/newsfirstlive-kannada/media/post_attachments/wp-content/uploads/2024/07/DARSHAN__AJJI.jpg)
ಬೆಂಗಳೂರು: ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 17 ಆರೋಪಿಗಳು ಜೈಲು ಸೇರಿದ್ದಾರೆ. ಇಂದು ದರ್ಶನ್ ಅವರ ತಾಯಿ, ಸಹೋದರ ಜೈಲಿಗೆ ಭೇಟಿ ನೀಡಿ ಅವರನ್ನು ಮಾತನಾಡಿಸಿದ್ದಾರೆ. ಆದರೆ ನಿತ್ಯ ಒಬ್ಬರಿಲ್ಲ, ಒಬ್ಬರು ದರ್ಶನ್ ಅವರನ್ನು ನೋಡಲು ಅಭಿಮಾನಿಗಳು ಜೈಲಿಗೆ ಬರುತ್ತಿದ್ದಾರೆ. ಸದ್ಯ ಇವತ್ತು ದರ್ಶನ್ ಅವರನ್ನು ನೋಡಲು ಹುಬ್ಬಳ್ಳಿಯಿಂದ ಅಜ್ಜಿಯೊಬ್ಬರು ಜೈಲಿನ ಬಳಿ ಕಾದು ಕುಳಿತ್ತಿದ್ದಾರೆ.
ಇದನ್ನೂ ಓದಿ: ನಟ ದರ್ಶನ್ ತಾಯಿ ಮೀನಾ, ಸಹೋದರ ದಿನಕರ ಜೈಲಿಗೆ ಭೇಟಿ.. ಮಗನ ಸಂಕಟ ನೋಡಿ ಅಮ್ಮ ಭಾವುಕ..
ನಟ ದರ್ಶನ್ ಅವರನ್ನು ನೋಡಲು ಹುಬ್ಬಳ್ಳಿಯಿಂದ ಬಂದಿದ್ದೀನಿ. ಸಾರಥಿ, ಕಾಟೇರ, ಬುಲ್ ಬುಲ್, ಬೃಂದಾವನ ಸೇರಿದಂತೆ ಅವರ ಎಲ್ಲ ಸಿನಿಮಾಗಳನ್ನು ನೋಡಿದ್ದೇನೆ. ಅಷ್ಟು ದೂರದಿಂದ ನಾನು ಬಂದಿದ್ದೇನೆ. ಈಗ ಅವರನ್ನು ನೋಡಲು ನನ್ನನ್ನು ಬಿಡಬೇಕು. ಬರೀ ಅವರ ಕುಟುಂಬದವರನ್ನೇ ಬಿಡು ಅಂತ ದರ್ಶನ್ ಅವರು ಹೇಳಿದ್ದಾರಂತೆ. ಅದರಂತೆ ನಮ್ಮಂತ ಅಭಿಮಾನಿಯನ್ನ ನೋಡಲು ಬಿಡಬೇಕು. ನಾನು ಬಡವಳು, ನನ್ನ ಹತ್ತಿರ ದುಡ್ಡಿಲ್ಲ. ಆದರು ದರ್ಶನ್ ಸಿನಿಮಾ ರಿಲೀಸ್ ಆದಾಗ ನೋಡುತ್ತಿದ್ದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪಾಂಡ್ಯ ಮ್ಯಾಚ್ ವಿನ್ನಿಂಗ್ ಆಟಕ್ಕೆ ಸೆಲ್ಯೂಟ್.. ಗೆಲುವಿನ ಹಿಂದೆ ಹಾರ್ದಿಕ್ ನುಂಗಿರುವ ನೋವುಗಳು ಎಷ್ಟು ಗೊತ್ತಾ..?
ದರ್ಶನ್ ಅವರು ಅಜ್ಜಿಯನ್ನು ನೋಡಲು ಬಿಡು ಎಂದು ಹೇಳಿದರೆ ಇವರು ಬಿಡುತ್ತಾರೆ. ನೋಡೋಕೆ ಬಂದ ಅಜ್ಜಿಗೆ ಕಿಮ್ಮತ್ ಇಲ್ವಾ?. ದರ್ಶನ್ ಅವರ ಹಾಡುಗಳನ್ನು ಹಾಡಿದ್ದೇನೆ. ಅಭಿಮಾನಿಯಾಗಿ ಬಂದೀನಿ. ಅಜ್ಜಿಯನ್ನು ನೋಡಲು ಬಿಡು ಅಂತ ದರ್ಶನ್ ಒಳಗಿಂದ ಹೇಳಿಕಳಿಸಲಿ. ದರ್ಶನ್ ಹೊರಗೆ ಬರಬೇಕು ಅಂತ ಯಾವ್ಯಾವ ದೇವರಿಗೆ ಕೈ ಮುಗಿದು ಕೇಳಿದ್ದೀನಿ ಗೊತ್ತಾ?. ನಂದು ಮನೆಯಿಲ್ಲ, ಆಸ್ತಿಯಿಲ್ಲ ಆದರೂ ದರ್ಶನ್ ಸಿನಿಮಾಗಳನ್ನ ಯಾವುದು ಬಿಡಲ್ಲ ಎಂದು ಅಜ್ಜಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ