ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ್ರಾ ಡಾರ್ಲಿಂಗ್​ ಪ್ರಭಾಸ್​; ಇನ್​ಸ್ಟಾ ಪೋಸ್ಟ್​ ಏನ್​ ಹೇಳುತ್ತೆ?

author-image
Veena Gangani
Updated On
ಪ್ರಭಾಸ್ ಮದುವೆ​​ ಬಗ್ಗೆ ಶಾಕಿಂಗ್ ಭವಿಷ್ಯ ನುಡಿದ ಜ್ಯೋತಿಷಿ- ಫ್ಯಾನ್ಸ್​ಗೆ ಆಘಾತ
Advertisment
  • ನಟನ ಮದುವೆ ಯಾವಾಗ ಅಂತ ಕಾದು ಕುಳಿತ ಫ್ಯಾನ್ಸ್​ಗೆ ಗುಡ್​ ನ್ಯೂಸ್​
  • ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ ಡಾರ್ಲಿಂಗ್​ ಪ್ರಭಾಸ್
  • ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ನಟನ ಇನ್​ಸ್ಟಾ ಸ್ಟೋರಿ

ಒಂದಲ್ಲಾ ಒಂದು ವಿಚಾರಕ್ಕೆ ಬಾಹುಬಲಿ, ಸಲಾರ್ ಖ್ಯಾತಿಯ ನಟ, ಯಂಗ್ ರೆಬಲ್ ಸ್ಟಾರ್ ಪ್ರಭಾಸ್​ ಸುದ್ದಿಯಲ್ಲಿ ಇರುತ್ತಾರೆ. ಅದರಲ್ಲೂ ನಟ ಪ್ರಭಾಸ್​ ಮದುವೆ ಬಗ್ಗೆ ಸುದ್ದಿ ಹರಡುತ್ತಲೇ ಇರುತ್ತದೆ. ನಟಿ ಅನುಷ್ಕಾ ಶೆಟ್ಟಿ ಜೊತೆ ಪ್ರಭಾಸ್ ಮದುವೆ ಆಗುತ್ತಾರೆ ಎಂಬ ಸುದ್ದಿಗಳು ನೀರಿನಂತೆ ಸಾಮಾಜಿಕ ಜಾಲತಾಣಲ್ಲಿ ಹರಿದಾಡುತ್ತಾ ಇರುತ್ತದೆ.

publive-image

ಇದನ್ನೂ ಓದಿ:ಡಾರ್ಲಿಂಗ್ ಪ್ರಭಾಸ್​ರನ್ನ​ ಟ್ರೋಲ್ ಮಾಡ್ತಿರೋದ್ಯಾಕೆ​.. ಕಾರಣ ಏನು?

ಇದೀಗ ಖುದ್ದು ನಟ ಪ್ರಭಾಸ್ ತಮ್ಮ ಇನ್​ಸ್ಟಾಗ್ರಾಂನಲ್ಲಿ ಸ್ಟೋರಿಯಲ್ಲಿ ವಿಶೇಷವಾಗಿ ಬರೆದುಕೊಂಡಿದ್ದಾರೆ. ಈ ಸ್ಟೋರಿ ನೋಡಿದ ಅಭಿಮಾನಿಗಳು ಪ್ರಭಾಸ್ ಮದುವೆಯಾಗಲು ಸಜ್ಜಾದ್ರಾ ಅಂತ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ನಟ ಪ್ರಭಾಸ್​ ಡಾರ್ಲಿಂಗ್ಸ್, ಕೊನೆಗೂ ಒಬ್ಬ ವಿಶೇಷ ವ್ಯಕ್ತಿ ನಮ್ಮ ಜೀವನಕ್ಕೆ ಬರಲಿದ್ದಾರೆ. ಸ್ವಲ್ಪ ಕಾಯಿರಿ' ಎಂದು ಬರೆದುಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಖುಷಿ ಜೊತೆಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

publive-image

ನಟ ಪ್ರಭಾಸ್ ಮದುವೆಯಾಗಲು ನಿರ್ಧರಿಸಿದ್ದಾರೆ. ಹೀಗಾಗಿ ಈ ರೀತಿಯ ಸ್ಟೋರಿಯನ್ನು ಹಾಕಿದ್ದಾರೆ ಅಂತ ಫ್ಯಾನ್ಸ್​ ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸುತ್ತಿದ್ದಾರೆ. ಸದ್ಯ ಮುಂದಿನ ದಿನಗಳಲ್ಲಿ ಈ ಸ್ಟೋರಿ ಹಿಂದಿನ ಅಸಲಿ ಸತ್ಯ ಏನ್​ ಇರಬಹುದು ಅಂತ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment