ದರ್ಶನ್​ ರಿಲೀಸ್​ಗೆ ಆಗ್ರಹ; ಜೈಲು ಮುಂದೆ ಪೂಜೆ ಮಾಡಲು ಬಂದ ಅಭಿಮಾನಿಗಳನ್ನು ದರದರ ಎಳೆದೊಯ್ದ ಪೊಲೀಸ್ರು

author-image
Ganesh Nachikethu
Updated On
ದರ್ಶನ್ ಇಂದು ಜಾಮೀನು ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆ.. ಅದಕ್ಕೆ ಪೊಲೀಸರು ಏನ್ ಮಾಡಿದ್ದಾರೆ ಗೊತ್ತಾ?
Advertisment
  • ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್​ ಜೈಲು ಸೇರಿ 2 ತಿಂಗಳು
  • ನಟ ದರ್ಶನ್ ಅರೆಸ್ಟ್ ಆದ ಮೇಲೆ ಭಾರೀ ಬೇಸರದಲ್ಲಿರೋ ಫ್ಯಾನ್ಸ್​
  • ದರ್ಶನ್​ ರಿಲೀಸ್​ಗಾಗಿ ಉರುಳು ಸೇವೆ ಮಾಡಲು ಹೋಗಿ ಸಿಕ್ಕಿಬಿದ್ರು!

ಬೆಂಗಳೂರು: ಚಾಲೆಂಜಿಂಗ್​ ಸ್ಟಾರ್​​ ನಟ ದರ್ಶನ್​​ ರಿಲೀಸ್​ಗಾಗಿ ಪರಪ್ಪನ ಅಗ್ರಹಾರ ಜೈಲು ಮುಂದೆ 101 ತೆಂಗಿನ ಕಾಯಿ ಹೊಡೆದು ಉರುಳು ಸೇವೆ ಮಾಡಲು ಮುಂದಾಗಿದ್ದ ಅಭಿಮಾನಿಗಳನ್ನು ಪೊಲೀಸ್ರು ವಶಕ್ಕೆ ಪಡೆದಿದ್ದಾರೆ.

ಗುರುವಾರ ಮಧ್ಯಾಹ್ನ ನಮ್ಮ ಕರುನಾಡು ಯುವ ಸೇನೆ ರಾಜ್ಯಾಧ್ಯಕ್ಷ ರವಿಕುಮಾರ್​ ಎಂಬಾತ ದರ್ಶನ್​ ಬಿಡುಗಡೆಗೆ ಆಗ್ರಹಿಸಿ ಜೈಲು ಮುಂದೆ ಉರುಳು ಸೇವೆ ಮಾಡಲು ಬಂದಿದ್ದ. ಆಗ ಜೈಲು ಮುಂದೆ ಇದ್ದ ಪೊಲೀಸ್ರು ಆತನನ್ನು ಎಳೆದೊಯ್ದರು. ಈತನೊಂದಿಗೆ ಬಂದಿದ್ದ ಎಲ್ಲರನ್ನು ವಶಕ್ಕೆ ಪಡೆದರು.

ಈ ಹಿಂದೆಯೇ ನಮ್ಮ ಕರುನಾಡು ಯುವ ಸೇನೆ ರಾಜ್ಯಾಧ್ಯಕ್ಷ ರವಿಕುಮಾರ್​ ಎಂಬುವರು ನಾಳೆ ದರ್ಶನ್​ ಅವರನ್ನು ರಿಲೀಸ್​ ಮಾಡಬೇಕು ಎಂದು ಉರುಳು ಸೇವೆ ಮಾಡುತ್ತೇವೆ. 101 ತೆಂಗಿನ ಕಾಯಿ ಹೊಡೆದು ಪರಪ್ಪನ ಅಗ್ರಹಾರದ ಜೈಲು ಮುಂದೆಯೇ ಉರುಳು ಸೇವೆ ಮಾಡುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಡಿ ಬಾಸ್​ ಅಭಿಮಾನಿಗಳು ಭಾಗಿಯಾಗಬೇಕು ಎಂದು ಮನವಿ ಮಾಡಿದ್ದ.

publive-image

ದರ್ಶನ್​​ಗಾಗಿ ಹೋಮ!

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಚಾಲೆಂಜಿಂಗ್​ ಸ್ಟಾರ್​​​ ದರ್ಶನ್​ ಜೈಲು ಸೇರಿ ಬರೋಬ್ಬರಿ 2 ತಿಂಗಳು ಕಳೆದಿವೆ. ನಟ ದರ್ಶನ್ ಅರೆಸ್ಟ್ ಆದ ಮೇಲೆ ಅಭಿಮಾನಿಗಳು ಭಾರೀ ಬೇಸರದಲ್ಲಿ ಇದ್ದಾರೆ. ನಿತ್ಯ ದರ್ಶನ್​ ರಿಲೀಸ್​ಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ. ಕೆಲವು ಅಭಿಮಾನಿಗಳು ಅಂತೂ ಹೋಮ ಮಾಡಿಸಿದ್ದು ಉಂಟು. ಈಗ ದರ್ಶನ್​ ಅಭಿಮಾನಿಗಳು ಪರಪ್ಪನ ಅಗ್ರಹಾರದ ಮುಂದೆಯೇ ಉರುಳು ಸೇವೆ ಮಾಡಲು ಹೋಗಿ ಪೊಲೀಸ್ರ ಅತಿಥಿಗಳಾಗಿದ್ದಾರೆ.

ಇತ್ತೀಚೆಗಷ್ಟೇ ದರ್ಶನ್​ ರಿಲೀಸ್​ಗೆ ಪತ್ನಿ ವಿಜಯಲಕ್ಷ್ಮೀ ಅವರು ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಲ್ಲಿ ಹೋಮ ಮಾಡಿಸಿದ್ರು. ಇದಾದ ಬೆನ್ನಲ್ಲೇ ನಟ ದರ್ಶನ್ ಬಿಡುಗಡೆಗಾಗಿ ಕಲಾವಿದರ ಸಂಘದಲ್ಲಿ ಹೋಮ-ಹವನ ಮಾಡಲಾಗುತ್ತಿದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ, ಇದು ಇಂಡಸ್ಟ್ರಿಗಾಗಿ ಮಾಡಿದ ಹೋಮ ಎಂದು ಸ್ಪಷ್ಟನೆ ನೀಡಿದ್ದರು ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​​.

ಇದನ್ನೂ ಓದಿ: ‘ದರ್ಶನ್​ ಕೊಲೆ ಮಾಡೇ ಇಲ್ಲ, ರಿಲೀಸ್​ ಮಾಡಬೇಕು’- ಜೈಲು ಮುಂದೆಯೇ ಕೇಳಿ ಬಂತು ಒತ್ತಾಯ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment