newsfirstkannada.com

ದರ್ಶನ್​ ತನಿಖೆಗಾಗಿ 6 ಲಕ್ಷಕ್ಕೂ ಅಧಿಕ ರೂಪಾಯಿ ಖರ್ಚು! ದುಬಾರಿ ಚಾರ್ಜ್​ಶೀಟ್​​ ಹಿಂದಿದೆ ಸಾಲು ಸಾಲು ಸಾಕ್ಷಿ

Share :

Published September 4, 2024 at 11:41am

Update September 4, 2024 at 2:04pm

    ಇಂದು ಚಾರ್ಜ್​ಶೀಟ್​ ಸಲ್ಲಿಸಲು ಸಿದ್ಧತೆ

    3991 ಪುಟಗಳ ಚಾರ್ಜ್​ಶೀಟ್ ಸಲ್ಲಿಸುತ್ತಿರೋ ಪೊಲೀಸರು

    ಜೂನ್ 7ರಿಂದ ಜೂನ್​ 22ರವರೆಗೆ ನಡೆದ ಬೆಳವಣಿಗೆಗಳು ಹೀಗಿವೆ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ನಡೆದು ಇಂದಿಗೆ 2 ತಿಂಗಳು 27 ದಿನಗಳು ಕಳೆದಿವೆ. ಸದ್ಯ ಪ್ರಕರಣದ ತನಿಖೆ ಮುಕ್ತಾಯದ ಹಂತಕ್ಕೆ ಬಂದಿದ್ದು ಇಂದು ಪ್ರೈಮರಿ ಚಾರ್ಜ್​ಶೀಟ್​ ಸಲ್ಲಿಸಲು ಪೊಲೀಸರು ನಿರ್ಧರಿಸಿದ್ದಾರೆ. ಅಚ್ಚರಿ ಸಂಗತಿ ಎಂದರೆ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಪೊಲೀಸರು ಇಂದು 3991 ಪುಟಗಳ ಚಾರ್ಜ್​ಶೀಟ್​ ಸಲ್ಲಿಸುತ್ತಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್​ ಸಂಬಂಧ ಆರೋಪಿ ದರ್ಶನ್​​ ತನಿಖೆ ಎಲ್ಲವೂ ಸೇರಿ 6 ಲಕ್ಷಕ್ಕಿಂತಲೂ ಅಧಿಕ ಖರ್ಚಾಗಿದೆ ಎಂಬ ಸುದ್ದಿ ಹೊಬಿದ್ದಿದೆ. ಸದ್ಯ ಈ ಕೇಸ್​ನ ಚಾರ್ಜ್​ಶೀಟ್​ ದುಬಾರಿ ಎಂದೆನಿಸಿಕೊಂಡಿದೆ. ಪೊಲೀಸ್​​ ಇಲಾಖೆಯೂ ಚಾರ್ಜ್​ಶೀಟ್​ಗಾಗಿ ₹1 ಲಕ್ಷ ರೂಪಾಯಿ ಖರ್ಚು ಮಾಡಿದೆ. ದರ್ಶನ್​ ಗ್ಯಾಂಗ್​ ತನಿಖೆಗೆ ₹5 ಲಕ್ಷ ಹಣ ಖರ್ಚು ಮಾಡಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ದರ್ಶನ್​ ಕೇಸ್​ಗೆ ಬಿಗ್ ಟ್ವಿಸ್ಟ್​; 3991 ಪುಟಗಳ ಜಾರ್ಜ್​ಶೀಟ್ ಇಂದೇ ಸಲ್ಲಿಕೆ..!

ಮತ್ತೊಂದೆಡೆ ಚಾರ್ಜ್​ಶೀಟ್​ಗಾಗಿ 90 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ ಎನ್ನಲಾಗುತ್ತಿದೆ. ಉಳಿದ ಹತ್ತು ಸಾವಿರ ರೂಪಾಯಿ ಕವರ್ ಬೈಂಡಿಂಗ್​​ಗೆ ಎಂದು ಖರ್ಚು ಮಾಡಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಒಂದಲ್ಲ.. ಎರಡಲ್ಲ.. ಬರೋಬ್ಬರಿ 7 ಲಕ್ಷಕ್ಕೂ ಅಧಿಕ ಬೆಲೆಗೆ ಮಾರಾಟವಾದ ಎಮ್ಮೆ! ಇದರ ವಿಶೇಷತೆ ಏನು ಗೊತ್ತಾ?

17 ಆರೋಪಿಗಳಿಗೂ ಒಂದೊಂದು ಕಾಪಿ ಚಾರ್ಜ್​ಶೀಟ್ ಸಲ್ಲಿಸಬೇಕು. ನ್ಯಾಯಾಲಯಕ್ಕೆ ಮತ್ತು ವಕೀಲರಿಗೆ ಸೇರಿ ಒಟ್ಟು 22 ಸೆಟ್ ಬೇಕು. 3 ದಿನಗಳಿಂದ ಚಾರ್ಜ್​ಶೀಟ್​ನಲ್ಲಿ ಯಾವುದೇ ತಪ್ಪಾಗದ ರೀತಿ ಎಚ್ಚರವಹಿಸಲಾಗಿದೆ. ಚಾರ್ಜ್​ಶೀಟ್​ ಸೇರಿ ತನಿಖೆಯ ಒಟ್ಟು ಖರ್ಚು 6 ಲಕ್ಷ 45 ಸಾವಿರ ರೂಪಾಯಿಯಾಗಿದೆ ಎಂದು ತಿಳಿದುಬಂದಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ

  • ಜೂನ್​ 7ರಂದು ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆಯಾಗುತ್ತಾನೆ
  • ಜೂನ್​ 8ರಂದು ಸುಮನಹಳ್ಳಿ ಸೇತುವೆ ಬಳಿ ರೇಣುಕಾಸ್ವಾಮಿ ಮೃತದೇಹ ಸಿಗುತ್ತದೆ
  • ಜೂನ್​ 9ರಂದು ಈ ಪ್ರಕರಣ ಕುರಿತು ಪೊಲೀಸರು ತನಿಖೆಗೆ ಮುಂದಾಗುತ್ತಾರೆ
  • ಜೂನ್​ 10ರಂದು ಸಂಜೆ 7 ಗಂಟೆಗೆ ರಾಘವೇಂದ್ರ, ಕಾರ್ತಿಕ್​, ನಿಖಿಲ್​ ನಾಯ್ಕ್​ ಮತ್ತು ಕೇಶವ್ ಮೂರ್ತಿ ಕಾಮಾಕ್ಷಿ ಪೊಲೀಸ್​​ ಠಾಣೆಗೆ ಬಂದು ಶರಣಾಗುತ್ತಾರೆ. ಹಣಕಾಸಿನ ವಿಚಾರಕ್ಕೆ ಕೊಲೆ ಮಾಡಿರುವುದಾಗಿ ಒಪ್ಪಿಕೊಳ್ಳುತ್ತಾರೆ. ಈ ವೇಳೆ ಪ್ರಕರಣದಲ್ಲಿ ದರ್ಶನ್ ಹೆಸರಿರೋದು ಗೊತ್ತಾಗುತ್ತದೆ.​
  • ಜೂನ್​​ 11ರಂದು ದರ್ಶನ್​ರನ್ನು ಕಸ್ಟಡಿಗೆ ತೆಗೆದುಕೊಳ್ಳುತ್ತಾರೆ. ಮೈಸೂರಿನಲ್ಲಿ ಬಂಧಿಸುತ್ತಾರೆ.
  • ಜೂಲ್​ 16 ರಂದು 17 ಎಲ್ಲಾ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.
  • ಜೂನ್​ 22 ರಂದು ದರ್ಶನ್​​ನನ್ನು ಕೈದಿ ನಂಬರ್​ 6160 ಅಡಿಯಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಹಾಕುತ್ತಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್​ ತನಿಖೆಗಾಗಿ 6 ಲಕ್ಷಕ್ಕೂ ಅಧಿಕ ರೂಪಾಯಿ ಖರ್ಚು! ದುಬಾರಿ ಚಾರ್ಜ್​ಶೀಟ್​​ ಹಿಂದಿದೆ ಸಾಲು ಸಾಲು ಸಾಕ್ಷಿ

https://newsfirstlive.com/wp-content/uploads/2024/06/darshan11.jpg

Load More