ಚಿಕ್ಕಣ್ಣನ ಬಳಿಕ ಮತ್ತೊಬ್ಬ ನಟನ ವಿಚಾರಣೆ! ದರ್ಶನ್​ ಕೇಸ್​ನಲ್ಲಿ ಪೊಲೀಸರಿಂದ 164 ಹೇಳಿಕೆ ಪಡೆಯಲು ಚಿಂತನೆ

author-image
AS Harshith
Updated On
ದರ್ಶನ್ ಇಂದು ಜಾಮೀನು ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆ.. ಅದಕ್ಕೆ ಪೊಲೀಸರು ಏನ್ ಮಾಡಿದ್ದಾರೆ ಗೊತ್ತಾ?
Advertisment
  • ದರ್ಶನ್ ಜೊತೆಗೆ ಪಾರ್ಟಿಯಲ್ಲಿದ್ದ ಗರಡಿ ಸಿನಿಮಾದ ಆ್ಯಕ್ಟರ್​
  • 164 ಹೇಳಿಕೆ ಪಡೆಯಲು ಚಿಂತನೆ ನಡೆಸಿದ ಪೊಲೀಸರು
  • ದರ್ಶನ್​, ಚಿಕ್ಕಣ್ಣ ಜೊತೆಗೆ ಪಾರ್ಟಿಯಲ್ಲಿ ಭಾಗಿಯಾಗಿದ್ದ ನಟ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಗ್ಯಾಂಗ್ ಜೈಲು ಸೇರಿದರೂ ತನಿಖೆ ಚುರುಕಾಗಿ ನಡೆಯುತ್ತಿದೆ. ಸದ್ಯ ಪ್ರಕರಣದ ಬಹುತೇಕ ವಿಚಾರಣೆ ಮುಕ್ತಾಯ ಹಂತಕ್ಕೆ ಬಂದು ತಲುಪಿದೆ.

ಸದ್ಯ ಪೊಲೀಸರು ಕೆಲ ಸಾಕ್ಷಿಗಳ 164 ಹೇಳಿಕೆ ಪಡೆಯಲು ಚಿಂತನೆ ನಡೆಸಿದ್ದಾರೆ. ಪಬ್ ನಲ್ಲಿ‌ ದರ್ಶನ್​ ಜೊತೆಗೆ ಪಾರ್ಟಿ ವೇಳೆ ಒಂದೇ ಟೇಬಲ್ ನಲ್ಲಿ ಕುಳಿತಿದ್ದ ಮತ್ತೊಬ್ಬ ನಟನ ಹೇಳಿಕೆ ಪಡೆಯಲು ಪೊಲೀಸರ ಚಿಂತನೆ ಮಾಡಿದ್ದಾರೆ.

ಇದನ್ನೂ ಓದಿ: ತುಂಬಿದ ಕೃಷ್ಣ ನದಿ, ಮಳೆಯಿಂದಾಗಿ ಉರುಳಿ ಬಿದ್ದ ಬಸ್​.. ರಾಜ್ಯದಲ್ಲಿ ವರುಣಾರ್ಭಟಕ್ಕೆ ಸಾಲು ಸಾಲು ಅವಾಂತರ

ಈಗಾಗಲೇ ಆರೋಪಿ ದರ್ಶನ್ ಜೊತೆ ಪಬ್ ನಲ್ಲಿ ಪಾರ್ಟಿಯಲ್ಲಿದ್ದ ನಟ ಚಿಕ್ಕಣ್ಣ ಹೇಳಿಕೆಯನ್ನು ಪೊಲೀಸರು ಪಡೆದಿದ್ದಾರೆ. ಠಾಣೆಗೆ ಕರೆದು ವಿಚಾರಣೆ ನಡೆಸಿದ್ದಾರೆ. ಆದರೀಗ ಚಿಕ್ಕಣ್ಣ ಜೊತೆಗಿದ್ದ ಮತ್ತೊಬ್ಬ ನಟನನ್ನು ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

publive-image

ಇದನ್ನೂ ಓದಿ: ಮುಂದಿನ 24 ಗಂಟೆಗಳಲ್ಲಿ ಗುಡುಗು ಸಹಿತ ಮಳೆ ಬರುತ್ತೆ.. ಬೇಗ ಬೇಗ ಮನೆ ಸೇರಿಕೊಳ್ಳಿ

ದರ್ಶನ್ ಜೊತೆ‌ ಪಾರ್ಟಿಯಲ್ಲಿ ನಟ ಚಿಕ್ಕಣ್ಣ ಜೊತೆ  ಶಿವಶಂಕರ್ ಕೂಡ ಇದ್ದರು. ಈ ನಟ ಗರಡಿ ಚಿತ್ರದಲ್ಲಿ ನಟಿಸಿದ್ದರು. ಸದ್ಯ‌ ಪೊಲಿಸರು ಶಿವಶಂಕರ್​ ಹೇಳಿಕೆಯನ್ನು 164 ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಬೊಲೆರೊ ಮತ್ತು ಟ್ರಕ್​ ನಡುವೆ ಭೀಕರ ಅಪಘಾತ.. ಇಬ್ಬರು ಮಕ್ಕಳು ಸೇರಿ 9 ಜನರು ಸಾವು

ಪೊಲೀಸರು ಬಹುತೇಕ ಎಲ್ಲಾ ರೀತಿಯ ಸಾಕ್ಷಿ ಗಳನ್ನು ಕಲೆಹಾಕಿದ್ದು, ಮೂರು ತಿಂಗಳಲ್ಲಿ ಚಾರ್ಜ್ ಶೀಟ್ ಸಲ್ಲಿಕೆ‌ ಮಾಡಲು‌ ಎಲ್ಲಾ ರೀತಿಯ ತಯಾರಿ ನಡೆಸಿದ್ದಾರೆ. ಚಾರ್ಜ್ ಶೀಟ್ ಸಲ್ಲಿಕೆ‌ ನಂತರ ಪೊಲೀಸರ ‌ಮತ್ತೊಂದು‌ ಮಹತ್ತರ ‌ನಡೆ ಮುಂದುವರೆದಿದೆ.

ಇನ್ನು ಪ್ರಕರಣದ ಚಾರ್ಜ್ ಶೀಟ್ ನಂತರ‌ ಪ್ರಕರಣ ಇತ್ಯರ್ಥಕ್ಕೆ ಫಾಸ್ಟ್​​ಟ್ರ್ಯಾಕ್ ಕೋರ್ಟ್​ ಮನವಿಗೆ ಚಿಂತನೆ ಮಾಡಿದ್ದಾರೆ ಎನ್ಬನಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment