/newsfirstlive-kannada/media/post_attachments/wp-content/uploads/2024/06/dboss11.jpg)
ಮೈಸೂರು: ರೇಣುಕಾಸ್ವಾಮಿ ಕೊಲೆ ಕೇಸ್​ಗೆ ಸಂಬಂಧಿಸಿದಂತೆ ಸ್ಯಾಂಡಲ್​ವುಡ್​​​​ ನಟ ದರ್ಶನ್ ಅರೆಸ್ಟ್ ಆಗಿ ಇಂದಿಗೆ ಮೂರನೇ ದಿನ. ಇತ್ತ ಹೀರೋನೇ ಇಲ್ಲದ ಡೆವಿಲ್​ ಸಿನಿಮಾ ಶೂಟಿಂಗ್ ಬಿಕೋ ಎನ್ನುತ್ತಿದ್ದು, ಕೊನೆಗೆ ಪ್ಯಾಕಪ್ ಮಾಡಿದೆ.
​‘ಡೆವಿಲ್’ ಪ್ಯಾಕಪ್​
ಮೈಸೂರಿನ ಲಲಿತ ಮಹಲ್ ಹೋಟೆಲ್ ನಲ್ಲಿ ದರ್ಶನ್​ ಬಹುನಿರೀಕ್ಷಿತ ಡೆವಿಲ್ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಆದರೆ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್​ ಅರೆಸ್ಟ್​ ಆಗಿದ್ದು, ನಟನನ್ನು ನಂಬಿದ್ದ ಚಿತ್ರತಂಡಕ್ಕೆ ದೊಡ್ಡಮಟ್ಟದ ನಷ್ಟವಾಗಿದೆ.
ಇದನ್ನೂ ಓದಿ: ಶೂಟಿಂಗ್​ ಸ್ಥಳದಲ್ಲಿ ಮೌನವಿದ್ದ ನಟ ದರ್ಶನ್​! ಕೊಲೆ ಮಾಡಿದ ಪಶ್ಚಾತ್ತಾಪ ಕಾಡುತ್ತಿತ್ತೇ?
/newsfirstlive-kannada/media/post_attachments/wp-content/uploads/2024/06/DARSHAN_MURDER_NEW_3.jpg)
ಲಕ್ಷಾಂತರ ರೂಪಾಯಿ ನಷ್ಟ
ಇತ್ತ ದರ್ಶನ್ ಬಂಧನ ಸುದ್ದಿ ತಿಳಿಯುತ್ತಿದ್ದಂತೆ ಚಿತ್ರತಂಡ ಪ್ಯಾಕಪ್ ಮಾಡಿದೆ. ಜೊತೆಗೆ ದಿನವೊಂದಕ್ಕೆ ಲಕ್ಷಾಂತರ ರೂಪಾಯಿ ಬಾಡಿಗೆಯೂ ವ್ಯರ್ಥವಾಗಿದೆ. ಸಹಕಲಾವಿದರು, ಟೆಕ್ನಿಷಿಯನ್ ಸೇರಿ ಎಲ್ಲರಿಗೂ ಸಂಭಾವನೆ ನೀಡಲು ಕಷ್ಟವಾಗಿದೆ.
ಇದನ್ನೂ ಓದಿ: ಕಟ್ಟಿಗೆ, ಹಗ್ಗ, ಸಿಸಿಟಿವಿ, ಬಟ್ಟೆ, ಎಣ್ಣೆ ಬಾಟಲಿ.. ಒಂದಾ, ಎರಡಾ.. ರೇಣುಕಾಸ್ವಾಮಿ ಪ್ರಕರಣದಲ್ಲಿ ಸಿಕ್ಕ ಸಾಕ್ಷ್ಯಗಳು!
ಹೀರೋನೇ ಇಲ್ಲದ ಸಿನಿಮಾ
ಜೂನ್ 11 ರಂದೇ ಡೆವಿಲ್​ ಚಿತ್ರತಂಡ ಚಿತ್ರೀಕರಣವನ್ನು ಸ್ಥಗಿತ ಮಾಡಿದೆ. ಕೋಟ್ಯಾಂತರ ರೂಪಾಯಿ ಬಜೆಟ್ ನಲ್ಲಿ ನಿರ್ಮಾಣವಾಗ್ತಿದ್ದ ಚಿತ್ರ ಇದೀಗ ಹೀರೋ ಇಲ್ಲದೆ ಸಪ್ಪಗಾಗಿದೆ.
/newsfirstlive-kannada/media/post_attachments/wp-content/uploads/2024/06/DARSHAN_MURDER_NEW_9.jpg)
ಅಡ್ವಾನ್ಸ್ ಬುಕ್ಕಿಂಗ್ ಮಾಡಿಕೊಂಡಿದ್ದ ಚಿತ್ರತಂಡ
ಜೂನ್ ಅಂತ್ಯದವರೆಗೆ ಡೆವಿಲ್​ ಚಿತ್ರತಂಡ ಅಡ್ವಾನ್ಸ್ ಬುಕ್ಕಿಂಗ್ ಮಾಡಿಕೊಂಡಿತ್ತು. ಆದರೀಗ ದರ್ಶನ್​ನಿಂದಾಗಿ ಚಿತ್ರತಂಡಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us