Advertisment

ದರ್ಶನ್​ ಹಣದ ವಹಿವಾಟಿನ ಹಿಂದೆ ಬಿದ್ದ IT ಅಧಿಕಾರಿಗಳು.. ಕೊಲೆಗೆ ಅಷ್ಟೊಂದು ದುಡ್ಡು ಕೊಟ್ಟಿದ್ಯಾರು?

author-image
AS Harshith
Updated On
ಬಿಳಿ ಗಡ್ಡ, ಹೆವಿ ಟೆನ್ಷನ್.. ಬಳ್ಳಾರಿ ಜೈಲಿನಲ್ಲಿ ದರ್ಶನ್‌ ಹೊಸ ಅವತಾರ; ಸಂತೂರ್ ಸೋಪ್‌ ತಂದು ಕೊಟ್ಟ ವಿಜಯಲಕ್ಷ್ಮಿ!
Advertisment
  • ಬಳ್ಳಾರಿಯಲ್ಲಿ ನೆಮ್ಮದಿ ಇಲ್ಲದೆ ಪರದಾಡುತ್ತಿದ್ದಾರೆ ದರ್ಶನ್
  • ಲಕ್ಷ ಲಕ್ಷ ಹಣದ ವಹಿವಾಟಿನ ಹಿಂದೆ ಬಿದ್ದ ಐಟಿ ಅಧಿಕಾರಿಗಳು
  • ಜೈಲಲ್ಲೇ ದರ್ಶನ್​ ವಿಚಾರಣೆ.. ಮತ್ತೆ ದಾಸನಿಗೆ ತಲೆನೋವು

ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಕೇಸ್ ಸಂಬಂಧ ಬಳ್ಳಾರಿ ಜೈಲಿನಲ್ಲಿರುವ ದರ್ಶನ್​ ನೆಮ್ಮದಿ ಇಲ್ಲದೆ ಪರದಾಡುತ್ತಿದ್ದಾರೆ. ಇತ್ತ IT ಅಧಿಕಾರಿಗಳು ಕೊಲೆ ಕೇಸ್​ನಲ್ಲಿ ಲಕ್ಷ ಲಕ್ಷ ಹಣದ ವಹಿವಾಟು ನಡೆಸಲು ಮುಂದಾದ ಜಾಲದ ಕುರಿತು ತನಿಖೆಗೆ ಇಳಿದಿದ್ದಾರೆ.

Advertisment

IT ಅಧಿಕಾರಿಗಳು ಇದೀಗ ಹಣದ ಮೂಲ ಯಾವುದು ಎಂದು ಪತ್ತೆಗೆ ಮುಂದಾಗಿದ್ದಾರೆ. ಹೀಗಾಗಿ ದರ್ಶನ್ ಭೇಟಿಗೆ ಅಧಿಕಾರಿಗಳು ಸಮಯ ಕೇಳಿದ್ದಾರೆ. ಎರಡು ದಿನಗಳಲ್ಲಿ ಬಳ್ಳಾರಿ ಜೈಲಿಗೆ ಅವರು ಭೇಟಿ ಮಾಡಲಿದ್ದಾರೆ.

ಇದನ್ನೂ ಓದಿ: ದೇವಸ್ಥಾನದ ಪಂಚಾಮೃತದಲ್ಲಿ ದುರ್ಬಲ ಮಾತ್ರೆ ಬಳಕೆ ಮಾಡ್ತಾರೆ ಎಂಬ ಹೇಳಿಕೆ.. ಸಿನಿಮಾ ಡೈರೆಕ್ಟರ್​ ಅರೆಸ್ಟ್

ಕೋರ್ಟ್ ಆದೇಶದ ಹಿನ್ನಲೆ ಬಳ್ಳಾರಿಯಲ್ಲಿ ದರ್ಶನ್ ವಿಚಾರಣೆ ನಡೆಯಲಿಕ್ಕಿದೆ.  ಈಗಾಗಲೇ IT ಅಧಿಕಾರಿಗಳಿಗೆ ಸಹಕಾರ ನೀಡುವಂತೆ ಜೈಲಾಧಿಕಾರಿಗಳಿಗೆ ಮೇಲ್ ಮಾಡಲಾಗಿದೆ.

Advertisment

ಇದನ್ನೂ ಓದಿ: ಮಹಾಲಕ್ಷ್ಮಿ ಮನೆ ಗೋಡೆ ಮೇಲೆ ಮೂವರ ಫಿಂಗರ್ ಪ್ರಿಂಟ್​​ ಪತ್ತೆ.. ಹೆಚ್ಚಾಯ್ತು ಅನುಮಾನ

ರೇನುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್​ ಹಣ‌ ಕೊಟ್ಟು ಕೇಸ್ ಇನ್ನೊಬ್ಬರ ಮೇಲೆ‌ ಹಾಕಲು ಪ್ಲಾನ್ ಮಾಡಿದ್ದರು. ಆದರೆ ಆರೋಪಿಗಳು ಸಿಕ್ಕಿಬಿದ್ದ ಮೇಲೆ ದರ್ಶನ್​ ಮುಖ ಅನಾವರಣಗೊಂಡಿದೆ. ಸದ್ಯ ಈ ಕೇಸ್​​ನ ಹಣದ ಮೂಲಕ್ಕೆ IT ಅಧಿಕಾರಿಗಳು ಇಳಿದಿದ್ದು, ಬಳ್ಳಾರಿ ಜೈಲಿನಲ್ಲಿ IT ಅಧಿಕಾರಿಗಳಿಂದ ದರ್ಶನ್ ವಿಚಾರಣೆ ನಡೆಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment