/newsfirstlive-kannada/media/post_attachments/wp-content/uploads/2024/06/Prabas.webp)
ಬಾಹುಬಲಿ ಹಿಟ್​ ಸಿನಿಮಾದ ಬಳಿಕ ಪ್ರಭಾಸ್​​ ಸಂಭಾವನೆ ಆಕಾಶದೆತ್ತರಕ್ಕೇರಿದೆ. ಸದ್ಯ ಕಲ್ಕಿ 2898 AD ಸಿನಿಮಾದಲ್ಲಿ ಭೈರವ ಅವತಾರದಲ್ಲಿ ಪ್ರಭಾಸ್​ ನಟಿಸಿದ್ದಾರೆ. ಜೂನ್​ 27ರಂದು ಈ ಸಿನಿಮಾ ತೆರೆ ಮೇಲೆ ಬರಲು ಸಜ್ಜಾಗಿದೆ. ಅಂದಹಾಗೆಯೇ ಕಲ್ಕಿ ಸಿನಿಮಾದಲ್ಲಿ ಪ್ರಭಾಸ್​ ಪಡೆದ ಸಂಭಾವನೆ ಕೇಳಿದ್ರೆ ಅಚ್ಚರಿಯಾಗೋದರಲ್ಲಿ ಅನುಮಾನವಿಲ್ಲ.
ಡಾರ್ಲಿಂಗ್​ ಪ್ರಭಾಸ್​ ಕಲ್ಕಿ 2898 AD ಸಿನಿಮಾದಲ್ಲಿ ಪಡೆದ ಸಂಭಾವನೆ ಕುರಿತ ಮಾಹಿತಿ ಹೊರಬಿದ್ದಿದೆ. ನಾಗ್​ ಅಶ್ಚಿನ್​ ನಿದೇರ್ಶನದ ಈ ಸಿನಿಮಾಗೆ ಚಲಸಾನಿ ಅಶ್ವಿನಿ ದತ್​ ಬಂಡವಾಳ ಹೂಡಿದ್ದಾರೆ. ತಮ್ಮ ವೈಜಯಂತಿ ಸಿನಿಮಾದ ಮೂಲಕ ಕಲ್ಕಿ ರೂಪವನ್ನು ಸಿನಿ ಪ್ರಿಯರಿಗೆ ತೋರಿಸಲು ರೆಡಿಯಾಗಿದ್ದಾರೆ. ಈ ಸಿನಿಮಾದಲ್ಲಿ ಪ್ರಭಾಸ್​ ಮಾತ್ರ ಕೋಟಿ ಕೋಟಿ ಸಂಭಾವನೆ ಪಡೆದಿದ್ದಾರೆ.
ಇದನ್ನೂ ಓದಿ: ಚಾಪೆ ಮೇಲೆ ನಿದ್ದೆ, ಸೊಳ್ಳೆ ಕಾಟದಿಂದ ಪರದಾಟ.. ಜೈಲಲ್ಲಿ ಪವಿತ್ರಾ ಗೌಡಗೆ ಕರಾಳ ರಾತ್ರಿ
ಪ್ರಭಾಸ್​ ಕಲ್ಕಿಗಾಗಿ ಬರೋಬ್ಬರಿ 150 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿ ಹೊರಬಿದ್ದಿತ್ತು. ಆದರೆ ಇದೀಗ 80 ಕೋಟಿ ರೂಪಾಯಿ ಸಂಭಾವನೆಯನ್ನು ನಟ ಪಡೆದಿದ್ದಾರೆ ಎನ್ನಲಾಗುತ್ತಿದೆ. ಮಾಹಿತಿ ಪ್ರಕಾರ ಸಿನಿಮಾದ ಬಜೆಟ್​ ನೋಡಿ ಪ್ರಭಾಸ್ ತಮ್ಮ ಸಂಭಾವನೆಯನ್ನು ಕಡಿತಗೊಳಿಸಿದ್ದಾರಂತೆ.
/newsfirstlive-kannada/media/post_attachments/wp-content/uploads/2024/05/prabas1.jpg)
ಕಲ್ಕಿ ಸಿನಿಮಾದಲ್ಲಿ ಪ್ರಭಾಸ್​ಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ. ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದಿಶಾ ಪಟಾಣಿ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ.
ಇದನ್ನೂ ಓದಿ: ಜೈಲಲ್ಲಿ 2ನೇ ರಾತ್ರಿ ಕಳೆದ ದರ್ಶನ್​.. ಸರಿಯಾಗಿ ಊಟ, ನಿದ್ದೆ ಇಲ್ಲದ ‘ಕಾಟೇರ’ನ ಕತೆ-ವ್ಯಥೆ ಹೀಗಿದೆ
ಇನ್ನು ಕಲ್ಕಿ ಸಿನಿಮಾ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಏಕಕಾಲದಲ್ಲಿ ಬಿಡುಗಡೆ ಆಗ್ತಿದೆ. ಸಲಾರ್​ ಬಳಿಕ ಕಲ್ಕಿ ಮೂಲಕ ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ.
ಇದಲ್ಲದೆ, ಪ್ರಭಾಸ್​ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಕಲ್ಕಿ ಬಳಿಕ ಕಣ್ಣಪ್ಪ, ದಿ ರಾಜ ಸಾಬ್​, ಸಲಾರ್​ ಪಾರ್ಟ್​​ -2, ಸಿನಿಮಾ ತೆರೆ ಮೇಲೆ ಬರಲಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us