Advertisment

ದರ್ಶನ್​ ಹಲ್ಲೆ ಮಾಡಿದ ಯುವಕನ ಶವ ಮೋರಿಯಲ್ಲಿ ಸಿಕ್ತು.. ಸಿಸಿಟಿವಿ ದೃಶ್ಯದಲ್ಲಿ ಏನಿತ್ತು?

author-image
AS Harshith
Updated On
ರೇಣುಕಾಸ್ವಾಮಿ ಮೃತದೇಹ ಬಿಸಾಡುವಾಗ ನಡೆಯಿತು ಯಡವಟ್ಟು.. ಪ್ಲಾನ್ ಉಲ್ಟಾ ಹೊಡೆದಿದ್ದೇ ಇಲ್ಲಿ..!
Advertisment
  • ಸ್ಯಾಂಡಲ್​ವುಡ್​ ನಟ ದರ್ಶನ್​ ಅರೆಸ್ಟ್​
  • ಮೋರಿಯಲ್ಲಿ ಸಿಕ್ತು ಯುವಕನ ಶವ.. ಕೊಲೆ ಮಾಡಿದ್ಯಾಕೆ?
  • ಶವ ನೋಡಿ ಪೊಲೀಸರಿಗೆ ದೂರು ನೀಡಿದ ಸೆಕ್ಯೂರಿಟಿ ಗಾರ್ಡ್

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅರೆಸ್ಟ್​ ಆಗಿದ್ದಾರೆ. ಯುವಕನೋರ್ವನನ್ನು ಹಲ್ಲೆ ಮಾಡಿ ಕೊಲೆ ಮಾಡಿದ ಆರೋಪ ಅವರ ಮೇಲೆ ಕೇಳಿಬಂದಿದೆ. ಕೇವಲ್ ರಾಮ್ ದೋರ್ ಜಿ ಎಂಬವರು ನೀಡಿರುವ ದೂರಿನ ಅನ್ವಯ ಎಫ್ಐಆರ್ ದಾಖಲಾಗಿದೆ. ಈ ಕಾರಣಕ್ಕೆ ಸ್ಯಾಂಡಲ್​ವುಡ್​ ನಟನನ್ನು ಬಂಧಿಸಲಾಗಿದೆ.

Advertisment

ಸತ್ವ ಅನುಗ್ರಹ ಅಪಾರ್ಟ್ ಮೆಂಟ್ ನ ಮುಂಭಾಗದಲ್ಲಿರುವ ಮೋರಿಯಲ್ಲಿ ರೇಣುಕಾಸ್ವಾಮಿ ಶವ ಪತ್ತೆಯಾಗಿದೆ. ಅಪರಿಚಿತ ಶವ ಪತ್ತೆ ಸಂಬಂಧ ಅಪಾರ್ಟ್ ಮೆಂಟ್ ಸೆಕ್ಯೂರಿಟಿ ಗಾರ್ಡ್ ದೂರು ನೀಡಿದ್ದರು.

publive-image

ಇದನ್ನೂ ಓದಿ: ಯುವಕನ ಮರ್ಮಾಂಗಕ್ಕೆ ಒದ್ದ ನಟ ದರ್ಶನ್.. ಬಿದ್ದು ನರಳಾಡಿದರು ಆಸ್ಪತ್ರೆಗೆ ಸೇರಿಸದೇ ನಿರ್ಲಕ್ಷ್ಯ ಆರೋಪ

30 ರಿಂದ 35 ವರ್ಷದ ವ್ಯಕ್ತಿ ಶವ ಪತ್ತೆಯಾಗಿದೆ ಎಂದು ಸೆಕ್ಯೂರಿಟಿ ಗಾರ್ಡ್ ದೂರು ನೀಡಿದ್ದರು. ಮೃತ ವ್ಯಕ್ತಿಯ ಕಿವಿಗೆ ಹಾಗೂ ತಲೆಗೆ ಗಂಭೀರ ಗಾಯ ಆಗಿತ್ತು. ಪೊಲೀಸರು ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆ ನಡೆಸಿ ವೈದ್ಯರ ವರದಿ ಪಡೆದಿದ್ದರು. ಮುಖ, ತಲೆ ಹಾಗೂ ಕಿವಿಗೆ ತೀವ್ರವಾದ ಹಲ್ಲೆಯಾಗಿರೋದು ತಿಳಿದುಬಂದಿತ್ತು.

Advertisment

ಇದನ್ನೂ ಓದಿ: ಡಿ ಬಾಸ್​ ದರ್ಶನ್​ ಅರೆಸ್ಟ್​.. ಸ್ಯಾಂಡಲ್​ವುಡ್​ ನಟ ಅರೆಸ್ಟ್ ಆಗಲು ಕಾರಣ?

ಘಟನೆ ಸಂಬಂಧ ಪೊಲೀಸರು ಸ್ಥಳೀಯ ಸಿಸಿಟಿವಿಗಳನ್ನು ಪರಿಶೀಲನೆ ಮಾಡಿದ್ದಾರೆ. ರಾತ್ರಿ 8 ಘಂಟೆ ಸುಮಾರಿಗೆ ಅಪರಿಚಿತ ಶವ ಪತ್ತೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment