Advertisment

ಸಾಕ್ಷ್ಯ ನಾಶಕ್ಕೆ ಮುಂದಾಗಿದ್ದ ದರ್ಶನ್​ ಆ್ಯಂಡ್​ ಗ್ಯಾಂಗ್​.. ಇಂದು ಮತ್ತೊಮ್ಮೆ ಪೊಲೀಸರಿಂದ ವಿಚಾರಣೆ

author-image
AS Harshith
Updated On
ಸಾಕ್ಷ್ಯ ನಾಶಕ್ಕೆ ಮುಂದಾಗಿದ್ದ ದರ್ಶನ್​ ಆ್ಯಂಡ್​ ಗ್ಯಾಂಗ್​.. ಇಂದು ಮತ್ತೊಮ್ಮೆ ಪೊಲೀಸರಿಂದ ವಿಚಾರಣೆ
Advertisment
  • ದರ್ಶನ್​ ಆ್ಯಂಡ್​ ಟೀಂ 5 ದಿನ ಪೊಲೀಸ್ ಕಸ್ಟಡಿಗೆ
  • ಎವಿಡೆನ್ಸ್ ಗಳನ್ನ ಮುಂದಿಟ್ಟುಕೊಂಡು ದರ್ಶನ್​ ವಿಚಾರಣೆ
  • ಆರೋಪಿಗಳ ಮೊಬೈಲ್ ನಲ್ಲಿ ಕೆಲ ಸ್ಫೋಟಕ ವಿಚಾರಗಳು ಪತ್ತೆ

ನಟ ದರ್ಶನ್ ಮತ್ತು ಗ್ಯಾಂಗ್​ನಿಂದ ರೇಣುಕಾಸ್ವಾಮಿ ಕೊಲೆ ನಡೆದಿದೆ. ನಿನ್ನೆ ಆರೋಪಿಗಳನ್ನು ಕೋರ್ಟ್​ಗೆ ಹಾಜರು ಪಡಿಸಲಾಗಿತ್ತು. ಆದರೆ ಕೋರ್ಟ್​ ಮತ್ತೆ 5 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ನೀಡಿದೆ. ಹೀಗಾಗಿ ಇಂದಿನಿಂದ ಮತ್ತೊಂದು ಹಂತದ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ. ಎವಿಡೆನ್ಸ್ ಗಳನ್ನ ಮುಂದಿಟ್ಟುಕೊಂಡು ವಿಚಾರಣೆ ನಡೆಸಲಿದ್ದಾರೆ.

Advertisment

ದರ್ಶನ್, ಪವಿತ್ರಾ ಗೌಡ ಸೇರಿ ಕಸ್ಟಡಿಗೆ ಪಡೆದ ಆರೋಪಿಗಳ ವಿಚಾರಣೆ ನಡೆಯಲಿಕ್ಕಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳು ಸಾಕ್ಷ್ಯನಾಶಕ್ಕೆ ಮುಂದಾಗಿದ್ದರು. ಆದರೆ ಪೊಲೀಸರು ಆರೋಪಿಗಳ ಬಳಿ ಇದ್ದ ಹತ್ತು ಮೊಬೈಲ್ ಗಳನ್ನ ಜಪ್ತಿ ಮಾಡಿದ್ದಾರೆ. ಹೀಗಾಗಿ ಮೊಬೈಲ್ ನಲ್ಲಿ ಕೆಲ ಸ್ಫೋಟಕ ವಿಚಾರಗಳು ಪತ್ತೆಯಾಗಿವೆ.

publive-image

ಇದನ್ನೂ ಓದಿ: ನಿಮ್ಮನ್ನ ಮಿಸ್ ಮಾಡಿಕೊಳ್ತಿದ್ದೇನೆ ಅಪ್ಪ.. ದರ್ಶನ್​ ನೆನೆದು ‘ಫಾದರ್ಸ್​ ಡೇ’ ಶುಭಾಶಯ ತಿಳಿಸಿದ ಮಗ ವಿನೀಶ್​​

ದರ್ಶನ್ ವಿರುದ್ಧ ಮತ್ತಷ್ಟು ಆಧಾರಗಳು ಪತ್ತೆಯಾಗಿವೆ. ಜೊತೆಗೆ ಸ್ಥಳ ಮಹಜರು ವೇಳೆ ಮತ್ತಷ್ಟು ಸಾಕ್ಷ್ಯ ಸಿಕ್ಕಿವೆ. ವೆಪನ್ ಗಳು, 30ಲಕ್ಷ ಹಣ, ಕಾರುಗಳು ಸೇರಿ ಹಲವು ವಸ್ತುಗಳು ಜಪ್ತಿಮಾಡಲಾಗಿದೆ. ಈಗಾಗಲೇ ಆರೋಪಿಗಳನ್ನ ವಿಚಾರಣೆ ಮಾಡಿದ ಪೊಲೀಸರು ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.

Advertisment

publive-image

ಇದನ್ನೂ ಓದಿ: ಅಪ್ಪನ ಶವದ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಅನು.. ಕಣ್ಣೀರಾಗಿ ಹರಿಯಿತು ಪಶ್ಚಾತಾಪ..!

ಇದೀಗ ಆರೋಪಿಗಳನ್ನು ಮತ್ತೊಮ್ಮೆ ಕಸ್ಟಡಿಗೆ ತೆಗೆದುಕೊಂಡ ಪೊಲೀಸರು ಅವರ ಹೇಳಿಕೆ ಬಗ್ಗೆ ಮತ್ತೆ ವಿಚಾರಣೆ ನಡೆಸಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment