newsfirstkannada.com

‘ದರ್ಶನ್ ಬಿಡುಗಡೆ ಆಗಲಿ’-ಬಳ್ಳಾರಿ ಸೆಂಟ್ರಲ್ ಜೈಲಿನ ಮುಂದೆ ಜಮಾಯಿಸಿದ ಅಭಿಮಾನಿಗಳ ಉದ್ಧಟತನ; ಆಗಿದ್ದೇನು?

Share :

Published August 30, 2024 at 3:34pm

Update August 30, 2024 at 3:35pm

    ದೇವತೆ ಕುಂಕುಮ ಜೊತೆ ಅಭಿಮಾನಿಗಳು ಏನೇನು ತಂದಿದ್ದರು?

    ಆರೋಪ ಮುಕ್ತರಾಗಿ ಬೇಗ ಬರಲೆಂದು ಅಭಿಮಾನಿಗಳು ಪೂಜೆ

    ಬಳ್ಳಾರಿಯಲ್ಲಿ ದರ್ಶನ್ ಅವರ ಅಭಿಮಾನಿಗಳಿಂದ ಉದ್ಧಟತನ

ಬಳ್ಳಾರಿ: ನಟ ದರ್ಶನ್​ ಅವರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ. ಸದ್ಯ ಇದರ ಬೆನ್ನಲ್ಲೇ ದರ್ಶನ್ ಆರೋಪ ಮುಕ್ತರಾಗಿ ಬೇಗ ರಿಲೀಸ್ ಆಗಲೆಂದು ಬಳ್ಳಾರಿಯ ಆರಾಧ್ಯ ದೇವತೆ ಕನಕದುರ್ಗಮ್ಮ ದೇವಿಯ ಕುಂಕುಮ ತಂದು ಅಭಿಮಾನಿಗಳು ಜೈಲು ಸಿಬ್ಬಂದಿಗೆ ಕೊಟ್ಟು ಹೋಗಿದ್ದಾರೆ.

ಇದನ್ನೂ ಓದಿ: ಬಳ್ಳಾರಿಯಲ್ಲಿ ದರ್ಶನ್ ಇರಲಿರುವ ಹೈ ಸೆಕ್ಯೂರಿಟಿ ಸೆಲ್‌ ಹೇಗಿದೆ.. 3 ದಶಕಗಳ ಹಿಂದೆ ನಿರ್ಮಿಸಿದ ಇದರ ಇತಿಹಾಸ ಗೊತ್ತಾ?

ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ಅವರನ್ನ ಸದ್ಯ ಬಳ್ಳಾರಿ ಜೈಲಿನಲ್ಲಿ ಬಂಧಿಸಿ ಇಡಲಾಗಿದೆ. ಆದರೆ ಅವರ ಅಭಿಮಾನಿಗಳು ಕನಕದುರ್ಗಮ್ಮ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥಿಸಿ ತೆಂಗಿನಕಾಯಿ ಒಡೆದಿದ್ದಾರೆ. ನಟ ಆರೋಪ ಮುಕ್ತವಾಗಿ ಜೈಲಿನಿಂದ ಶೀಘ್ರದಲ್ಲೇ ಬಿಡುಗಡೆಯಾಗಲಿ ಎಂದು ಪೂಜೆ ಸಲ್ಲಿಸಿದ್ದಾರೆ. ಈ ಪೂಜೆಯ ಬಳಿಕ ದೇವಿ ಬಳಿಯ ಅಕ್ಷತೆ, ಕುಂಕುಮ, ಭಂಡಾರವನ್ನು ತಂದಿದ್ದಾರೆ. ಬಳಿಕ ಅವುಗಳನ್ನೆಲ್ಲ ದರ್ಶನ್ ಅವರಿಗೆ ನೀಡುವಂತೆ ಜೈಲು ಅಧಿಕಾರಿಯ ಕೈಗೆ ಕೊಟ್ಟು ತೆರಳಿದ್ದಾರೆ. ದರ್ಶನ್ ಅಪರಾಧಿಯಲ್ಲ ಆರೋಪಿ. ಅವರು ಆರೋಪ ಮುಕ್ತರಾಗಿ ಹೊರ ಬಂದೇ ಬರುತ್ತಾರೆಂದು ಫ್ಯಾನ್ಸ್​ ವಿಶ್ವಾಸದಲ್ಲಿದ್ದಾರೆ.

ಇದನ್ನೂ ಓದಿ: ದರ್ಶನ್ ಕೈಯಲ್ಲಿ ಸಿಗರೇಟ್​, ಟೀ ಕುಡಿಯೋ ಮಗ್ ಜೊತೆ ಬೆಳ್ಳಿ ಕಡಗ; ಸೆಂಟ್ರಲ್ ಜೈಲ್ ಅಂದ್ರೆ ಹೀಗೆನಾ?

ಇನ್ನು ಇದೇ ವೇಳೆ ದರ್ಶನ್ ಅವರ ಅಭಿಮಾನಿಗಳು ಉದ್ಧಟತನ ಮಾಡಿದ್ದು ಆರಾಧ್ಯ ದೇವತೆ ಕನಕದುರ್ಗಮ್ಮ ದೇವಿಯ ಬೃಹತ್ ಪುತ್ಥಳಿ ಮೇಲೆ ಕಾಲಿಟ್ಟು ಹೂವಿನ ಹಾರ ಹಾಕಿದ್ದಾರೆ. ದರ್ಶನ್ ಬಿಡುಗಡೆಯಾಗಲಿ ಎಂದು ದೇವಿಯ ಬಳಿ ಅಭಿಮಾನಿಗಳು ಕೇಳಿಕೊಂಡಿದ್ದಾರೆ. ಬಳಿಕ ದೇವಾಲಯದ ಮುಂಭಾಗದ ಪುತ್ಥಳಿಗೆ ಹಾರ ಹಾಕುವಾಗ ಪ್ಯಾನ್ಸ್ ಯಡವಟ್ಟು ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ದರ್ಶನ್ ಬಿಡುಗಡೆ ಆಗಲಿ’-ಬಳ್ಳಾರಿ ಸೆಂಟ್ರಲ್ ಜೈಲಿನ ಮುಂದೆ ಜಮಾಯಿಸಿದ ಅಭಿಮಾನಿಗಳ ಉದ್ಧಟತನ; ಆಗಿದ್ದೇನು?

https://newsfirstlive.com/wp-content/uploads/2024/08/DARSHAN_FANS_NEW.jpg

Load More