newsfirstkannada.com

ದರ್ಶನ್​ ಏಟಿಗೆ ಕೊಲೆಯಾದ ರೇಣುಕಾಸ್ವಾಮಿ ಯಾರು? ಇಲ್ಲಿದೆ ಇಂಚಿಂಚು ಮಾಹಿತಿ

Share :

Published June 11, 2024 at 11:47am

Update June 11, 2024 at 11:49am

  ಕೊಲೆಯಾದ ರೇಣುಕಾಸ್ವಾಮಿ ಪತ್ನಿ 8 ತಿಂಗಳ ಗರ್ಭಿಣಿ

  ಸ್ನೇಹಿತರು ಬಂದಿದ್ದಾರೆ ಅಂತ ಮನೆಯಲ್ಲಿ ಹೇಳಿ ಹೋಗಿದ್ದರು

  ಕೊಲೆ ಮಾಡಿ ಯುವಕನ ಬಾಡಿ ಶಿಫ್ಟ್ ಮಾಡಿದ ಬಾಡಿಗಾರ್ಡ್ಸ್​

ನಟ ದರ್ಶನ್ ಅರೆಸ್ಟ್ ಆಗಿರೋದು ಸ್ಯಾಂಡಲ್​ವುಡ್​ಗೆ ಶಾಕ್​ ನೀಡಿದೆ. ಹಲ್ಲೆ ಮತ್ತು ಕೊಲೆ ಆರೋಪದ ಮೇರೆಗೆ ದರ್ಶನ್​ ಅವರನ್ನು ಆರೆಸ್ಟ್ ಮಾಡಲಾಗಿದೆ. ​​ರೇಣುಕಾಸ್ವಾಮಿ ಎಂಬ ಯುವಕನನ್ನು ಚಾಲೆಂಜಿಂಗ್​ ಸ್ಟಾರ್​ ಕೊಲೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ.

ರೇಣುಕಾ ಸ್ವಾಮಿ ಯಾರು? ಯಾವ ಊರು?

ನಟಿ ಪವಿತ್ರಾ ಗೌಡಗೆ ಮೆಸೇಜ್​ ಮಾಡಿರುವ ಆರೋಪದ ಮೇಲೆಗೆ ರೇಣುಕಾಸ್ವಾಮಿ ಎಂಬ ಯುವಕನನ್ನು ಕೊಲೆ ಮಾಡಲಾಗಿದೆ. ಕೊಲೆಯಾದ ಯುವಕ ಚಿತ್ರದುರ್ಗ ಮೂಲದವನಾಗಿದ್ದು, ಚಿತ್ರದುರ್ಗದ ಅಪೋಲೋ ಫಾರ್ಮಸಿಯಲ್ಲಿ ಕೆಲಸ ಮಾಡುತ್ತಿದ್ದನು. ಮೆಡಿಕಲ್ ಶಾಪ್ ನಲ್ಲಿ ಕೆಲಸ ಮಾಡ್ತಿದ್ದ ರೇಣುಕಾ ಸ್ವಾಮಿಯನ್ನು ಕರೆಸಿಕೊಂಡು ಹಲ್ಲೆ ಮಾಡಿದ್ದರು. ಬಳಿಕ ಹಲ್ಲೆಯ ಏಟಿಗೆ ಗಂಭೀರ ಗಾಯಗೊಂಡಿದ್ದ ಯುವಕ ರೇಣುಕಾ ಸ್ವಾಮಿ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ಡಿ ಬಾಸ್​ ದರ್ಶನ್​ ಅರೆಸ್ಟ್​.. ಸ್ಯಾಂಡಲ್​ವುಡ್​ ನಟ ಅರೆಸ್ಟ್ ಆಗಲು ಕಾರಣ?

ಪತ್ನಿ 8 ತಿಂಗಳ ಗರ್ಭಿಣಿ

ರೇಣುಕಾಸ್ವಾಮಿ ಚಿತ್ರದುರ್ಗದ ವಿಆರ್​​ಎಸ್ ಲೇಔಟ್ ನಿವಾಸಿ. ಇವರ ತಂದೆ ಕಾಶೀನಾಥ ಶಿವನಗೌಡ, ತಾಯಿ ರತ್ನಪ್ರಭಾ. ರೇಣುಕಾಸ್ವಾಮಿ ಈಗಾಗಲೇ ಮದುವೆಯಾಗಿದ್ದು, ಪತ್ನಿ ಸಹನಾ ರೆಣುಕಾಪ್ರಸಾದ್ 8 ತಿಂಗಳ ಗರ್ಭಿಣಿಯಾಗಿದ್ದಾರೆ. ಶುಕ್ರವಾರ ಕೆಲಸಕ್ಕೆ ವಾರದ ರಜೆ ಇದ್ದ ಕಾರಣ ರೇಣುಕಾಪ್ರಸಾದ್ ಬಾಲ್ಯದ ಸ್ನೇಹಿತರು ಬಂದಿದ್ದಾರೆ ಅಂತ ಮನೆಯಲ್ಲಿ ಹೇಳಿ ಹೋಗಿದ್ದರು.

ಕೊಲೆ ಮಾಡಿ ಬಾಡಿ ಶಿಫ್ಟ್​ 

ದರ್ಶನ್ ಜಾಗದಲ್ಲಿ ಕೊಲೆ ಮಾಡಿ ಯುವಕನ ಬಾಡಿ ಶಿಫ್ಟ್ ಮಾಡಲಾಗಿದೆ. ಬಳಿಕ ಕಾಮಾಕ್ಷಿಪಾಳ್ಯ ಲಿಮಿಟ್ಸ್ ಗೆ ಬಾಡಿ ರವಾನಿಸಲಾಗಿದೆ. ದರ್ಶನ್ ಬೌನ್ಸರ್ಸ್ ಕಾಮಾಕ್ಷಿಪಾಳ್ಯದಲ್ಲಿರುವ ಯುವಕನ ರೂಂ ಕಡೆಗೆ ಬಾಡಿ ಬಿಸಾಡಿದ್ದಾರೆ.

ಇದನ್ನೂ ಓದಿ: ದರ್ಶನ್​ ಹಲ್ಲೆ ಮಾಡಿದ ಯುವಕನ ಶವ ಮೋರಿಯಲ್ಲಿ ಸಿಕ್ತು.. ಸಿಸಿಟಿವಿಯಲ್ಲಿ ದೃಶ್ಯದಲ್ಲಿ ಏನಿತ್ತು?

ರೇಣುಕಾಸ್ವಾಮಿ ಬಾಡಿ ಸಿಕ್ಕಿದ್ದೆಲ್ಲಿ?

ಸತ್ವ ಅನುಗ್ರಹ ಅಪಾರ್ಟ್ ಮೆಂಟ್ ನ ಮುಂಭಾಗದಲ್ಲಿರುವ ಮೋರಿಯಲ್ಲಿ ರೇಣುಕಾಸ್ವಾಮಿ ಶವ ಪತ್ತೆಯಾಗಿದೆ. ಅಪರಿಚಿತ ಶವ ಪತ್ತೆ ಸಂಬಂಧ ಅಪಾರ್ಟ್ ಮೆಂಟ್ ಸೆಕ್ಯೂರಿಟಿ ಗಾರ್ಡ್ ದೂರು ನೀಡಿದ್ದರು.

30 ರಿಂದ 35 ವರ್ಷದ ವ್ಯಕ್ತಿ ಶವ ಪತ್ತೆಯಾಗಿದೆ ಎಂದು ಸೆಕ್ಯೂರಿಟಿ ಗಾರ್ಡ್ ದೂರು ನೀಡಿದ್ದರು. ರೇಣುಕಾಸ್ವಾಮಿ ಕಿವಿಗೆ ಹಾಗೂ ತಲೆಗೆ ಗಂಭೀರ ಗಾಯ ಆಗಿತ್ತು. ಪೊಲೀಸರು ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆ ನಡೆಸಿ ವೈದ್ಯರ ವರದಿ ಪಡೆದಿದ್ದರು. ಮುಖ, ತಲೆ ಹಾಗೂ ಕಿವಿಗೆ ತೀವ್ರವಾದ ಹಲ್ಲೆಯಾಗಿರೋದು ತಿಳಿದುಬಂದಿತ್ತು.

ಇದನ್ನೂ ಓದಿ: ಯುವಕನ ಮರ್ಮಾಂಗಕ್ಕೆ ಒದ್ದ ನಟ ದರ್ಶನ್.. ಬಿದ್ದು ನರಳಾಡಿದರು ಆಸ್ಪತ್ರೆಗೆ ಸೇರಿಸದೇ ನಿರ್ಲಕ್ಷ್ಯ ಆರೋಪ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್​ ಏಟಿಗೆ ಕೊಲೆಯಾದ ರೇಣುಕಾಸ್ವಾಮಿ ಯಾರು? ಇಲ್ಲಿದೆ ಇಂಚಿಂಚು ಮಾಹಿತಿ

https://newsfirstlive.com/wp-content/uploads/2024/06/darshan-2.jpg

Load More