/newsfirstlive-kannada/media/post_attachments/wp-content/uploads/2024/01/Darshan-10.jpg)
ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅರೆಸ್ಟ್​ ಆಗಿದ್ದಾರೆ. ನಟಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್​ ಮಾಡಿರುವ ಆರೋಪದ ಮೇರೆಗೆ ರೇಣುಕಾ ಸ್ವಾಮಿ ಎಂಬಾತನನ್ನು ಕೊಲೆ ಮಾಡಲಾಗಿದೆ. ಬಳಿಕ ಆತನನ್ನು ಕಾಪಾಕ್ಷಿ ಪಾಳಯದ ಬಳಿ ಮೋರಿಯಲ್ಲಿ ಎಸೆದಿದ್ದಾರೆ. ಆದರೀಗ ಪೊಲೀಸರು ನಟ ದರ್ಶನ್ ಜೊತೆಗೆ ನಟಿ ಪವಿತ್ರಾ ಗೌಡರನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಡೆಸುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2024/01/Darshan-8.jpg)
ಪವಿತ್ರಾ ಗೌಡ ಯಾರು? ದರ್ಶನ್​ಗೂ ಆಕೆಗೆ ಏನು ಸಂಬಂಧ?
ಪವಿತ್ರಾ ಗೌಡ 18 ನೇ ವಯಸ್ಸಿಗೆ ಸಂಜಯ್ ಸಿಂಗ್ ಎಂಬವರ ಜೊತೆ ಸಪ್ತಪದಿ ತುಳಿದಿದ್ದರು. ಪ್ರೀತಿಸಿ ಮದುವೆಯಾಗಿದ್ದ ಜೋಡಿ ಚಾಮರಾಜಪೇಟೆಯಲ್ಲಿ ವಾಸವಿದ್ದರು. ಬಳಿಕ ಆತನಿಂದ ಒಂದು ಹೆಣ್ಣು ಮಗುವನ್ನು ಪಡೆದರು.
ಇದನ್ನೂ ಓದಿ:ಮೈಸೂರಲ್ಲಿ ಕೊಲೆ? ಬೆಂಗಳೂರಲ್ಲಿ ಡೆಡ್​ಬಾಡಿ? ಚಿತ್ರಹಿಂಸೆ ನೀಡಿ ರೇಣುಕಾಸ್ವಾಮಿ ಕೊಲೆ
[caption id="attachment_68875" align="alignnone" width="800"]
ಪವಿತ್ರಾ ಗೌಡ - ಸಂಜಯ್ ಸಿಂಗ್[/caption]
ಪವಿತ್ರಾ ಪತಿ ಸಂಜಯ್ ಸಿಂಗ್ ದಿನಸಿ ಅಂಗಡಿ ವ್ಯಾಪಾರ ಮಾಡುತ್ತಿದ್ದು, ಸದ್ಯ ಪವಿತ್ರ ಗೌಡ ಆತನಿಂದ ದೂರವಾಗಿದ್ದಾರೆ.
ದರ್ಶನ್​ ಪರಿಚಯ ಹೇಗಾಯ್ತು?
ಪವಿತ್ರಾ ಗೌಡಗೆ ‘ಜಗ್ಗುದಾದ’ ಸಿನಿಮಾ ಆಡಿಷನ್ ಕೊಡಲು ಹೋಗಿದ್ದ ವೇಳೆ ದರ್ಶನ್ ಪರಿಚಯವಾಗುತ್ತದೆ. ಅಂದಿನಿಂದ ಪವಿತ್ರಾ ಗೌಡ ದರ್ಶನ್ ಜೊತೆ ರಿಲೇಶನ್ ಶಿಪ್ ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ದರ್ಶನ್ ಪರಿಚಯವಾದ ನಂತರ ಪತಿ ಸಂಜಯ್​ನಿಂದ ಪವಿತ್ರ ದೂರವಾಗಿದ್ದಾಳೆ ಎಂದು ಹೇಳಲಾಗುತ್ತಿದೆ.
/newsfirstlive-kannada/media/post_attachments/wp-content/uploads/2024/01/darshan-2.jpg)
ಇದನ್ನೂ ಓದಿ: ದರ್ಶನ್​ ಏಟಿಗೆ ಕೊಲೆಯಾದ ರೇಣುಕಾಸ್ವಾಮಿ ಯಾರು? ಇಲ್ಲಿದೆ ಇಂಚಿಂಚು ಮಾಹಿತಿ
ಇನ್ನು ಪವಿತ್ರಾ ಗೌಡ ‘ಛತ್ರಿಗಳು ಸಾರ್ ಛತ್ರಿಗಳು’ ಸಿನಿಮಾ ಮೂಲಕ ಬಣ್ಣ ಲೋಕಕ್ಕೆ ಎಂಟ್ರಿ ಕೊಟ್ಟರು. ಆ ಬಳಿಕ ಬೆರಳೆಣಿಕೆಯ ಸಿನಿಮಾ ಮಾಡಿದ್ದರು. ಆದರೆ ಆ ಸಿನಿಮಾಗಳಿಂದ ಆಷ್ಟೊಂದು ಹೆಸರು ಮಾಡಲಿಲ್ಲ.
View this post on Instagram
ನಮ್ಮಿಬ್ಬರ ಸಂಬಂಧಕ್ಕೆ 10 ವರ್ಷ
ಕಳೆದ ಜನವರಿ ತಿಂಗಳಿನಲ್ಲಿ ನಟಿ ಪವಿತ್ರಾ ಗೌಡ ಅವರು ಡಿ ಬಾಸ್​ ದರ್ಶನ್ ಜೊತೆಗಿನ ಆತ್ಮೀಯ ಫೋಟೋಗಳನ್ನ ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. 'ನಮ್ಮ ರಿಲೇಶನ್ ಷಿಪ್ ಗೆ 10 ವರ್ಷ' ಎಂದು ಬರೆಯುವ ಮೂಲಕ ಪೋಸ್ಟ್ ಹಾಕಿಕೊಂಡಿದ್ದರು. ಫೋಟೋದಲ್ಲಿ ಪವಿತ್ರಾ ಗೌಡ ಮತ್ತು ಆಕೆಯ ಮಗಳ ಜೊತೆ ದರ್ಶನ್ ಕಾಣಿಸಿಕೊಂಡಿದ್ದರು. ಇದೇ ವಿಚಾರವಾಗಿ ದರ್ಶನ್​ ಪತ್ನಿ ವಿಜಯ ಲಕ್ಷ್ಮೀ ಸಾಮಾಜಿಕ ಜಾಲತಾಣದಲ್ಲಿ ವಾರ್​ ನಡೆದಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us