/newsfirstlive-kannada/media/post_attachments/wp-content/uploads/2024/06/darshan11.jpg)
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ನಡೆದು ಇಂದಿಗೆ 2 ತಿಂಗಳು 27 ದಿನಗಳು ಕಳೆದಿವೆ. ಸದ್ಯ ಪ್ರಕರಣದ ತನಿಖೆ ಮುಕ್ತಾಯದ ಹಂತಕ್ಕೆ ಬಂದಿದ್ದು ಇಂದು ಪ್ರೈಮರಿ ಚಾರ್ಜ್ಶೀಟ್ ಸಲ್ಲಿಸಲು ಪೊಲೀಸರು ನಿರ್ಧರಿಸಿದ್ದಾರೆ. ಅಚ್ಚರಿ ಸಂಗತಿ ಎಂದರೆ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಪೊಲೀಸರು ಇಂದು 3991 ಪುಟಗಳ ಚಾರ್ಜ್ಶೀಟ್ ಸಲ್ಲಿಸುತ್ತಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್ ಸಂಬಂಧ ಆರೋಪಿ ದರ್ಶನ್ ತನಿಖೆ ಎಲ್ಲವೂ ಸೇರಿ 6 ಲಕ್ಷಕ್ಕಿಂತಲೂ ಅಧಿಕ ಖರ್ಚಾಗಿದೆ ಎಂಬ ಸುದ್ದಿ ಹೊಬಿದ್ದಿದೆ. ಸದ್ಯ ಈ ಕೇಸ್ನ ಚಾರ್ಜ್ಶೀಟ್ ದುಬಾರಿ ಎಂದೆನಿಸಿಕೊಂಡಿದೆ. ಪೊಲೀಸ್ ಇಲಾಖೆಯೂ ಚಾರ್ಜ್ಶೀಟ್ಗಾಗಿ ₹1 ಲಕ್ಷ ರೂಪಾಯಿ ಖರ್ಚು ಮಾಡಿದೆ. ದರ್ಶನ್ ಗ್ಯಾಂಗ್ ತನಿಖೆಗೆ ₹5 ಲಕ್ಷ ಹಣ ಖರ್ಚು ಮಾಡಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ದರ್ಶನ್ ಕೇಸ್ಗೆ ಬಿಗ್ ಟ್ವಿಸ್ಟ್; 3991 ಪುಟಗಳ ಜಾರ್ಜ್ಶೀಟ್ ಇಂದೇ ಸಲ್ಲಿಕೆ..!
ಮತ್ತೊಂದೆಡೆ ಚಾರ್ಜ್ಶೀಟ್ಗಾಗಿ 90 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ ಎನ್ನಲಾಗುತ್ತಿದೆ. ಉಳಿದ ಹತ್ತು ಸಾವಿರ ರೂಪಾಯಿ ಕವರ್ ಬೈಂಡಿಂಗ್ಗೆ ಎಂದು ಖರ್ಚು ಮಾಡಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಒಂದಲ್ಲ.. ಎರಡಲ್ಲ.. ಬರೋಬ್ಬರಿ 7 ಲಕ್ಷಕ್ಕೂ ಅಧಿಕ ಬೆಲೆಗೆ ಮಾರಾಟವಾದ ಎಮ್ಮೆ! ಇದರ ವಿಶೇಷತೆ ಏನು ಗೊತ್ತಾ?
17 ಆರೋಪಿಗಳಿಗೂ ಒಂದೊಂದು ಕಾಪಿ ಚಾರ್ಜ್ಶೀಟ್ ಸಲ್ಲಿಸಬೇಕು. ನ್ಯಾಯಾಲಯಕ್ಕೆ ಮತ್ತು ವಕೀಲರಿಗೆ ಸೇರಿ ಒಟ್ಟು 22 ಸೆಟ್ ಬೇಕು. 3 ದಿನಗಳಿಂದ ಚಾರ್ಜ್ಶೀಟ್ನಲ್ಲಿ ಯಾವುದೇ ತಪ್ಪಾಗದ ರೀತಿ ಎಚ್ಚರವಹಿಸಲಾಗಿದೆ. ಚಾರ್ಜ್ಶೀಟ್ ಸೇರಿ ತನಿಖೆಯ ಒಟ್ಟು ಖರ್ಚು 6 ಲಕ್ಷ 45 ಸಾವಿರ ರೂಪಾಯಿಯಾಗಿದೆ ಎಂದು ತಿಳಿದುಬಂದಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ
- ಜೂನ್ 7ರಂದು ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆಯಾಗುತ್ತಾನೆ
- ಜೂನ್ 8ರಂದು ಸುಮನಹಳ್ಳಿ ಸೇತುವೆ ಬಳಿ ರೇಣುಕಾಸ್ವಾಮಿ ಮೃತದೇಹ ಸಿಗುತ್ತದೆ
- ಜೂನ್ 9ರಂದು ಈ ಪ್ರಕರಣ ಕುರಿತು ಪೊಲೀಸರು ತನಿಖೆಗೆ ಮುಂದಾಗುತ್ತಾರೆ
- ಜೂನ್ 10ರಂದು ಸಂಜೆ 7 ಗಂಟೆಗೆ ರಾಘವೇಂದ್ರ, ಕಾರ್ತಿಕ್, ನಿಖಿಲ್ ನಾಯ್ಕ್ ಮತ್ತು ಕೇಶವ್ ಮೂರ್ತಿ ಕಾಮಾಕ್ಷಿ ಪೊಲೀಸ್ ಠಾಣೆಗೆ ಬಂದು ಶರಣಾಗುತ್ತಾರೆ. ಹಣಕಾಸಿನ ವಿಚಾರಕ್ಕೆ ಕೊಲೆ ಮಾಡಿರುವುದಾಗಿ ಒಪ್ಪಿಕೊಳ್ಳುತ್ತಾರೆ. ಈ ವೇಳೆ ಪ್ರಕರಣದಲ್ಲಿ ದರ್ಶನ್ ಹೆಸರಿರೋದು ಗೊತ್ತಾಗುತ್ತದೆ.
- ಜೂನ್ 11ರಂದು ದರ್ಶನ್ರನ್ನು ಕಸ್ಟಡಿಗೆ ತೆಗೆದುಕೊಳ್ಳುತ್ತಾರೆ. ಮೈಸೂರಿನಲ್ಲಿ ಬಂಧಿಸುತ್ತಾರೆ.
- ಜೂಲ್ 16 ರಂದು 17 ಎಲ್ಲಾ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.
- ಜೂನ್ 22 ರಂದು ದರ್ಶನ್ನನ್ನು ಕೈದಿ ನಂಬರ್ 6160 ಅಡಿಯಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಹಾಕುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ