/newsfirstlive-kannada/media/post_attachments/wp-content/uploads/2024/05/kd-vs-devil1.jpg)
ಸ್ಯಾಂಡಲ್​ವುಡ್​ನಲ್ಲಿ ಬರುವ ಸಿನಿಮಾಗಳ ಮೇಲೆ ಕನ್ನಡದ ಪ್ರೇಕ್ಷಕರು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ರಾಕಿಂಗ್​ ಸ್ಟಾರ್​ ಯಶ್​ ಅವರ ಕೆಜಿಎಫ್​, ರಿಷಬ್​ ಶೆಟ್ಟಿ ನಟನೆಯ ಕಾಂತಾರ, ನಟ ದರ್ಶನ್​ ಅಭಿನಯದ ಕಾಟೇರ್​ ಈ ಸಿನಿಮಾಗಳು ಸಾಕಷ್ಟು ಸದ್ದು ಮಾಡಿ ಬಾಕ್ಸ್​ ಆಫೀಸ್​ ಉಡೀಸ್​ ಮಾಡಿವೆ. ಇದೀಗ ಆ ಸಿನಿಮಾಗಳು ಒಂದು ಕಡೆಯಾದರೇ, ಈಗ ನಟ ಧ್ರುವ ಸರ್ಜಾ ಅಭಿನಯದ KD ಹಾಗೂ ಚಾಲೆಜಿಂಗ್ ಸ್ಟಾರ್ ದರ್ಶನ್​ ನಟನೆಯ ಡೆವಿಲ್ ನಡುವೆ ಜಿದ್ದಾಜಿದ್ದಿ ಶುರುವಾಗಿದೆ.
/newsfirstlive-kannada/media/post_attachments/wp-content/uploads/2024/05/kd-vs-devil.jpg)
ಇದನ್ನೂ ಓದಿ: ವಾಯ್ಸ್​ ಬದಲಿಸೋ ಆ್ಯಪ್ ಬಳಸಿ 7 ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ.. ಅನಕ್ಷರಸ್ಥನ ಕೃತ್ಯಕ್ಕೆ ಪೊಲೀಸರೇ ಶಾಕ್!
ಮೂಲಗಳ ಪ್ರಕಾರ ನಟ ದರ್ಶನ್ ಅವರ ಡೆವಿಲ್ ಹಾಗೂ ಧ್ರುವ ಸರ್ಜಾರ KD ಸಿನಿಮಾಗಳು ಒಂದೇ ತಿಂಗಳಲ್ಲಿ ತೆರೆಗೆ ಬರಲು ಸಿದ್ಧತೆ ನಡೆಸಿಕೊಂಡಿವೆ. ಸುಮಾರು ಮೂರು ವರ್ಷಗಳ ಬಳಿಕ ನಟ ಧ್ರುವ ಸರ್ಜಾ ನಟನೆಯ ಎರಡು ಸಿನಿಮಾಗಳು ರಿಲೀಸ್ ಆಗುತ್ತಿವೆ. 'ಮಾರ್ಟಿನ್' ಹಾಗೂ 'ಕೆಡಿ' ಈ ಎರಡೂ ಸಿನಿಮಾಗಳು ಪ್ಯಾನ್ ಇಂಡಿಯಾ ಸಿನಿಮಾಗಳಾಗಿವೆ. ಆದರೆ ಇದರ ಮಧ್ಯೆ ನಿರ್ದೇಶಕ ಪ್ರೇಮ್ 'ಕೆಡಿ' ಸಿನಿಮಾವನ್ನು ಡಿಸೆಂಬರ್​ನಲ್ಲಿ ರಿಲೀಸ್ ಮಾಡುವುದಾಗಿ ಹೇಳಿದ್ದಾರೆ. ಆದರೆ ಇದೇ ಡಿಸೆಂಬರ್‌ನಲ್ಲಿ ದರ್ಶನ್ ಸಿನಿಮಾ 'ಡಿವಿಲ್' ಕೂಡ ಬಿಡುಗಡೆಯಾಗುತ್ತಿದೆ.
/newsfirstlive-kannada/media/post_attachments/wp-content/uploads/2024/02/Devil.jpg)
ಇನ್ನು, ಕೆಡಿ ರಿಲೀಸ್ ಬಗ್ಗೆ ಮಾತಾಡಿದ ನಟ ಹಾಗೂ ನಿರ್ದೇಶಕ ಪ್ರೇಮ್, ಯುದ್ಧಕ್ಕೆ ರೆಡಿ ಯಾರಾದ್ರು ಬನ್ನಿ. ಮೊದಲ ಇಂಡಿಯನ್ ಸಿನಿಮಾ ನಮ್ಮದು. ಈ ಮಟ್ಟಿಗೆ ಆರ್ಕೆಸ್ಟ್ರಾ ಬಳಸಿರೋದು. ಯುಎಸ್​ನಲ್ಲಿ ಸಿನಿಮಾದ ಆರ್ಕೆಸ್ಟ್ರಾ ಕೆಲಸ ಮುಗಿಸಿದ್ದೀವಿ. ಈ ಸಿನಿಮಾದ ಮೊದಲ ಹೀರೋ ಅರ್ಜುನ್ ಜನ್ಯಾ. ಆಸ್ಪತ್ರೆಯಲ್ಲಿ ಇದ್ಕೊಂಡೆ ಅರ್ಜುನ್ ಜನ್ಯಾ ಕೆಲಸ ಮಾಡಿಕೊಟ್ಟಿದ್ದಾರೆ. ಆಗಸ್ಟ್ ತಿಂಗಳಲ್ಲಿ ಟೀಸರ್ ರಿಲೀಸ್ ಮಾಡ್ತೀನಿ. ಮುಂಬೈನಲ್ಲಿ ಟೀಸರ್ ಲಾಂಚ್ ಆಗಲಿದೆ. ಅದೇ ತಿಂಗಳು ಫಸ್ಟ್ ಸಿಂಗಲ್ ರಿಲೀಸ್ ಆಗಲಿದ್ದು, ಡಿಸೆಂಬರ್ ತಿಂಗಳಲ್ಲಿ KD ಪಿಚ್ಚರ್ ರಿಲೀಸ್ ಮಾಡ್ತೀವಿ. ಇಂಡಸ್ಟ್ರಿಯಲ್ಲೇ ಕೆ.ಡಿ ಆಡಿಯೋ ರೈಟ್ಸ್ ದೊಡ್ಡ ಮಟ್ಟಕ್ಕೆ ಮಾರಾಟ ಆಗಿದೆ. ಇದೆಲ್ಲಾ ಸಾಧನೆಗೆ ಕೆವಿಎನ್ ಪ್ರೊಡಕ್ಷನ್ ಕಾರ. 17 ಕೋಟಿ 70 ಲಕ್ಷಕ್ಕೆ KD ಆಡಿಯೋ ಸೇಲ್ ಆಗಿದೆ. ಅತ್ಯಧಿಕ ಮೊತ್ತಕ್ಕೆ ಆನಂದ್ ಆಡಿಯೋ ಖರೀದಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us