/newsfirstlive-kannada/media/post_attachments/wp-content/uploads/2024/06/Vinay.jpg)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದು, ಚಿತ್ರದುರ್ಗದಲ್ಲಿ ನಿನ್ನೆ ಈಡೀ ದಿನ ಸ್ಥಳ ಮಹಜರು ಕಾರ್ಯ ನಡೆಸಿದ್ದಾರೆ. ಸ್ಥಳ ಮಹಜರ್ ವೇಳೆ ಆರೋಪಿಗಳ ಮನೆಯಲ್ಲಿ ತನಿಖೆಗೆ ಹೊಸ ಸುಳಿವು ನೀಡಬಹುದಾದ ಕೆಲವು ವಸ್ತುಗಳನ್ನು ಸೀಜ್ ಮಾಡಿದ್ದಾರೆ.
ಕೊಲೆ ಪ್ರಕರಣದ ಹಿಂದೆ ಪೊಲೀಸ್ ಇನ್ಸ್ಪೆಕ್ಟರ್ ನೆರಳು ಇದೆಯಾ ಎಂಬ ಅನುಮಾನ ಕಾಡಿದೆ ಎನ್ನಲಾಗಿದೆ. ಕೊಲೆಯ ನಂತರ PSI ಒಬ್ಬರ ಜೊತೆ ಆರೋಪಿಗಳು ಸಂಪರ್ಕ ಮಾಡಿದ್ದಾರೆ. ಆರೋಪಿ ವಿನಯ್ ಪಿಎಸ್ಐ ಒಬ್ಬರಿಗೆ ಕರೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಪ್ರಕರಣದಲ್ಲಿ ಆರೋಪಿ ವಿನಯ್ ಅರೆಸ್ಟ್ ಆಗುತ್ತಿದ್ದಂತೆಯೇ, ಸಿಡಿಆರ್ ಪಡೆದು ಪರಿಶೀಲನೆ ನಡೆಸಿದಾಗ PSIಗೆ ಕರೆ ಮಾಡಿರುವ ವಿಚಾರ ಬಯಲಿಗೆ ಬಂದಿದೆ ಎನ್ನಲಾಗಿದೆ.
ಇದನ್ನೂ ಓದಿ:ದರ್ಶನ್ಗೆ ಪವಿತ್ರಾ ಗೌಡ ಪ್ರೀತಿಯಿಂದ ಏನೆಂದು ಕರೀತಾರೆ.. ಈ ನಟಿಯ ಹಿನ್ನೆಲೆ ಏನು ಗೊತ್ತಾ..?
ಈ ಸಂಬಂಧ ಪಿಎಸ್ಐ ಅವರಿಂದ ಹೇಳಿಕೆ ಪಡೆಯಲು ತನಿಖಾಧಿಕಾರಿಗಳು ನೋಟಿಸ್ ನೀಡಿದ್ದರು. ಅದರಂತೆ ಅನ್ನಪೂರ್ಣೇಶ್ವರಿನಗರ ಠಾಣೆಗೆ ಬಂದಿದ್ದ ಆ ಪಿಎಸ್ಐ ತಮಗೆ ಆರೋಪಿ ವಿನಯ್ ಯಾಕೆ ಕರೆ ಮಾಡಿದ್ದ ಅನ್ನೋದ್ರ ಬಗ್ಗೆ ವಿವರಿಸಿದ್ದಾರೆ ಎಂದು ತಿಳಿದುಬಂದಿದೆ.
ಪಿಎಸ್ಐ ಪಾತ್ರವೇನು?
ರೇಣುಕಾಸ್ವಾಮಿ ಮರ್ಡರ್ ಬಳಿಕ ಓರ್ವ ಪಿಎಸ್ಐಗೆ ಕರೆ ಮಾಡಲಾಗಿದೆ. ಪಿಎಸ್ಐಗೆ ಕರೆ ಮಾಡಿ ಕೆಲ ಮಾಹಿತಿಗಳನ್ನು ಆರೋಪಿಗಳು ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳು ನೋಟಿಸ್ ನೀಡಿದ್ದರು. ಆ ಅಧಿಕಾರಿ ಕುಟುಂಬದ ಜೊತೆ ವಿದೇಶಿ ಪ್ರವಾಸದಲ್ಲಿದ್ದರು. ಹೀಗಾಗಿ ಪ್ರವಾಸ ಮುಗಿಸಿಕೊಂಡು ಬಂದು ಹೇಳಿಕೆ ನೀಡ್ತೇನೆ ಎಂದಿದ್ದರಂತೆ. ಅದರಂತೆ ವಿದೇಶದಿಂದ ವಾಪಸ್ ಆದ ಬೆನ್ನಲ್ಲೇ, ಅವರು ಠಾಣೆಗೆ ಬಂದು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಪವಿತ್ರಗೌಡ ಇನ್ಸ್ಟಾದಿಂದ Phone Number ಶೇರ್ ಆಗಿದ್ದೇಗೆ.. ಮೊದಲ ಮೆಸೇಜ್ ಏನಾಗಿತ್ತು..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ