ ಕಳೆದರೂ ಈ ಅನಿಷ್ಠ ಪದ್ಧತಿಗೆ ಕಡಿವಾಣ ಬೀಳ್ತಿಲ್ಲ. ಸಾಮಾಜಿಕ ಕ್ರಾಂತಿ ಮೊಳಗಿದ್ರೂ, ಕಾನೂನು ಮೂಲಕ ಕಟ್ಟಿ ಹಾಕಿದ್ರೂ ಮೇಲು-ಕೀಳು ಕೊನೆ ಆಗ್ತಿಲ್ಲ. ದಲಿತ ಸಮುದಾಯದ ವ್ಯಕ್ತಿಯೊಬ್ಬ ದೇವಸ್ಥಾನದ ಬಳಿ ಬಂದ ಅನ್ನೋ ಒಂದೇ ಕಾರಣಕ್ಕೆ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಲಾಗಿದೆ. ಗ್ರಾಮದಿಂದ ದಲಿತ ಸಮುದಾಯವನ್ನೇ ಬಹಿಷ್ಕಾರ ಹಾಕಲಾಗಿದೆ.

Advertisment

ಜಾತಿ.. ಜಾತಿ.. ಜಾತಿ. ಅದೇನ್​ ಬಡ್ಕೋತಾರೋ ಏನೋ? ದುರಂತ ನೋಡಿ, ಸಾಮಾಜಿಕ ಕ್ರಾಂತಿಯ ಮುನ್ನುಡಿ ಬರೆದ ವಿಶ್ವಗುರು ಬಸವಣ್ಣನ ನಾಡಲ್ಲೇ ಅಸ್ಪೃಷ್ಯತೆ ಜೀವಂತವಾಗಿದೆ. ವಿಚಿತ್ರ ಅಂದ್ರೆ ಸಮಾಜವಾದಿ ಸಿದ್ದು ಪ್ರತಿನಿಧಿಸಿದ್ದ ಬಾದಾಮಿಯಲ್ಲಿ ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆ ನಡೆದಿದೆ.

publive-image

ಇದನ್ನೂ ಓದಿ: ಜೀವಬೆದರಿಕೆ, ಜಾತಿನಿಂದನೆ? 36 ಲಕ್ಷ ಹಣಕ್ಕೆ ಬೇಡಿಕೆ? ಮುನಿರತ್ನಗೆ ಮುಕ್ತಿ ಸಿಗೋದು ಕಷ್ಟವೇ?

ಬಾದಾಮಿ ತಾಲೂಕಿನ ಉಗಲವಾಟ ಗ್ರಾಮದಲ್ಲಿ ಘಟನೆ ನಡೆದಿದೆ. ಅರ್ಜುನ್ ಮಾದರ ಎಂಬಾತನನ್ನು ಕಂಬಕ್ಕೆ ಕಟ್ಟಿದ್ದಾರೆ. ಈತ ಗ್ರಾಮದ ದೇವಸ್ಥಾನ ಪ್ರವೇಶ ಮಾಡಿದ ಅನ್ನೋ ಕಾರಣಕ್ಕೆ ವಿದ್ಯುತ್ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಲಾಗಿದೆ. ಇದಷ್ಟೇ ಅಲ್ಲ, ಇಡೀ ದಲಿತ ಸಮುದಾಯವನ್ನ ಗ್ರಾಮದಿಂದ ಬಹಿಷ್ಕಾರ ಹಾಕಿ ಡಂಗೂರ ಸಾರಿಸಿದ್ದಾರೆ.

Advertisment

ಇದನ್ನೂ ಓದಿ: ಪ್ಯಾಕೆಟ್‌ ಆಹಾರ ಪದಾರ್ಥಗಳನ್ನು ಬಳಸೋ ಮುನ್ನ ಎಚ್ಚರ! EXPIRY DATE ಮೀರಿದ್ರೆ ಏನಾಗುತ್ತೆ ಗೊತ್ತಾ?

publive-image

ಸೆಪ್ಟೆಂಬರ್ 10ರಂದು ನಡೆದ ಈ ಘಟನೆ, ದಲಿತ ಸಂಘಟನೆಗಳನ್ನ ಕೆರಳಿಸಿದೆ. ಗ್ರಾಮಕ್ಕೆ ಭೇಟಿ ನೀಡಿ ಬಳಿಕ ಕೆರೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿವೆ. ಗ್ರಾಮದ 18 ಜನರ ವಿರುದ್ಧ FIR ದಾಖಲಾಗಿದೆ..

ಇನ್ನು, ಅಮಾನವೀಯ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬಾಗಲಕೋಟೆ ಎಸ್ಪಿ ಅಮರನಾಥ ರೆಡ್ಡಿ ಸೇರಿ ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದಾರೆ.

Advertisment

ಕುಲದಲ್ಲಿ ಕೀಳ್ಯಾವುದೋ, ಮತದಲ್ಲಿ ಮೇಲ್ಯಾವುದೋ ಅಂತ ಸಂದೇಶ ಕೊಟ್ಟ ಈ ನಾಡಿನಲ್ಲಿ ಅನಿಷ್ಟ ಪದ್ಧತಿಗಳು ಇನ್ನೂ ಜೀವಂತ ಇರೋದು ದುರಂತ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment