ಸ್ಟೇಷನ್​ ಮುಂದೆ ಜಮಾಯಿಸಿದ ದರ್ಶನ್​​ ಫ್ಯಾನ್ಸ್​.. ಪೊಲೀಸ್ರು ಮಾಡಿದ್ದೇನು?

author-image
Ganesh Nachikethu
Updated On
ಸ್ಟೇಷನ್​ ಮುಂದೆ ಜಮಾಯಿಸಿದ ದರ್ಶನ್​​ ಫ್ಯಾನ್ಸ್​.. ಪೊಲೀಸ್ರು ಮಾಡಿದ್ದೇನು?
Advertisment
  • ಕೊಲೆ ಕೇಸ್​ವೊಂದರಲ್ಲಿ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅವ್ರು ಅರೆಸ್ಟ್​​
  • ಅನ್ನಪೂರ್ಣೇಶ್ವರಿ ನಗರ ಪೊಲೀಸ್​ ಠಾಣೆಯಲ್ಲಿ ದರ್ಶನ್​​ ವಿಚಾರಣೆ
  • ಪೊಲೀಸ್ ಠಾಣೆ ಮುಂದೆ ಜಮಾಯಿಸಿದ ದರ್ಶನ್​ ಅಭಿಮಾನಿಗಳು!

ಬೆಂಗಳೂರು: ಕೊಲೆ ಕೇಸ್​ವೊಂದರಲ್ಲಿ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅವರನ್ನು ಕಾಮಾಕ್ಷಿಪಾಳ್ಯ ಪೊಲೀಸ್ರು ಅರೆಸ್ಟ್​​ ಮಾಡಿದ್ದಾರೆ. ರೇಣುಕಾಸ್ವಾಮಿ ಎಂಬ ಯುವಕನ ಕೊಲೆ ಕೇಸಲ್ಲಿ ನಟ ದರ್ಶನ್​​​ ಅರೆಸ್ಟ್​​ ಆಗಿದೆ.

ಇನ್ನು, ದರ್ಶನ್​ ಸ್ನೇಹಿತೆ ಪವಿತ್ರಾ ಗೌಡಗೆ ಮೃತ ಯುವಕ ಕೆಟ್ಟದಾಗಿ ಮೆಸೆಜ್ ಮಾಡಿದ್ದ ಎಂದು ತಿಳಿದು ಬಂದಿದೆ. ಹಾಗಾಗಿ ರೇಣುಕಸ್ವಾಮಿ ಅವರನ್ನು ಕಿಡ್ನಾಪ್​ ಮಾಡಿ ಶೆಡ್​ನಲ್ಲಿ ಇರಿಸಿ ಕೊಲೆಗೈದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಾಗಾಗಿ ದರ್ಶನ್​ ಸೇರಿ 13 ಮಂದಿ ಬಂಧನ ಮಾಡಿದ್ದಾರೆ. ಸದ್ಯ ದರ್ಶನ್​ ಅವರನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸ್​ ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗುತ್ತಿದೆ.

publive-image

ಪೊಲೀಸ್ ಠಾಣೆ ಮುಂದೆ ನೂರಾರು ದರ್ಶನ್​ ಅಭಿಮಾನಿಗಳು ಸೇರಿದ್ದು, ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಸ್ಟೇಷನ್​ ಮುಂದೆ ದರ್ಶನ್​ ಅಭಿಮಾನಿಗಳು ಡಿ ಬಾಸ್​​ ಡಿ ಬಾಸ್​ ಎಂದು ಜೈಕಾರ ಹಾಕುತ್ತಿದ್ದಾರೆ. ದರ್ಶನ್​ ಅಭಿಮಾನಿಗಳ ಮೇಲೆ ಪೊಲೀಸ್ರು ಲಾಠಿ ಚಾರ್ಜ್​​ ಕೂಡ ಮಾಡಿದ್ದಾರೆ.

ಇದನ್ನೂ ಓದಿ:ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್.. ದರ್ಶನ್, ಪವಿತ್ರ ಗೌಡ ಸೇರಿ ಮತ್ತೆ ಮೂವರ ಅರೆಸ್ಟ್; ಮುಂದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment