/newsfirstlive-kannada/media/post_attachments/wp-content/uploads/2024/06/Darshan-fan.jpg)
ದರ್ಶನ್ ಅಭಿಮಾನಿ ರಾಜು
ಯಾದಗಿರಿ: ದರ್ಶನ್ ಅಭಿಮಾನಿಯೋರ್ವ ದಾಸನ ವಿರುದ್ಧ ಸ್ಟೇಟಸ್ ಹಾಕಿಕೊಂಡ ಯುವಕನಿಗೆ ಕೊಲೆ ಬೆದರಿಕೆ ಹಾಕಿದ ಘಟನೆ ಯಾದಗಿರಿಯಲ್ಲಿ ನಡೆದಿದೆ. ರಾಜು ಎಂಬಾತ ಪಂಚರ್ ಅಂಗಡಿ ಇಟ್ಟುಕೊಂಡಿದ್ದ ಅಭಿ ಎಂಬ ಯುವಕನಿಗೆ ಜೀವ ಬೆದರಿಕೆ ಹಾಕಿದ್ದಾನೆ.
ನಿನ್ನನ್ನು ಜೀವಂತ ಸುಡುತ್ತೇವೆ
ಅಭಿ ತನ್ನ ಸ್ಟೇಟಸ್ನಲ್ಲಿ ಬಾಸ್ ಬಾಸ್ ಎಂದು ಯಾಕೆ ಇಡ್ತೀರಿ?. ಬಕೆಟ್ ಯಾಕ್ ಹಿಡಿತೀರಿ. ತಾಯಿ-ತಂದೆಗೆ ಬಕೆಟ್ ಹಿಡಿಯಿರಿ ಎಂದು ಸ್ಟೇಟಸ್ ಹಾಕಿಕೊಂಡಿದ್ದನು. ಇದನ್ನು ಕಂಡು ದರ್ಶನ್ ಅಭಿಮಾನಿ ಸಂಘದ ಯಾದಗಿರಿ ಜಿಲ್ಲಾಧ್ಯಕ್ಷ ರಾಜು ಎಂಬವನು ಅಭಿಗೆ ದೂರವಾಣಿ ಕರೆ ಮಾಡಿದ್ದಾನೆ. ನಿನ್ನನ್ನು ಜೀವಂತ ಸುಡೋದಾಗಿ ಬೆದರಿಕೆ ಹಾಕಿದ್ದಾನೆ.
[caption id="attachment_69527" align="alignnone" width="800"] ಪಂಚರ್ ಅಂಗಡಿ ಯುವಕ ಅಭಿ[/caption]
ಇದನ್ನೂ ಓದಿ: ಆರೋಪಿ ಪವಿತ್ರಾಗೆ 7 ಗಂಟೆಯಾದ್ರೂ ನಿದ್ದೆ ಬಿಟ್ಟಿಲ್ಲ.. ಸರಿಯಾಗಿ ಕ್ಲಾಸ್ ತೆಗೆದುಕೊಂಡ ಕಮಿಷನರ್ ದಯಾನಂದ್
ಬಾಸ್ ಬಗ್ಗೆ ಮಾತಾಡಿದ್ರೆ ಖಾಲಿಯಾಗ್ತಿಯಾ
ನಿನ್ನ ಮನೆ ಹಾಗೂ ಅಂಗಡಿಗೆ ಬೆಂಕಿ ಹಚ್ಚಬೇಕಾಗುತ್ತೆ. ಬಾಸ್ ಅಂದ್ರೂ ಅಷ್ಟೇ, ಡಿ ಬಾಸ್ ಅಂದ್ರೂ ಅಷ್ಟೇ. ಬಾಸ್ ಬಗ್ಗೆ ಮಾತಾಡಿದ್ರೆ ಖಾಲಿಯಾಗ್ತಿಯಾ ನೀನು. ಅಂಗಡಿ ಸಮೇತ ಬೆಂಕಿ ಹಚ್ಚುತ್ತಾರೆ. ಕೂಡಲೇ ಕ್ಷಮೆ ಕೇಳಿ ವಿಡಿಯೋ ಮಾಡಿ ಹಾಕು. ಹಾಕಿರೋ ವಿಡಿಯೋ ಡಿಲೀಟ್ ಮಾಡು ಎಂದು ಅಭಿಗೆ ದರ್ಶನ್ ಅಭಿಮಾನಿ ಸಂಘದ ಜಿಲ್ಲಾ ಅಧ್ಯಕ್ಷ ರಾಜು ಬೆದರಿಕೆ ಹಾಕಿದ್ದಾನೆ.
[caption id="attachment_69528" align="alignnone" width="800"] ಅಭಿ- ರಾಜು[/caption]
ಇದನ್ನೂ ಓದಿ: ದರ್ಶನ್ ಒಳಿತಿಗಾಗಿ ಶನಿಪೂಜೆ ಮಾಡಿಸಿದ ಬಾವ ಮಂಜುನಾಥ್!
ಅಭಿಮಾನಿ ಅರೆಸ್ಟ್
ಅಭಿಗೆ ಬೆದರಿಕೆ ಹಾಕಿದ ಆಡಿಯೋ ವೈರಲ್ ಆಗ್ತಿದ್ದಂತೆ ಪೊಲೀಸರು ಅಲರ್ಟ್ ಆಗಿದ್ದಾರೆ. ತಕ್ಷಣವೇ ಎಚ್ಚೆತ್ತುಕೊಂಡ ಯಾದಗಿರಿ ನಗರ ಠಾಣೆ ಪೊಲೀಸರು ದರ್ಶನ್ ಅಭಿಮಾನಿ ರಾಜುನನ್ನ ಬಂಧಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ