ಫಸ್ಟ್​ ಪಿಕ್ಚರ್​ ಬಂದಾಗ ಯಾರು ಬಾಲ ಬಿಚ್ಚಲ್ಲ.. ಎದ್ದೇಳಿದ ಮೇಲೆ.. ದರ್ಶನ್​ ಬಗ್ಗೆ ಬಾ.ಮಾ. ಹರೀಶ್​ ಏನಂದ್ರು?

author-image
AS Harshith
Updated On
ಫಸ್ಟ್​ ಪಿಕ್ಚರ್​ ಬಂದಾಗ ಯಾರು ಬಾಲ ಬಿಚ್ಚಲ್ಲ.. ಎದ್ದೇಳಿದ ಮೇಲೆ.. ದರ್ಶನ್​ ಬಗ್ಗೆ ಬಾ.ಮಾ. ಹರೀಶ್​ ಏನಂದ್ರು?
Advertisment
  • ಕರಿಯ ಟೈಮಲ್ಲಿ ಕೂಡ ಪ್ರೇಮ್​ ಜೊತೆ ಗಲಾಟೆ ಮಾಡಿಕೊಂಡಿದ್ರು
  • ಪ್ರೇಮ್​ ಒಂದು ದಿನ ಅಳುತ್ತಾ​ ನಮ್ಮ ಮನೆಯಲ್ಲಿ ಬಂದ್ರು ಹೇಳಿದ್ರು
  • ನಮ್ಮ ತಂದೆ ದರ್ಶನ್​ನ ಕರೆಸಿ ಬುದ್ಧಿ ಹೇಳಿದ್ರು ಎಂದು ಬಾ.ಮಾ. ಹರೀಶ್​

ಫಸ್ಟ್​ ಪಿಕ್ಚರ್​ ಬಂದಾಗ ಯಾರು ಬಾಳ ಬಿಚ್ಚಲ್ಲ. ಸುಮ್ಮೆ ಇರ್ತಾರೆ ಎದ್ದೇಳೋವರೆಗು. ಎದ್ದೇಳಿದ ಮೇಲೆ ಬಾಲ ಬಿಚ್ತಾರೆ ಎಂದು ದರ್ಶನ್​ ಮೊದಲ ಸಿನಿಮಾ ‘ಮೆಜೆಸ್ಟಿಕ್​’ ನಿರ್ಮಾಪಕ ಬಾ.ಮಾ. ಹರೀಶ್​ ಹೇಳಿದ್ದಾರೆ.

ನ್ಯೂಸ್​ ಫಸ್ಟ್​ ಜೊತೆಗೆ ಮಾತನಾಡಿದ ಬಾ.ಮಾ​. ಹರೀಶ್, ಕರಿಯ ಟೈಮಲ್ಲಿ ಕೂಡ ಪ್ರೇಮ್​ ಜೊತೆ ಗಲಾಟೆ ಮಾಡಿಕೊಂಡಿದ್ರು. ಲೇಟ್​ ನೈಟ್​ ಶೂಟಿಂಗ್​ ಮಾಡ್ತಾರೆ ಅಂತ ಏನೋ ಬಂದು ಹೇಳ್ತಾ ಇದ್ರು. ಪ್ರೇಮ್​ ಒಂದು ದಿನ ಅಳುತ್ತಾ​ ನಮ್ಮ ಮನೆಯಲ್ಲಿ ಬಂದ್ರು ಹೇಳಿದ್ರು. ಆವಾಗ ನಮ್ಮ ತಂದೆಯವರು ಕೆಲಸಕ್ಕೆ ಹೊರಡ್ತಾ ಇದ್ರು. ಇದನ್ನು ಕೇಳಿ ದರ್ಶನನ್ನು ಕರೆಸು ಎಂದು ಹೇಳಿದ್ದರು. ಆಮೇಲೆ ದರ್ಶನನ್ನು ಕರೆಸಿದೆ. ನಮ್ಮ ತಂದೆ ಕೂಡ ಬುದ್ಧಿ ಹೇಳಿದ್ರು. ನಿರ್ಮಾಪಕ ಸಾಲ ಮಾಡಿ ಬಂಡವಾಳ ಹಾಕಿರ್ತಾರೆ. ಅವನ ಕಷ್ಟ ಅವನಿಗೆ ಗೊತ್ತು. ನೀನು ಪ್ರೇಮ್​ ಜೊತೆಗೆ ಸಿನಿಮಾ ರೀಲ್​ ಸುಟ್ಟುಹಾಕ್ತೀಯಾ ಎಂದು ಯಾವ ಬಾಯಲ್ಲಿ ಹೇಳ್ತಿಯಾ ಎಂದ ಬೈದರು. ಆ ಬಳಿಕ ಇಬ್ಬರು ಸರಿಯಾಗಿ ಸಿನಿಮಾ ಮುಗಿಸಿಕೊಂಡರು. ಆ ಸಿನಿಮಾ ಸೂಪರ್​ ಡೂಪರ್​ ಹಿಟ್​ ಆಯ್ತು. ದರ್ಶನ್​ ಕೆರಿಯರ್ಗೆ ಅದು ಮೈಲು ಗಲ್ಲು ಎಂದು ಬಾ.ಮಾ ಹರೀಶ್​ ಹೇಳಿದ್ದಾರೆ.

ಇದನ್ನೂ ಓದಿ: ದರ್ಶನ್​ ಹತ್ಯೆ ಮಾಡಿದ್ದಕ್ಕೆ ಫಿಲ್ಮ್​​ ಚೇಂಬರ್​ಗೆ 5 ಲಕ್ಷ ರೂಪಾಯಿ ಫೈನ್​; ಬಾ.ಮಾ. ಹರೀಶ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment