newsfirstkannada.com

ದರ್ಶನ್ ಮತ್ತು ವಿನಯ್ ಫ್ರೆಂಡ್​ಶಿಪ್ ಶುರುವಾಗಿದ್ದೇ ಇಲ್ಲಿಂದ! ಇಬ್ಬರನ್ನು ಪರಿಚಯಿಸಿದ್ದು ಆ ನಟ!

Share :

Published June 16, 2024 at 9:11am

  ವಿನಯ್​ ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ಓನರ್

  ದರ್ಶನ್ ಆಪ್ತ ವಲಯದಲ್ಲಿ ವಿನಯ್ ಕಾಯಂ ಸದಸ್ಯ

  ದರ್ಶನ್ ಪಟ್ಟಣಗೆರೆ ಶೆಡ್ ಪರಿಚಯಿಸಿದ್ದೇ ವಿನಯ್

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್​ ಆ್ಯಂಡ್​ ಟೀಂ ಅರೆಸ್ಟ್​ ಆಗಿದ್ದಾರೆ. ಸದ್ಯ ವಿಚಾರಣೆ ನಡೆಯುತ್ತಿದೆ. ದರ್ಶನ್​ ತಂಡದಲ್ಲಿ ಆತನ ಸ್ನೇಹಿತ ವಿನಯ್​ ಕೂಡ ಭಾಗಿಯಾಗಿದ್ದು, ಎ10 ಆರೋಪಿಯಾಗಿದ್ದಾರೆ. ಆದರೆ ವಿನಯ್​ ಮತ್ತು ದರ್ಶನ್​​ ಸ್ನೇಹ ಹೇಗೆ ಶುರುವಾಯ್ತು ಎಂಬುದು ಗೊತ್ತಾ? ಇಲ್ಲಿದೆ ಮಾಹಿತಿ.  

ವಿನಯ್​ ಹೋಟೆಲ್ ಉದ್ಯಮಿ ಮತ್ತು ಫೈನಾಶ್ಯಿಯರ್ ಕೂಡ ಆಗಿದ್ದು, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆತನ ಕೈವಾಡವು ಇದೆ ಎಂಬುದು ಸಾಬೀತಾಗಿದೆ. ಹೀಗಾಗಿ ದರ್ಶನ್​ ಜೊತೆಗೆ ಈ ಕೇಸ್​ನಲ್ಲಿ ತಗಲಾಕಿಕೊಂಡಿದ್ದಾರೆ.

ಖ್ಯಾತ ಸಿನಿಮಾ ನಟನಿಂದ ವಿನಯ್​ ಪರಿಚಯ

ಆರ್ ಆರ್ ನಗರದಲ್ಲಿರುವ ಖ್ಯಾತ ಸಿನಿಮಾ ನಟನಿಂದ ವಿನಯ್​ಗೆ ದರ್ಶನ್​ ಪರಿಚಯವಾಗುತ್ತದೆ. ಐದಾರು ವರ್ಷಗಳ ಹಿಂದೆ ಪಾರ್ಟಿಯಲ್ಲಿ ಪರಿಚಯವಾಗುತ್ತದೆ.

ಇದನ್ನೂ ಓದಿ: ಸಾಕ್ಷ್ಯ ನಾಶಕ್ಕೆ ಮುಂದಾಗಿದ್ದ ದರ್ಶನ್​ ಆ್ಯಂಡ್​ ಗ್ಯಾಂಗ್​.. ಇಂದು ಮತ್ತೊಮ್ಮೆ ಪೊಲೀಸರಿಂದ ವಿಚಾರಣೆ

ವಿನಯ್ ಗೆ ಪ್ರಭಾವಿಗಳ ಪರಿಚಯ

ವಿನಯ್​ ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ಓನರ್ ಆಗಿದ್ದು, ಈ ರೆಸ್ಟೋರೆಂಟ್ ಗೆ ದರ್ಶನ್ ಬಂದಾಗ ವಿನಯ್​ ರಾಜಾದಿತ್ಯ ನೀಡುತ್ತಿದ್ದರು. ವಿನಯ್ ಗೆ ಪ್ರಭಾವಿಗಳ ಪರಿಚಯವಿದ್ದ ಹಿನ್ನೆಲೆಯಲ್ಲಿ ದರ್ಶನ್ ಆತನೊಂದಿಗೆ ಕ್ಲೋಸ್ ಆಗುತ್ತಾರೆ.

ಇದನ್ನೂ ಓದಿ: ನಿಮ್ಮನ್ನ ಮಿಸ್ ಮಾಡಿಕೊಳ್ತಿದ್ದೇನೆ ಅಪ್ಪ.. ದರ್ಶನ್​ ನೆನೆದು ‘ಫಾದರ್ಸ್​ ಡೇ’ ಶುಭಾಶಯ ತಿಳಿಸಿದ ಮಗ ವಿನೀಶ್​​

ದರ್ಶನ್ ಪಾರ್ಟಿಗಳನ್ನ ಆಯೋಜಿಸಿದ್ದ ವಿನಯ್

ವಿನಯ್​ ಫ್ಲವರ್, ಬೊಕ್ಕೆಗಳ ಮೂಲಕ ದರ್ಶನ್​ ಅವರನ್ನು ಅಟ್ರಾಕ್ಟ್ ಮಾಡುತ್ತಿದ್ದರು. ಹೀಗಾಗಿ ದರ್ಶನ್ ಆಪ್ತ ವಲಯದ ಕಾಯಂ ಸದಸ್ಯನಾಗಿ ವಿನಯ್ ಕಾಣಿಸಿಕೊಂಡರು. ಬರ್ತಾ ಬರ್ತಾ ದರ್ಶನ್ ಪಾರ್ಟಿಗಳನ್ನ ವಿನಯ್​ ಆಯೋಜಿಸುತ್ತಿದ್ದರು.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್​; ನಟ ದರ್ಶನ್​ಗೆ ಯಾವ್ಯಾವ ಶಿಕ್ಷೆ ನೀಡ್ಬೋದು ಗೊತ್ತಾ?

ರೆಡ್ ಕಲರ್ ಜೀಪ್

ವಿನಯ್ ರೆಡ್ ಕಲರ್ ಜೀಪ್ ಖರೀದಿಸಿದ ನಂತರ ದರ್ಶನ್​ ಮತ್ತು ಆತನ ಓಡಾಟ ಹೆಚ್ಚಾಯ್ತು. ದರ್ಶನ್​​ನನ್ನು ವಿನಯ್​ ಹಲವೆಡೆ ಕರೆದುಕೊಂಡು ಹೋಗುತ್ತಿದ್ದರು. ಅಷ್ಟು ಮಾತ್ರವಲ್ಲದೆ ದರ್ಶನ್ ಪಟ್ಟಣಗೆರೆ ಶೆಡ್ ಪರಿಚಯಿಸಿದ್ದೇ ವಿನಯ್. ಕೆಲ ವರ್ಷಗಳಿಂದ ದರ್ಶನ್ ಜೊತೆ ನಿತ್ಯ ಕಾಂಟಾಕ್ಟ್ ಹೊಂದಿದ್ದ ವಿನಯ್​ ಶೂಟಿಂಗ್ ಇಲ್ಲದ ಸಮಯದಲ್ಲಿ ದರ್ಶನ್ ಜೊತೆಯೇ ಇರುತ್ತಿದ್ದರು. ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವಿನಯ್ ಪ್ರಮುಖ ಪಾತ್ರವಹಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್ ಮತ್ತು ವಿನಯ್ ಫ್ರೆಂಡ್​ಶಿಪ್ ಶುರುವಾಗಿದ್ದೇ ಇಲ್ಲಿಂದ! ಇಬ್ಬರನ್ನು ಪರಿಚಯಿಸಿದ್ದು ಆ ನಟ!

https://newsfirstlive.com/wp-content/uploads/2024/06/darshan-and-vinay.jpg

Load More