Advertisment

‘ತಿಮ್ಮಿ ಥರಾ ಇದ್ಲು.. ಪವಿತ್ರಾ ಟ್ರ್ಯಾಪ್​ಗೆ ದರ್ಶನ್​ ತಗ್ಲಾಕೊಂಡ್ರು’ ನಿರ್ದೇಶಕಿ ಚಂದ್ರಕಲಾ ಬಿಚ್ಚಿಟ್ರು ಅಚ್ಚರಿಯ ಮಾಹಿತಿ

author-image
AS Harshith
Updated On
‘ತಿಮ್ಮಿ ಥರಾ ಇದ್ಲು.. ಪವಿತ್ರಾ ಟ್ರ್ಯಾಪ್​ಗೆ ದರ್ಶನ್​ ತಗ್ಲಾಕೊಂಡ್ರು’ ನಿರ್ದೇಶಕಿ ಚಂದ್ರಕಲಾ ಬಿಚ್ಚಿಟ್ರು ಅಚ್ಚರಿಯ ಮಾಹಿತಿ
Advertisment
  • ಪವಿತ್ರಾ ಗೆ ಪಶ್ಚಾತ್ತಾಪ ಅನ್ನೋದೆ ಇಲ್ಲ ಎಂದ ನಿರ್ದೇಶಕಿ
  • ನನಗೋಸ್ಕರ ಒಂದು ಕೊಲೆ ಆಯ್ತಲ್ಲಾ ಅಂತಾ ಖುಷಿ ಪಟ್ಟಿರುತ್ತಾಳೆ
  • ಕಿಸ್ಸಿಂಗ್​ ಸೀನ್​ ಇದೆ ಎಂದು ಪವಿತ್ರಾ ಗೌಡ ಸಿನಿಮಾ ಒಪ್ಪಿಕೊಂಡಳು

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ದರ್ಶನ್​, ಪವಿತ್ರಾ ಗೌಡ ಮತ್ತು ಡಿ ಗ್ಯಾಂಗ್​ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇದೀಗ ಈ ಪ್ರಕರಣದಲ್ಲಿ A1 ಆರೋಪಿಯಾಗಿರುವ ನಟಿ ಪವಿತ್ರಾ ಗೌಡ ಬಗ್ಗೆ ಆಶಿಕಿ ಸಿನಿಮಾದ ನಿರ್ದೇಶಕಿ ಚಂದ್ರಕಲಾ ಮಾತನಾಡಿದ್ದಾರೆ. ಮಾತ್ರವಲ್ಲದೆ ನಟಿಯ ಬಗ್ಗೆ ಶಾಂಕಿಂಗ್​ ಮಾಹಿತಿ ಬಿಚ್ಚಿಟ್ಟಿದ್ದಾರೆ. 

Advertisment

ಇದನ್ನೂ ಓದಿ: ಡೇಟಿಂಗ್​​ ಆ್ಯಪ್​ ಮೇಲೆ Invest ಮಾಡಿದ ನಟಿ! ಆಕೆಯ ಉದ್ದೇಶ ಏನು ಗೊತ್ತಾ?

ನಿರ್ದೇಶಕಿ ಚಂದ್ರಕಲಾ ‘ಪವಿತ್ರಾ ಟ್ರ್ಯಾಪ್​​ಗೆ ದರ್ಶನ್ ತಗ್ಲಾಕೊಂಡ್ರು. ಅವಳಿಗೆ ಪಶ್ಚಾತ್ತಾಪ ಅನ್ನೋದೆ ಇಲ್ಲ. ನನಗೋಸ್ಕರ ಒಂದು ಕೊಲೆ ಆಯ್ತಲ್ಲಾ ಅಂತಾ ಖುಷಿ ಪಟ್ಟಿರುತ್ತಾಳೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಿಶ್ವದ ಮೊದಲ CNG ಬೈಕ್​ ಪರಿಚಯಿಸಿದ ಬಜಾಜ್​; ಕೈಗೆಟಕುವ ಬೆಲೆ, 330km​ ಮೈಲೇಜ್​, ಸಖತ್​ ಫೀಚರ್ಸ್​!

Advertisment

ಬಳಿಕ ಮಾತು ಮುಂದುವರೆಸಿದ ಅವರು, ‘ಪವಿತ್ರಾ ಮೊದ್ಲು ತಿಮ್ಮಿ ಥರಾ ಇದ್ಲು. ಈಗ ಬೇರೆ ಲೆವೆಲ್ಲಿಗೆ ಬೆಳೆದಿದ್ದಾಳೆ. ಅವಳು ಹೀರೋಯಿನ್ ಆಗಿ ಬೆಳಿಬೇಕು ಅಂತಾ ಬಂದವಳಲ್ಲ. ಹೀರೋಯಿನ್ ಆಗಬೇಕು ಅನ್ನೋರು ಈ ಥರಾ ಇರಲ್ಲ. ಪವಿತ್ರಾಗೆ ಒಂಚೂರು ಆ್ಯಕ್ಟಿಂಗ್ ಬರಲ್ಲ‌. ಕಿಸ್ಸಿಂಗ್ ಸೀನ್ ಇದೆ ಅಂದಾಗ ಸಿನಿಮಾ ಒಪ್ಪಿದ್ಲು. ಆಮೇಲೆ ಏಕಾಏಕಿ ಕಿರಿಕ್ ತೆಗೆದಳು. ಅವಳು ನಮ್ಮ ಸಿನಿಮಾದಿಂದ ದೂರ ಹೋಗಿದ್ದೇ ನಮಗೆ ಖುಷಿ. ಅವಳ ಶೋಕಿ ಜೀವನಕ್ಕೆ, ದರ್ಶನ್ ಬಲಿಯಾದ್ರು ಎಂದು ಆಶಿಕಿ ಸಿನಿಮಾದ ನಿರ್ದೇಶಕಿ ಚಂದ್ರಕಲಾ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment