Advertisment

ದರ್ಶನ್ ಕಲರ್​ ಫುಲ್​ ಎಂಟ್ರಿಗೆ ಟ್ವಿಸ್ಟ್; ಎಸ್​ಪಿ ಶೋಭಾರಾಣಿ ಮಹತ್ವದ ಮಾಹಿತಿ

author-image
Ganesh
Updated On
ಸ್ವಂತ ಹಣದಿಂದ ದರ್ಶನ್ ಕೇಸ್ ತನಿಖೆ; ಇಲ್ಲಿಯವರೆಗೆ ಪೊಲೀಸರು ಎಷ್ಟು ಖರ್ಚು ಮಾಡಿದ್ದಾರೆ..?
Advertisment
  • ದರ್ಶನ್​ನನ್ನು ನಿನ್ನೆ ಬಳ್ಳಾರಿ ಜೈಲಿಗೆ ಕರೆ ತಂದಿರುವ ಪೊಲೀಸರು
  • ಕೂಲಿಂಗ್ ಗ್ಲಾಸ್ ಇರೋದು ಭಾರೀ ಚರ್ಚೆಗೆ ಕಾರಣವಾಗಿತ್ತು
  • ಕೈಗೆ ಕೋಳ ಹಾಕಿಲ್ಲ, ಅದು ಸುಳ್ಳು ಎಸ್​​ಪಿ ಇನ್ನೇನು ಮಾಹಿತಿ ಕೊಟ್ರು?

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಾಫಿ ಕುಡ್ಕೊಂಡು.. ಸಿಗರೇಟ್ ಸೇದ್ಕೊಂಡು ಆರಾಮಾಗಿದ್ದ ದರ್ಶನ್​​ಗೆ ಈಗ ಬಳ್ಳಾರಿ ಜೈಲಿನ ಸೆರೆವಾಸ ಶುರುವಾಗಿದೆ. ನಾನ್ ಬರೋದಿಲ್ಲ ಅಂತಿದ್ದ ದರ್ಶನ್ ಮಾತು ಪೊಲೀಸರು ಕೇಳ್ಬೇಕು ಅಲ್ವಾ. ನಿನ್ನೆ ನಸುಕಿನ ಜಾವದಲ್ಲಿಯೇ ಪರಪ್ಪನ ಅಗ್ರಹಾರದಿಂದ ಪೊಲೀಸ್ ವಾಹನದಲ್ಲಿ ದರ್ಶನ್‌ನನ್ನು ಬಳ್ಳಾರಿಗೆ ಶಿಫ್ಟ್ ಮಾಡಲಾಗಿದೆ.

Advertisment

ಸೆಂಟ್ರಲ್ ಜೈಲಿನಲ್ಲಿ ರಾಜಾತಿಥ್ಯ ಸಿಕ್ಕಿ ಫುಲ್ ಬಿಂದಾಸ್‌ನಲ್ಲಿದ್ದ ಆರೋಪಿ ದರ್ಶನ್‌ಗೆ ಈಗ ಬಳ್ಳಾರಿ ಜೈಲಿನ ದರ್ಶನವಾಗಿದೆ. ನಿನ್ನೆ ದರ್ಶನ್‌ನ ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡಿದ್ದು, ದರ್ಶನ್‌ನ ಒಂದು ದಿನ ಬಳ್ಳಾರಿ ಜೈಲಿನ ಅನುಭವ ಪಡೆದಿದ್ದಾರೆ.

ಇದನ್ನೂ ಓದಿ:ಮಧ್ಯಾಹ್ನದವರೆಗೆ ಏನನ್ನೂ ತಿನ್ನಲಿಲ್ಲ; ಬಳ್ಳಾರಿ ಜೈಲಿನಲ್ಲಿ ನರಕ ದರ್ಶನ.. ಮೊದಲ ರಾತ್ರಿ ಕಳೆದ ಆರೋಪಿ..!

publive-image

ಬಳ್ಳಾರಿಗೆ ಜೈಲಿಗೆ ನಟ ದರ್ಶನ್​ ಕಲರ್​ ಫುಲ್​ ಆಗಿ ಎಂಟ್ರಿ ಕೊಟ್ಟಿದ್ದರು. ಕೂಲಿಂಗ್ ಗ್ಲಾಸ್ ಅನ್ನು ತಂದಿದ್ದರು.. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.. ಈ ಬಗ್ಗೆ ಬಳ್ಳಾರಿ ಎಸ್‌ಪಿ ಶೋಭಾರಾಣಿ ಸ್ಪಷ್ಟನೆ ಕೊಟ್ಟಿದ್ದಾರೆ. ಅದು ಕೂಲಿಂಗ್ ಗ್ಲಾಸ್ ಅಲ್ಲ.. ಪವರ್ ಗ್ಲಾಸ್ ಎಂದಿದ್ದಾರೆ. ದರ್ಶನ್ ಜೈಲಿನ ನಿಯಮಗಳನ್ನ ಪಾಲನೆ ಮಾಡ್ತಿದ್ದಾರೆ ಎಂದಿದ್ದಾರೆ.

Advertisment

ಇದನ್ನೂ ಓದಿ:ಕೂಲಿಂಗ್ ಗ್ಲಾಸ್​​, ಹ್ಯಾಂಡ್​ ಶೇಕ್ ಮಾಡಿ ಜೈಲಿಗೆ ಎಂಟ್ರಿ; ಕರ್ಕೊಂಡು ಬಂದ ಸಿಬ್ಬಂದಿಗೆ ಸಂಕಷ್ಟ ತಂದಿಟ್ಟ ದರ್ಶನ್..!

publive-image

ಕೈಗೆ ಕೋಳ ಹಾಕಿಲ್ಲ. ಅದು ಸುಳ್ಳು. ಕೋಳ ಯಾವುದನ್ನೂ ಹಾಕಿಕೊಂಡು ಬಂದಿಲ್ಲ. ಅಂತಹ ಯಾವುದೇ ಅವಶ್ಯಕತೆಯೂ ಇಲ್ಲ. ಸ್ಪೆಕ್ಟ್​ ಅಲ್ಲ. ಅದು ಪವರ್ ಗ್ಲಾಸ್ ಎಂದಿದ್ದರು. ಪವರ್ ಗ್ಲಾಸ್ ಜೈಲಿನಲ್ಲಿ ಅನುಮತಿ ಇದೆ. ಯಾರಿಗಾದರೂ ಕಣ್ಣಿನ ಸಮಸ್ಯೆ ಇದ್ದರೆ ಅಂಥವರಿಗೆ ಅನುಮತಿ ಇದೆ. ಆದರೂ ಸಹ ಅದು ಎಷ್ಟರಮಟ್ಟಿಗೆ ಪವರ್ ಇದೆ ಅನ್ನೋದನ್ನು ನಾವು ಚೆಕ್ ಮಾಡ್ತೀವಿ. ಇನ್ನು ಎಲ್ಲರಿಗೂ ನಾರ್ಮಲ್ ಫುಡ್ ಇರುತ್ತದೆಯೋ? ಅದೇ ತೆಗೆದುಕೊಂಡಿರುತ್ತಾರೆ. ಭೇಟಿ ಮಾಡಲು ವಾರಕ್ಕೆ ಒಮ್ಮೆ ಮಾತ್ರ ಅವಕಾಶ ಇರುತ್ತದೆ ಎಂದು ಎಸ್​ಪಿ ಶೋಭಾರಾಣಿ ತಿಳಿಸಿದ್ದಾರೆ.

ಇದನ್ನೂ ಓದಿ:ಬಳ್ಳಾರಿ ಜೈಲು ಸೇರಿದ ನಟ ದರ್ಶನ್.. ಜೈಲಿಗೆ ಎಂಟ್ರಿಯಾಗುವ ಫೋಟೋಗಳು ಇಲ್ಲಿವೆ..!

Advertisment

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment