Advertisment

ದರ್ಶನ್​​ ರಕ್ಷಣೆಗೆ ಬಂದ್ರಾ ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರು..?

author-image
Ganesh
Updated On
ದರ್ಶನ್ ವಿಚಾರದಲ್ಲಿ ಪೊಲೀಸರಿಗೇ ಸಂಕಷ್ಟ ಎದುರಾಗುತ್ತಾ? ಠಾಣೆಯಲ್ಲಿ ಆಗಿದ್ದೇನು..?
Advertisment
  • ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಪ್ರಭಾವಿಗಳ ಒತ್ತಡ ಇದ್ಯಾ?
  • ಕಾನೂನು ಕುಣಿಕೆಯಿಂದ ಪಾರು ಮಾಡಲು ತೆರೆಮರೆ ಯತ್ನ
  • ಪೋಲಿಸ್ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿ ಪ್ರಭಾವಿಗಳು?

ಚಿತ್ರದುರ್ಗದ ರೇಣುಕಾಸ್ವಾಮಿಯ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ನಟಿ ಪವಿತ್ರ ಗೌಡ ಸೇರಿ ಒಟ್ಟು 18 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಾಗಿರುವ ಕೆಲವು ಆರೋಪಿಗಳ ವಿಚಾರಣೆಯು ಬೆಂಗಳೂರಿನ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ತನಿಖೆ ನಡೆಯುತ್ತಿದೆ.

Advertisment

ಹತ್ಯೆಯ ಕೇಸ್​​ನ ಆರೋಪಿ ದರ್ಶನ್ ಪರವಾಗಿ ಪ್ರಭಾವಿ ರಾಜಕಾರಣಿಗಳು ಒಳಗೊಳಗೆ ಬ್ಯಾಟಿಂಗ್ ಮಾಡಿದ್ದಾರಂತೆ. ಎರಡೂ ರಾಷ್ಟ್ರೀಯ ಪಕ್ಷಗಳ 7 ಪ್ರಭಾವಿಗಳಿಂದ ದರ್ಶನ್​ ರಕ್ಷಣೆಗೆ ಯತ್ನ ನಡೆದಿದೆ ಎಂಬ ಮಾತು ಕೇಳಿಬರ್ತಿದೆ. ದರ್ಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಯೊಬ್ಬರು ಮತನಾಡಿದ್ದಾರೆ ಎನ್ನಲಾಗಿರುವ ಆಡಿಯೋ ಒಂದು ವೈರಲ್ ಆಗಿದೆ. ಅದು ಈ ರೀತಿಯ ಅನುಮಾನಗಳನ್ನು ಹುಟ್ಟಿಹಾಕಿದೆ.

ಇದನ್ನೂ ಓದಿ:ಟೀಂ ಇಂಡಿಯಾದಲ್ಲಿ ಒಂದು ಸೈಲೆಂಟ್ ವೆಪನ್.. ಇವರೇ ವಿಶ್ವಕಪ್ ಗೆಲ್ಲಿಸಿಕೊಡೋಡು..!

publive-image

ದರ್ಶನ್​ ರಕ್ಷಣೆಗೆ ಯತ್ನ?
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಪ್ರಭಾವಿಗಳಿಂದ ಒತ್ತಡನಾ? ಕಾನೂನು ಕುಣಿಕೆಯಿಂದ ಪಾರು ಮಾಡಲು ತೆರೆಮರೆ ಯತ್ನ ನಡೆದಿದೆ.. ಪೋಲಿಸ್ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿರೋ ಈ ಪ್ರಭಾವಿಗಳು, ಸೆಕ್ಷನ್​ಗಳನ್ನ ಬದಲಿಸುವಂತೆ ಒತ್ತಡ ಹಾಕಿದ್ದಾರೆ ಅಂತ ಗೊತ್ತಾಗಿದೆ. ಕೆಲವು ಪ್ರಭಾವಿಗಳಂತೂ ದರ್ಶನ್ ಜೊತೆ ಹಣಕಾಸಿನ ವ್ಯವಹಾರ ಸಹ ಹೊಂದಿದ್ದಾರೆ ಎನ್ನಲಾಗಿದೆ. ಸಿಎಂ ಮೇಲೂ ಒತ್ತಡ ಹಾಕಲು ಕೆಲ ರಾಜಕಾರಣಿಗಳು ಯತ್ನಿಸಿದ್ದಾರಂತೆ..

Advertisment

ಚನ್ನಪಟ್ಟಣ ಬೈಎಲೆಕ್ಷನ್​​ನಲ್ಲಿ ಸ್ಪರ್ಧೆಗೆ ಬಯಸಿದ್ದರಾ ದರ್ಶನ್?
ಮಾಜಿ ಸಚಿವ ಸಿಪಿ ಯೋಗೇಶ್ವರ್​​​ ಹೊಸ ಬಾಂಬ್​​​ ಹಾಕಿದ್ದಾರೆ.. ಚನ್ನಪಟ್ಟಣ ಉಪ ಚುನಾವಣೆಯಲ್ಲಿ ದರ್ಶನ್ ಸ್ಪರ್ಧೆ ಬಯಸಿದ್ರೂ ಅನ್ನೋ ಅನುಮಾನದ ರೀತಿಯ ಹೇಳಿಕೆ ನೀಡಿದ್ದಾರೆ.ಗೊತ್ತು ನನಗೆ.. ಅಚ್ಚರಿ ಅಭ್ಯರ್ಥಿ ಈಗ ಜೈಲು ಕಂಬಿ ಎಣಿಸುತ್ತಿದ್ದಾರೆ. ಅಚ್ಚರಿ ಅಭ್ಯರ್ಥಿ ಯಾರು ಎಂದು ನನಗೆ ಗೊತ್ತಿದೆ. ಅವರ ಅಚ್ಚರಿ ಅಭ್ಯರ್ಥಿ ಯಾವುದೋ ಕೊಲೆ ಕೇಸ್​ನಲ್ಲಿ ಸಿಕ್ಕಿಹಾಕಿಕೊಂಡು ಜೈಲು ಕಂಬಿ ಎಣಿಸುತ್ತಿದ್ದಾರೆ. ಅಚ್ಚರಿ ಅಭ್ಯರ್ಥಿಯಾದರೂ ಬರಲಿ, ಇನ್ನಾದರೂ ಬರಲಿ. ಚುನಾವಣೆ ಎದುರಿಸಲು ನಾವು ರೆಡಿ ಇದ್ದೀವಿ ಎಂದು ಸಿಪಿ ಯೋಗೇಶ್ವರ್​ ಹೇಳಿದ್ದಾರೆ.

ಒಟ್ಟಾರೆ, ಇದೊಂದು ವಿಚಿತ್ರ ಕೇಸ್ ಆಗಿ ಕಾಣಿಸ್ತಿದೆ.. ಕೇಸ್​​ನಲ್ಲಿ ರಾಜಕೀಯ ನುಸುಳ್ತಿರೋದು ಜನ ಸಾಮಾನ್ಯರು ಸಂಶಯದ ಕಣ್ಣು ನೆಟ್ಟಿದ್ದಾರೆ.. ದೊಡ್ಡವರಿಗೊಂದು ಕಾನೂನು, ಸಾಮಾನ್ಯರಿಗೆ ಒಂದ್​​​ ಕಾನೂನಾ ಅಂತ ಪ್ರಶ್ನೆ ಎತ್ತಿದ್ದಾರೆ.

ಇದನ್ನೂ ಓದಿ:ದರ್ಶನ್ ವಿಚಾರದಲ್ಲಿ ಪೊಲೀಸರಿಗೇ ಸಂಕಷ್ಟ ಎದುರಾಗುತ್ತಾ? ಠಾಣೆಯಲ್ಲಿ ಆಗಿದ್ದೇನು..?

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment