/newsfirstlive-kannada/media/post_attachments/wp-content/uploads/2024/06/darshan23.jpg)
ರೇಣುಕಾಸ್ವಾಮಿ ಹತ್ಯೆ ಕೇಸ್​ನಲ್ಲಿ ಆರೋಪಿ ದರ್ಶನ್​ ಅರೆಸ್ಟ್ ಆಗಿದ್ದಾರೆ. ಇಂದಿಗೆ ಸುಮಾರು 11 ದಿನಗಳ ಕಾಲ ಪೊಲೀಸರ ವಶದಲ್ಲಿದ್ದು, ತನಿಖೆ ಎದುರಿಸುತ್ತಿದ್ದಾರೆ. ಪೊಲೀಸರ ವಶದಲ್ಲಿರುವ ದರ್ಶನ್​ರವರು ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ತಗಲಾಕಿಕೊಂಡ ಬಳಿಕ ತೂಕ ಕಳೆದುಕೊಂಡಿದ್ದಾರೆ.
ನಟ ದರ್ಶನ್​​ ಕಾಮಾಕ್ಷಿ ಠಾಣೆ ಪೊಲೀಸರ ವಶದಲ್ಲಿದ್ದಾರೆ. ಬಂಧನವಾದ ಬಳಿಕ ದರ್ಶನ್​ 1 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ. ಜೊತೆಗೆ ಬಿಪಿ ಕೂಡ ವ್ಯತ್ಯಾಸ ಕಂಡಿದೆ ಎಂದು ಪೊಲೀಸ್​​ ಮೂಲಗಳಿಂದ ಮಾಹಿತಿಗಳು ಲಭಿಸಿವೆ.
ಅರೆಸ್ಟ್​ ಆದ ಮೊದಲ ದಿನ ದರ್ಶನ್​ ನೀರು ಮತ್ತು ಜ್ಯೂಸ್​ ಮಾತ್ರ ಕುಡಿದಿದ್ದರು. ಜೂನ್​ 11ರಂದು ಬೌರಿಂಗ್​ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಅವರ ತೂಕ 107 ಆಗಿತ್ತು. BP 134/86 mm Hg ಇತ್ತು.
/newsfirstlive-kannada/media/post_attachments/wp-content/uploads/2024/06/DARSHAN-32-1.jpg)
ಮರುದಿನ ದರ್ಶನ್​ ಅವರನ್ನು ಮಲ್ಲತ್ತಹಳ್ಳಿ ಪಿಎಚ್​ಸಿ ಸಿಬ್ಬಂದಿ ಡಾ. ಸವಿತಾ ಮತ್ತು ಅವರ ತಂಡ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಅವರ BP 165/95 ಏರಿತ್ತು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಅಮ್ಮನಿಗೆ ಅನಾರೋಗ್ಯ, ಕಣ್ಣೀರು ಹಾಕಿತ್ತಿರೋ ಅಕ್ಕ.. ದರ್ಶನ್​ ನಂಬಿ ಜೈಲು ಸೇರಿದ ನಂದೀಶ್ ಕುಟುಂಬಕ್ಕೆ ಸಂಕಷ್ಟ
ಡಾ. ಸವಿತಾರವರು ದರ್ಶನ್​ ಅವರನ್ನ ಪರಿಶೀಲಿಸಿದ್ದು, ನಡುಕವಿದೆಯೇ ಎಂದು ಪ್ರಶ್ನಿಸಿದಾಗ, ’ಏನು ಇಲ್ಲ ಅಮ್ಮಾ, ನಾನು ಚೆನ್ನಾಗಿಯೇ ಇದ್ದೇನೆ’ ಎಂದು ಉತ್ತರಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/06/darshan-18-1.jpg)
ಇದನ್ನೂ ಓದಿ: ದರ್ಶನ್, ಪ್ರಜ್ವಲ್​ ಕುರಿತು ಮತ್ತೊಂದು ಟ್ವಿಟ್ ಮಾಡಿದ ನಟಿ ರಮ್ಯಾ.. ಈ ಸಲ ಏನಂದ್ರು?
ಜೂನ್​ 13ರಂದು ಡಾ. ಸವಿತಾರವರು ಹೇಳಿದಂತೆ ದರ್ಶನ್​ ಅವರ ಬಿಪಿ 170/100ಕ್ಕೆ ಮುಟ್ಟಿತ್ತು. ಬಳಿಕ ಔಷಧಿ ನೀಡಿಲಾಗಿದೆ. ಅದರಿಂದ ಅವರು ಚೆನ್ನಾಗಿ ನಿದ್ರಿಸಿದ್ದಾರೆ. ಆದರೆ ಜೂನ್ 18 ರಂದು ದರ್ಶನ್​ ಬಿಪಿ 180/100mm Hg ಆಗಿತ್ತು. ಬಳಿಕ ಈ ವಿಚಾರವನ್ನು ವೈದ್ಯರಿಗೆ ತಿಳಿದ್ದೆವು ಎಂದು ಹೇಳಿದ್ದಾರೆ.
ಶ್ರುಕವಾರದಂದು ಪರಿಶೀಲಿಸಿದಾಗ ದರ್ಶನ್​ ತೂಕ 106 ಕೆಜಿ ಇಳಿದಿದೆ. ಬಿಪಿ 130/90ರಲ್ಲಿ ಕಾಣಿಸಿಕೊಂಡಿದೆ ಎಂದು ಡಾ ಸವಿತಾ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us