newsfirstkannada.com

ನಿಮ್ಮನ್ನ ಮಿಸ್ ಮಾಡಿಕೊಳ್ತಿದ್ದೇನೆ ಅಪ್ಪ.. ದರ್ಶನ್​ ನೆನೆದು ‘ಫಾದರ್ಸ್​ ಡೇ’ ಶುಭಾಶಯ ತಿಳಿಸಿದ ಮಗ ವಿನೀಶ್​​

Share :

Published June 16, 2024 at 7:36am

Update June 16, 2024 at 7:42am

  ಇಂದು ವಿಶ್ವ ಫಾದರ್ಸ್​ ಡೇ ವಿಶೇಷ

  ದರ್ಶನ್​ ನೆನೆದು ಮಗ ವಿನೀಶ್​ ಭಾವುಕ ಪೋಸ್ಟ್​

  ಯಾವತ್ತಿಗೂ ನೀವೇ ನನ್ನ ಹೀರೋ ಅಪ್ಪ ಎಂದ ಮಗ ವಿನೀಶ್​

ಅಪ್ಪ ಹೀರೋನೇ ಆಗಲಿ, ಕೊಲೆಗಾರನೇ ಆಗಲಿ ಮಕ್ಕಳಿಗೆ ಮಾತ್ರ ತಂದೆಯೇ ಸರ್ವಸ್ವ. ಕೆಲವೊಂದು ಮಕ್ಕಳು ತಾಯಿಯನ್ನು ನೆಚ್ಚಿಕೊಂಡರೆ. ಇನ್ನು ಕೆಲವರು ತಂದೆಯನ್ನು ಹೆಚ್ಚು ನೆಚ್ಚಿಕೊಂಡಿರುತ್ತಾರೆ. ದಿನದ ಬಹುತೇಕ ಗಂಟೆ ಅಪ್ಪನೊಂದಿಗೆ ಕಳೆಯಲು ಬಯಸುತ್ತಾರೆ. ಆದರೆ ಅಪ್ಪ ಹತ್ತಿರವಿಲ್ಲದೆ ಇದ್ದರೆ ಬೇಸರಗೊಳ್ಳುತ್ತಾರೆ. ಆದರೆ ಇಂದು ವಿಶೇಷ ಏನು ಗೊತ್ತಾ? ವಿಶ್ವ ತಂದೆಯಂದಿರ ದಿನ. ಈ ದಿನದಂದು ಸ್ಯಾಂಡಲ್​ವುಡ್​ ನಟ ದರ್ಶನ್​ನನ್ನು ಮಗ ವಿನೀಶ್ ದರ್ಶನ್ ನೆನೆಸಿಕೊಂಡಿದ್ದಾರೆ. ಫಾದರ್ಸ್​ ಡೇಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ತಿಳಿಸಿದ್ದಾರೆ.

ಎಂಥಾ ವಿಪರ್ಯಾಸ ನೋಡಿ. ಒಂದೆಡೆ ನೆಚ್ಚಿನ ತಂದೆಗೆ ಮಗ ವಿನೀಶ್​​ ‘ಫಾದರ್ಸ್​ ಡೇ’ ಶುಭಾಶಯ ತಿಳಿಸಿದ್ದಾನೆ. ಆದರೆ ಅತ್ತ ತಂದೆ ಕೊಲೆ ಕೇಸ್​ನಲ್ಲಿ ಪೊಲೀಸ್​ ವಶದಲ್ಲಿದ್ದಾರೆ. ಹೀಗಿರುವಾಗ ಅಪ್ಪನಿಗಾಗಿ ಮಗನ ಹೃದಯ ಮಿಡಿದಿದೆ. ಇನ್​​ಸ್ಟಾಗ್ರಾಂನಲ್ಲಿ ದರ್ಶನ್​ ಮತ್ತು ತಾಯಿ ವಿಜಯಲಕ್ಷ್ಮೀ ಜೊತೆಗಿನ ಫೋಟೋವನ್ನು ಮಗ ಹಂಚಿಕೊಂಡಿದ್ದಾನೆ.

ಇದನ್ನೂ ಓದಿ: ‘ಡಿ’ ಗ್ಯಾಂಗ್‌ಗೆ ಶಾಕ್​.. ಮತ್ತೆ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದ ಕೋರ್ಟ್​.. ಮುಂದಿನ ನಡೆಯೇನು?

ವಿಶ್ವ ತಂದೆಯಂದಿರ ದಿನದಂದು ಮಗ ವಿನೀಶ್, ‘ನಿಮ್ಮನ್ನ ನಾನು ಮಿಸ್ ಮಾಡಿಕೊಳ್ತಿದ್ದೇನೆ. ನಿಮ್ಮನ್ನ ನಾನು ಅಪಾರವಾಗಿ ಪ್ರೀತಿಸುತ್ತಿದ್ದೇನೆ. ಯಾವತ್ತಿಗೂ ನೀವೇ ನನ್ನ ಹೀರೋ ಅಪ್ಪ’ ಎಂದು ವಿನೀಶ್ ಬರೆದಿದ್ದಾರೆ.

ಇದನ್ನೂ ಓದಿ: ‘ಇವ್ರೆಲ್ಲಾ ಹೀಗೆ ಮಾಡಿ ನನ್ನ ತಲೆಗೆ ತಂದಿದ್ದಾರೆ ಸರ್..’ ಅಧಿಕಾರಿಗಳ ಮುಂದೆ ದರ್ಶನ್ ಪಶ್ಚಾತಾಪ..!

ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಆ್ಯಂಡ್​ ಗ್ಯಾಂಗ್​ ಅರೆಸ್ಟ್​ ಆಗಿದೆ. ನಿನ್ನೆ ಕೋರ್ಟ್​ಗೆ ದರ್ಶನ್​ ಅವರನ್ನು ಹಾಜರುಪಡಿಸಲಾಗಿತ್ತು. ಆದರೆ ಕೋರ್ಟ್​ ಮತ್ತೆ 5 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
​​

ನಿಮ್ಮನ್ನ ಮಿಸ್ ಮಾಡಿಕೊಳ್ತಿದ್ದೇನೆ ಅಪ್ಪ.. ದರ್ಶನ್​ ನೆನೆದು ‘ಫಾದರ್ಸ್​ ಡೇ’ ಶುಭಾಶಯ ತಿಳಿಸಿದ ಮಗ ವಿನೀಶ್​​

https://newsfirstlive.com/wp-content/uploads/2024/06/Vinish-darshan.jpg

Load More