/newsfirstlive-kannada/media/post_attachments/wp-content/uploads/2024/09/Darshan-Bellary-Jail-8.jpg)
Darshan Case: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್ ಜೈಲೇ ಗತಿಗಿದೆ. ಕೇಸ್​ನಲ್ಲಿ ಎ2 ಆರೋಪಿ ಆಗಿರುವ ದರ್ಶನ್​​​ ಬೇಲ್​ ಪಡೆದು ಹೊರಬರುವ ಆಸೆ ಕನಸು ನುಚ್ಚು ನೂರಾಗಿದೆ. ಹಾಗಂತ ಕಾನೂನು ಸಮರ ನಿಲ್ಲೋದಿಲ್ಲ. ಅದಕ್ಕಾಗಿ ಮೂರು ಪ್ಲಾನ್​​ಗಳು ರೆಡಿ ಆಗಿವೆ.
ದರ್ಶನ್​​​ ಬೇಲ್​​ ಸಿಗುವ ಕನಸು ಛಿದ್ರವಾಗಿದೆ. ಕಳೆದ ವಾರ ದರ್ಶನ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನ 57ನೇ ಸಿಸಿಎಚ್ ಕೋರ್ಟ್ ವಜಾ ಮಾಡಿದೆ. ಈ ಬೆನ್ನಲ್ಲೇ ಮುಂದೆ ಹೇಗೆ ಅನ್ನೋ ಆತಂಕ ದರ್ಶನ್​ಗೆ ಕಾಡ್ತಿದೆ. ಸದ್ಯ ದರ್ಶನ್​ ಮುಂದೆ ಒಂದಷ್ಟು ಆಯ್ಕೆಗಳಂತು ಇವೆ. ಅವುಗಳಲ್ಲಿ ಮೂರು ಆಯ್ಕೆಗಳು ಮುಖ್ಯವಾಗಿವೆ. ಇದಕ್ಕಾಗಿ ದರ್ಶನ್ ಪರ ವಕೀಲ ಸಿ.ವಿ ನಾಗೇಶ್ ಕೆಲ ಸಿದ್ಧತೆ ಮಾಡಿದ್ದಾರೆ.
/newsfirstlive-kannada/media/post_attachments/wp-content/uploads/2024/10/Darshan-bellary-Jail-12.jpg)
ಆಯ್ಕೆ ಮೂರು.. ಸಿಗುತ್ತಾ ಬೇಲು?
ಆಯ್ಕೆ 1 : ಜಾಮೀನು ಕೋರಿ ಹೈಕೋರ್ಟ್​ಗೆ ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಲಿದ್ದಾರೆ. ಈಗಾಗಲೇ ಜಾಮೀನು ಅರ್ಜಿ ಸಲ್ಲಿಕೆಗೆ ಹಿರಿಯ ವಕೀಲ ಸಿ.ವಿ ನಾಗೇಶ್​​ ಸಿದ್ಧತೆ ಮಾಡ್ಕೊಂಡಿದ್ದು, ಇವತ್ತೇ ಹೈಕೋರ್ಟ್​ ಮೊರೆ ಹೋಗುವ ಸಾಧ್ಯತೆ ಇದೆ.
ಆಯ್ಕೆ 2 : ಅನಾರೋಗ್ಯದ ಕಾರಣವನ್ನು ನೀಡಿ 57ನೇ ಸಿಸಿಹೆಚ್​ ಕೋರ್ಟ್​ನಲ್ಲಿಯೇ ಮತ್ತೊಮ್ಮೆ ಜಾಮೀನಿಗಾಗಿ ಅರ್ಜಿ ಸಲ್ಲಿಸಬಹುದು. ಈಗಾಗಲೇ ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್​​ಗೆ ಬೇಲ್​​ ನೀಡುವಂತೆ ಮನವಿ ಮಾಡಬಹುದು.
ಆಯ್ಕೆ 3 : ಅನಾರೋಗ್ಯಕ್ಕೆ ಚಿಕಿತ್ಸೆಗಾಗಿ ಪ್ರತ್ಯೇಕ ರಿಟ್ ಅರ್ಜಿ ಸಲ್ಲಿಸುವ ಪ್ಲಾನ್​​ ಕೂಡ ಇದೆ. ಸ್ವಂತ ವೆಚ್ಚದಲ್ಲಿ ಖಾಸಗಿ ಆಸ್ಪತ್ರೆ ಚಿಕಿತ್ಸೆಗೆ ದರ್ಶನ್​ ಮನವಿ ಮಾಡಬಹುದು.
ಇದನ್ನೂ ಓದಿ: Photo: ಕವಿತಾ, ಚಂದು ಮಡಿಲಲ್ಲಿ ಮುದ್ದಾದ ಕಂದಮ್ಮ.. ಮೊದಲು ದೃಷ್ಟಿ ತೆಗಿರಿ ಮೇಡಂ ಎಂದ ಅಭಿಮಾನಿಗಳು​!
ಆದ್ರೆ, ಮೊದಲ ಆಯ್ಕೆ ಅಂದ್ರೆ ಹೈಕೋರ್ಟ್​​ಗೆ ಜಾಮೀನು ಕೋರುವ ಸಾಧ್ಯತೆಯೇ ಹೆಚ್ಚಾಗಿದ್ದು, ಹೈಕೋರ್ಟ್​ಗೆ ಸಲ್ಲಿಸಲಿರುವ ಜಾಮೀನು ಅರ್ಜಿಯಲ್ಲಿಯೂ ದರ್ಶನ್​ ಅನಾರೋಗ್ಯದ ವಿಷಯವನ್ನ ಹೆಚ್ಚುವರಿ ಕಾರಣವಾಗಿ ಉಲ್ಲೇಖಿಸಲು ಸಿದ್ಧತೆ ನಡೆದಿದೆ. ಈಗಾಗಲೇ ವೈದ್ಯಕೀಯ ದಾಖಲೆಗಳಿಗಾಗಿ ಜೈಲು ಅಧಿಕಾರಿಗಳಿಂದ ಮಾಹಿತಿ ಪಡೆಯಲು ವಕೀಲರು ಮುಂದಾಗಿದ್ದಾರೆ.
/newsfirstlive-kannada/media/post_attachments/wp-content/uploads/2024/10/Bellary-Jail-Darshan.jpg)
ದರ್ಶನ್​​​​ಗೆ ‘ಬೆನ್ನು’ಬಿದ್ದ ನೋವು.. ಬೆಂಗಳೂರಿಗೆ ಶಿಫ್ಟ್​ ಆಗಲು ಪ್ಲ್ಯಾನ್​!
ಸದ್ಯ ಜಾಮೀನಂತು ಸಿಕ್ಕಿಲ್ಲ. ದರ್ಶನ್ ಕೆಲ ದಿನಗಳಿಂದ ಬೆನ್ನು ನೋವಿನಿಂದ ಬಳಲ್ತಿದ್ದಾರೆ. ನಡೆಯಲು ಕೂಡ ಕಷ್ಟ ಆಗುತ್ತಿದೆ ಎನ್ನಲಾಗಿದೆ. ಈ ಕಾರಣಕ್ಕೆ ದರ್ಶನ್ ಕುಟುಂಬಸ್ಥರು ಮೆಡಿಕಲ್ ವರದಿ ಸಿದ್ಧ ಮಾಡ್ಕೊಂಡಿದ್ದಾರೆ. ಇದೇ ಕಾರಣ ನೀಡಿ ದರ್ಶನ್ ಬೆಂಗಳೂರಿಗೆ ಶಿಫ್ಟ್​ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ: ದರ್ಶನ್ ಅಭಿಮಾನಿಗಳಿಗೆ ಸಹಿಸಲಾಗದ ನೋವು.. ಮುಂದಿನ ದಾರಿ ಏನು? ಕಾನೂನು ತಜ್ಞರು ಏನು ಹೇಳ್ತಾರೆ?
ಒಟ್ಟಾರೆ, ಬೇಲ್​​​ ವಿಚಾರದಲ್ಲಿ ಪ್ರಸನ್ನ ಕುಮಾರ್​ ವಾದವೇ ಜಡ್ಜ್​ಗೆ ಹೆಚ್ಚು ಸಮಂಜಸ ಎನಿಸಿದೆ. ಹಾಗಾಗಿ ದರ್ಶನ್​ಗೆ ಜಾಮೀನು ನಿರಾಕರಿಸಲಾಗಿದ್ದು, ಅಭಿಮಾನಿಗಳಿಗೆ ನಿರಾಸೆಯಾಗಿದೆ. ಜೈಲು ಮುಂಭಾಗ ಗಂಟಲು ಬತ್ತುವ ರೀತಿಯಲ್ಲಿ ಡಿ ಬಾಸ್​​ ಡಿ ಬಾಸ್​​ ಅರಚಾಟಕ್ಕೆ ಸೀಮಿತ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us