/newsfirstlive-kannada/media/post_attachments/wp-content/uploads/2024/10/DANA-CYCLONE-2.jpg)
ಡಾನಾ ಚಂಡಮಾರುತವು ತಡರಾತ್ರಿ ಒಡಿಶಾ ಕರಾವಳಿಗೆ ಬಂದು ಅಪ್ಪಳಿಸಿದೆ. ಹವಾಮಾನ ಇಲಾಖೆ ಪ್ರಕಾರ, ಡಾನಾ ಚಂಡ ಮಾರುತದ ತೀವ್ರತೆಯು ಮತ್ತಷ್ಟು ಮುಂದುವರಿಯಲಿದ್ದು, ಆತಂಕ ಶುರುವಾಗಿದೆ.
ಗಂಟೆಗೆ 120 ಕಿಲೋ ಮೀಟರ್​ ವೇಗದಲ್ಲಿ ಒಡಿಶಾದ ಧಮ್ರಾ ಮತ್ತು ಬಿತರ್ಕಾನಿಕಾ ಬಳಿ ಲ್ಯಾಂಡ್​ಫಾಲ್ ಆಗಿದೆ. ಪರಿಣಾಮ ಒಡಿಶಾ ಮತ್ತು ಬಂಗಾಳದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುತ್ತಿದೆ. ಜೋರಾದ ಗಾಳಿಗೆ ಹಲವು ಮರಗಳು ಬಿದ್ದಿರುವ ಬಗ್ಗೆ ವರದಿಯಾಗಿದೆ. ರಕ್ಷಣೆಗೆ ಎನ್​ಡಿಆರ್​ಎಫ್ ಪಡೆಗಳು ಅಲರ್ಟ್​ ಆಗಿವೆ. ಭುವನೇಶ್ವರ, ಕೋಲ್ಕತ್ತ ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿವೆ.
ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ನೀಡಿರುವ ಮಾಹಿತಿ ಪ್ರಕಾರ, ಇಲ್ಲಿಯವರೆಗೆ ಸುಮಾರು 5.84 ಲಕ್ಷ ಮಂದಿಯನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿ, ಆಶ್ರಯ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಸೈಕ್ಲೋನ್ ಧಮ್ರಾದಿಂದ ಉತ್ತರಕ್ಕೆ 15 ಕಿಲೋ ಮೀಟರ್ ಮತ್ತು ಬಿತರ್ಕಾನಿಕಾದಿಂದ 30 ಕಿಲೋ ಮೀಟರ್​ ವಾಯುವ್ಯಕ್ಕೆ ಇದೆ ಎಂದು ಐಎಂಡಿ ನಿರ್ದೇಶಕಿ ಮನೋರಮಾ ತಿಳಿಸಿದ್ದಾರೆ. ಗಾಳಿಯ ವೇಗವು 100-110 ಕಿಲೋ ಮೀಟರ್ ವೇಗ ಇರೋದ್ರಿಂದ ಭೂಕುಸಿತ ಪ್ರಕರಣ ಹೆಚ್ಚಾಗಲಿದೆ. ಈ ಚಂಡಮಾರುತವು ಭೂಕುಸಿತವನ್ನು ಹೆಚ್ಚಿಸಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಪ.ಬಂಗಾಳ ಹಾಗೂ ಒಡಿಶಾಗೆ ‘ಡಾನಾ‘ಚಂಡಮಾರುತದ ಭೀತಿ: ಹವಾಮಾನ ಇಲಾಖೆ ಹೇಳಿದ್ದೇನು ?
/newsfirstlive-kannada/media/post_attachments/wp-content/uploads/2024/10/DANA-CYCLONE.jpg)
ಹವಾಮಾನ ಇಲಾಖೆ ಹೇಳುವ ಪ್ರಕಾರ ಒಡಿಶಾದಲ್ಲಿ ಪುರಿ ಖರರ್ಧಾ, ಗಂಜಮ್, ಮಯುರ್ಬಂಜಿ, ಕಿಯೋಂಝಾರ್, ಬಲಸೋರೆ, ಭದ್ರಕ್ ಮತ್ತು ಜಗತ್​ಸಿಂಗಪುರ್​ನಲ್ಲಿ ಚಂಡಮಾರುತದ ಪರಿಣಾಮ ಭೀಕರವಾಗಿರಲಿದೆ. ಪಶ್ಚಿಮ ಬಂಗಾಳದಲ್ಲಿ ಕೊಲ್ಕತ್ತಾ ಪೂರ್ವ ಹಾಗೂ ಪಶ್ಚಿಮ ಮದಿನಾಪುರ್​ ಜಿಲ್ಲೆಗಳಿಗೆ ಚಂಡಮಾರುತ ಬಂದು ಅಪ್ಪಳಿಸಲಿದೆ ಎಂದು ಹೇಳಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಈಗಾಗಲೇ ಎನ್​ಡಿಆರ್​ಎಫ್​ನ 14 ಟೀಮ್​ ಪಶ್ಚಿಮ ಬಂಗಾಳಕ್ಕೆ ಹಾಗೂ 11 ಟೀಮ್ ಒಡಿಶಾಗೆ ಕಳುಹಿಸಿಕೊಡಲಾಗಿದೆ. ಚಂಡಮಾರುತದ ಪರಿಣಾಮದಿಂದ ಸಮಸ್ಯೆಯಾಗಲಿರುವ ಗ್ರಾಮಗಳನ್ನು ಈಗಾಗಲೇ ಗುರುತಿಸಿ ಅವರಿಗಾಗಿ ಪರಿಹಾರ ಕೇಂದ್ರಗಳನ್ನು ರೆಡಿ ಮಾಡಿಕೊಂಡಿದ್ದು, ಜನರನ್ನು ಅಲ್ಲಿಗೆ ಸ್ಥಳಾಂತರಿಸಲಾಗುತ್ತಿದೆ.
ಇದನ್ನೂ ಓದಿ:ಭಯ ಹುಟ್ಟಿಸಿದ ಡಾನಾ ಸೈಕ್ಲೋನ್; ನಿರಂತರ ಮಳೆಯ ನಡುವೆ ಮತ್ತೊಂದು ಎಚ್ಚರಿಕೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us