newsfirstkannada.com

×

ಪ್ಯಾಕೆಟ್‌ ಆಹಾರ ಪದಾರ್ಥಗಳನ್ನು ಬಳಸೋ ಮುನ್ನ ಎಚ್ಚರ! EXPIRY DATE ಮೀರಿದ್ರೆ ಏನಾಗುತ್ತೆ ಗೊತ್ತಾ?

Share :

Published September 15, 2024 at 6:17am

Update September 15, 2024 at 6:11am

    ಪಾಕೆಟ್​ ಮೇಲಿನ ದಿನಾಂಕ ಮುಗಿದರೂ ಹಾಗೇ ಯೂಸ್​ ಮಾಡ್ತಿದ್ದೀರಾ?

    ಖರೀದಿಸಿದ ವಸ್ತುಗಳನ್ನು ಹಲವು ದಿನ ನಿಮ್ಮ ಮನೆಯಲ್ಲಿಯೇ ಇಟ್ಟಿದ್ದೀರಾ?

    ಯಾವ ವಸ್ತುಗಳನ್ನು ಬಳಸಬೇಕು, ಹಾಗೆ ಆ ವಸ್ತು ಬಳಸಿದ್ರೆ ಏನಾಗಬಹುದು!

ಮಾರುಕಟ್ಟೆಯಲ್ಲಿ ಜನ ಆಹಾರ, ಔಷಧಿ ಸೇರಿ ಸಾಕಷ್ಟು ವಸ್ತುಗಳನ್ನು ಖರೀದಿಸುತ್ತಾರೆ. ಜೊತೆಗೆ ಅದರ ಮುಕ್ತಾಯದ ದಿನಾಂಕ ಪರಿಶೀಲಿಸುತ್ತಾರೆ. ಆ ವಸ್ತುವಿನ ಮುಕ್ತಾಯ ದಿನಾಂಕ ಮುಗಿದಿದ್ದರೆ ಅಥವಾ ಮುಕ್ತಾಯದ ದಿನಾಂಕ ಹತ್ತಿರದಲ್ಲಿದ್ದರೆ ಸಾಮಾನ್ಯವಾಗಿ ಆ ವಸ್ತುಗಳನ್ನು ಖರೀದಿಸುವುದಿಲ್ಲ. ಹಾಗೇ ಖರೀದಿಸಿದ ವಸ್ತುಗಳನ್ನು ಹಲವು ದಿನ ಮನೆಯಲ್ಲಿಯೇ ಇಟ್ಟಿರುತ್ತಾರೆ. ಆಗ ಅದರ ಮುಕ್ತಾಯ ದಿನಾಂಕ ಮುಗಿದು ಹೋಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಸಾಕಷ್ಟು ಮಂದಿ ಆ ವಸ್ತು ಬಳಸಬೇಕೋ ಅಥವಾ ಬಿಸಾಡಬೇಕೋ ಎಂಬ ಬಗ್ಗೆ ಗೊಂದಲಕ್ಕೆ ಒಳಗಾಗುತ್ತಾರೆ.

ಇದನ್ನೂ ಓದಿ: ಹೃದಯಾಘಾತದಿಂದ ಅಸುನೀಗಿದ ವಿಶ್ವದ ದೈತ್ಯ ಬಾಡಿಬಿಲ್ಡರ್​; ಇಂತಹ ಅಪಾಯ ಇವರಲ್ಲಿಯೇ ಹೆಚ್ಚು ಕಾಣ್ತಿರೋದೇಕೆ..?

ವಸ್ತುವಿನ ಉತ್ಪನ್ನದ ಮುಕ್ತಾಯ ದಿನಾಂಕ ಅವಧಿ ಮುಗಿದ ನಂತರವೂ, ಆ ವಸ್ತು ಬಳಸಿದ್ರೆ ಆರೋಗ್ಯಕ್ಕೆ ಹಾನಿಕಾರಕವಾಗಲ್ಲ ಎಂಬುವುದನ್ನು ಜನ ಸಾಮಾನ್ಯ ನಂಬಿದ್ದಾರೆ. ಔಷಧಿ, ಆಹಾರ ಉತ್ಪಾದನೆಯಲ್ಲಿ ಸುರಕ್ಷತೆಗಿಂತ ಗುಣಮಟ್ಟದ ಆಧಾರದ ಮೇಲೆ ಮುಕ್ತಾಯ ದಿನಾಂಕ ನಿರ್ಧರಿಸಲಾಗುತ್ತದೆ. ಉದಾಹರಣೆಗೆ, ಚಿಪ್ಸ್ ಅಥವಾ ಬಿಸ್ಕತ್ತುಗಳು ಸ್ವಲ್ಪ ಸಮಯದ ನಂತರ ತಾಜಾ ಉಳಿಯದೇ ಇರಬಹುದು. ಆದರೆ ಅವುಗಳನ್ನು ತಿಂದರೆ ನಿಮ್ಮ ಆರೋಗ್ಯಕ್ಕೆ ಹಾನಿಕರ ಎಂಬುದು ಅರ್ಥವಲ್ಲ. ಆದರೂ ಆ ಉತ್ಪನ್ನ ಹಾಲು ಅಥವಾ ಮಾಂಸ ಆಗಿದ್ದರೆ, ಅದು ಬೇಗನೆ ಹಾಳಾಗಬಹುದು. ಈ ವಸ್ತುಗಳಲ್ಲಿ ಬ್ಯಾಕ್ಟೀರಿಯಾಗಳು ವೇಗವಾಗಿ ಬೆಳೆಯುತ್ತವೆ. ಹಾಗಾಗಿ ಅವುಗಳ ಮುಕ್ತಾಯ ದಿನಾಂಕ ಅದಕ್ಕೆ ಅನುಗುಣವಾಗಿ ಇಟ್ಟಿರುತ್ತಾರೆ.

ಕ್ಲಿನಿಕಲ್ ಡಯೆಟಿಷಿಯನ್​ಗಳ ಪ್ರಕಾರ, ಭಾರತದಲ್ಲಿ ಜನ ಸಾಮಾನ್ಯವಾಗಿ ಮುಕ್ತಾಯ ದಿನಾಂಕ ಗಮನದಲ್ಲಿಟ್ಟುಕೊಳ್ಳದೇ ಗೋಧಿ ಹಿಟ್ಟು, ರವೆ ಬೇರೆ ಕೆಲವು ಆಹಾರ ಪದಾರ್ಥ ಬಳಸುತ್ತಾರೆ. ದ್ವಿದಳ ಧಾನ್ಯಗಳು,ಅಕ್ಕಿಯಂತಹ ಕೊಳೆಯದ ಆಹಾರ ಪದಾರ್ಥಗಳನ್ನು ಒಣ, ಗಾಳಿ ಕೊಠಡಿಗಳಲ್ಲಿ ಇರಿಸಿದರೆ, ಅವು ಮುಕ್ತಾಯ ದಿನಾಂಕದ ನಂತರವೂ ಉತ್ತಮ ಸ್ಥಿತಿಯಲ್ಲಿ ಉಳಿಯಬಹುದು. ಬೀಜ, ಎಣ್ಣೆಕಾಳುಗಳು ಮತ್ತು ರವೆಗಳಂತಹ ವಸ್ತುಗಳನ್ನು ರೆಫ್ರಿಜರೇಟರ್‌ನಲ್ಲಿ ಇಡುವುದರಿಂದ ಅವುಗಳ ಜೀವಿತಾವಧಿ ಸಹ ಹೆಚ್ಚಾಗುತ್ತದೆ. ಮಸಾಲೆಗಳ ಬಗ್ಗೆ ಹೇಳುವುದಾದರೆ ಅವು ವರ್ಷಗಳವರೆಗೆ ಹಾಳಾಗುವುದಿಲ್ಲ. ಆದರೆ ಅದೇ ಔಷಧಿ ವಿಚಾರಕ್ಕೆ ಬರುವುದಾದರೆ ಮುಕ್ತಾಯದ ದಿನಾಂಕದ ನಂತರ ಔಷಧಿ ಬಳಸುವುದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಯಾವುದಾದರೂ ವಸ್ತು ಅದರ ಮುಕ್ತಾಯ ದಿನಾಂಕ ಮೀರಿದ್ದರೆ, ಮೊದಲು ಅದರ ವಾಸನೆ, ರುಚಿಯನ್ನು ಸಂಪೂರ್ಣವಾಗಿ ಪರೀಕ್ಷಿಸಬೇಕು. ವಸ್ತುವು ಯಾವ ಸ್ಥಿತಿಯಲ್ಲಿದೆ ಎಂಬುದನ್ನು ನೋಡಬೇಕು.

ಯಾವುದೇ ವಸ್ತುವಿನ ಅವಧಿಯನ್ನು ತಯಾರಕರು ಪರೀಕ್ಷೆ, ಪ್ರಯೋಗಗಳನ್ನು ಮಾಡಿಯೇ ನಿರ್ಧರಿಸುತ್ತಾರೆ. ಈ ಪರೀಕ್ಷೆಗಳ ಆಧಾರದ ಮೇಲೆ ಮುಕ್ತಾಯ ದಿನಾಂಕವನ್ನು ನಿರ್ಧರಿಸಲಾಗುತ್ತದೆ. ಆದ್ದರಿಂದ ಉತ್ಪನ್ನವು ಬಳಕೆಗೆ ಸುರಕ್ಷಿತವಾಗಿರುತ್ತದೆ ಮತ್ತು ಮುಕ್ತಾಯ ದಿನಾಂಕದವರೆಗೆ ಉತ್ತಮ ಗುಣಮಟ್ಟದ್ದಾಗಿರುತ್ತದೆ ಎಂದು ಖಚಿತಪಡಿಸಿಕೊಳ್ಳಬಹುದು. ಅವಧಿ ಮುಗಿದ ನಂತರವೂ ಕೆಲವು ಆಹಾರ ಪದಾರ್ಥಗಳು ಉತ್ತಮವಾಗಿ ಕಂಡುಬಂದರೆ, ವಸ್ತುವು ಹಾಳಾಗದಿದ್ದರೆ, ಅದನ್ನು ತಿನ್ನಬಹುದು. ಆದರೂ ಯಾವುದೇ ವಸ್ತುವನ್ನು ಅದರ ಮುಕ್ತಾಯ ದಿನಾಂಕದ ನಂತರ ಬಳಸಬೇಕೆ ಅಥವಾ ಬೇಡವೇ ಎಂಬುದು ನಿಮಗೆ ಬಿಟ್ಟಿದ್ದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ಯಾಕೆಟ್‌ ಆಹಾರ ಪದಾರ್ಥಗಳನ್ನು ಬಳಸೋ ಮುನ್ನ ಎಚ್ಚರ! EXPIRY DATE ಮೀರಿದ್ರೆ ಏನಾಗುತ್ತೆ ಗೊತ್ತಾ?

https://newsfirstlive.com/wp-content/uploads/2024/09/food2-1.jpg

Load More