ಹಾಡು, ನೃತ್ಯ, ನಟನೆ ಎಲ್ಲಾ ವಿಭಾಗದಲ್ಲೂ ಕನ್ನಡಿಗರದ್ದೇ ಹವಾ
ಪರ ಭಾಷೆಯಲ್ಲಿ ಮಿಂಚುತ್ತಿದ್ದಾರೆ ನಮ್ಮ ಕನ್ನಡ ಮಣ್ಣಿನ ಪ್ರತಿಭೆಗಳು
ಕರ್ನಾಟಕಕ್ಕೆ ಮತ್ತೊಂದು ಗರಿ ತಂದುಕೊಟ್ಟ ಡಿಕೆಡಿ ವಿನ್ನರ್ ನಿತಿನ್
ನಮ್ಮ ಕನ್ನಡ ಮಣ್ಣಿನ ಪ್ರತಿಭೆಗಳು ಪರ ಭಾಷೆಯಲ್ಲಿ ಮಿಂಚುತ್ತಿದ್ದಾರೆ. ಹಾಡು, ನೃತ್ಯ, ಅಭಿನಯ ಪ್ರತಿಯೊಂದು ವಿಭಾಗದಲ್ಲೂ ದಕ್ಷಿಣ ಭಾರತದಲ್ಲಿ ಅಷ್ಟೇ ಅಲ್ಲದೇ, ಬಾಲಿವುಡ್ ಅಂಗಳದಲ್ಲೂ ಕನ್ನಡಿಗರ ಕಲರವ ಜೋರಾಗಿದೆ. ಕನ್ನಡಿಗರು ಗರ್ವ ಪಡುವಂತಹ ಮತ್ತೊಂದು ಗರಿ ನಮ್ಮ ಮಣ್ಣಿನ ಪ್ರತಿಭೆಗೆ ಸಂದಿದೆ.
ಇದನ್ನೂ ಓದಿ: ಬೆಂಗಳೂರು ಫ್ಯಾನ್ಸ್ಗೆ ಗುಡ್ನ್ಯೂಸ್.. ದಿನೇಶ್ ಕಾರ್ತಿಕ್ಗೆ ಆರ್ಸಿಬಿ ತಂಡದಲ್ಲಿ ಹೊಸ ಜವಾಬ್ದಾರಿ!
ಸರಿಗಮಪ ಸೀಸನ್ 19ರ ಪೋರಿ ದಿಯಾ ಹೆಗ್ಡೆ ಜನಪ್ರಿಯ ಹಿಂದಿಯ ‘ಸೂಪರ್ ಸ್ಟಾರ್ ಸಿಂಗರ್ 3’ ರಿಯಾಲಿಟಿ ಶೋನಲ್ಲಿಯೂ ಕಂಟೆಸ್ಟೆಂಟ್ ಆಗಿ ಮಿಂಚುತ್ತಿದ್ದಾರೆ. ಇತ್ತ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮೂಲಕ ಕನ್ನಡಿಗರನ್ನ ಕುಣಿಸಿದ್ದ ಪ್ರತಿಭೆ ನಿತಿನ್ ಹಿಂದಿ ಶೋನಲ್ಲಿ ಕಮಾಲ್ ಮಾಡಿದ್ದಾರೆ. ನಿತಿನ್ ಡ್ಯಾನ್ಸ್ ದಿವಾನಿ ಶೋನಲ್ಲಿ ಭಾಗವಹಿಸಿದ್ದರು. ಸದ್ಯ ಟ್ರೋಫಿ ಗೆದ್ದು ಕರ್ನಾಟಕದ ಜನತೆ ಹೆಮ್ಮೆ ಪಡುವಂತೆ ಮಾಡಿದ್ದಾರೆ. ವೀಕೆಂಡ್ನಲ್ಲಿ ಜಬರ್ದಸ್ತ್ ಮನರಂಜನೆ ನೀಡುತ್ತಿದ್ದ ಡಿಕೆಡಿ ಸೀಸನ್ 7ರ ವಿನ್ನರ್ ಆಗಿ ಛಾಪು ಮೂಡಿಸಿದ್ರು ನಿತಿನ್.
View this post on Instagram
ಸದ್ಯ ಡ್ಯಾನ್ಸ್ ದಿವಾನಿಯಲ್ಲಿಯೂ ಕೂಡ ಟ್ರೋಫಿಯನ್ನು ಬಾಚಿಕೊಂಡಿದ್ದಾರೆ. ಡ್ಯಾನ್ಸ್ ಪಾರ್ಟನರ್ ಗೌರವ್ ಜೊತೆಗೆ ಹಗಲು ರಾತ್ರಿ ಹಾರ್ಡ್ ವರ್ಕ್ ಮಾಡಿ ಕನಸನ್ನ ನನಸು ಮಾಡಿಕೊಂಡಿದ್ದಾರೆ. ಜಡ್ಜ್ ಸೀಟ್ನಲ್ಲಿದ್ದ ಮಾಧುರಿ ದೀಕ್ಷಿತ್, ಬಾಲಿವುಡ್ ಖ್ಯಾತ ನಟ ಸುನಿಲ್ ಶೆಟ್ಟಿ ಮುಂದೆ ಜಬರ್ದಸ್ತ್ ಪರ್ಫಾಮನ್ಸ್ ನೀಡಿ ಗೆದ್ದು ಬೀಗಿದ್ದಾರೆ. ಡ್ಯಾನ್ಸ್ ದಿವಾನಿ ಟ್ರೋಫಿ ಜೊತೆಗೆ 20 ಲಕ್ಷ ಕ್ಯಾಶ್ ಪ್ರೈಸ್ಗೆ ಭಾಜನರಾಗಿದ್ದಾರೆ ಗೌರವ್-ನಿತಿನ್ ಜೋಡಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ