ದರ್ಶನ್‌ ಫ್ಯಾನ್ಸ್‌ಗೆ ಬಿಸಿ, ಬಿಸಿ ಕಜ್ಜಾಯ.. ಪೊಲೀಸರ ಲಾಠಿ ಚಾರ್ಜ್‌ಗೆ ಕರಿಯನ ಹುಡುಗರು ಚೆಲ್ಲಾಪಿಲ್ಲಿ!

author-image
admin
Updated On
ದರ್ಶನ್‌ ಫ್ಯಾನ್ಸ್‌ಗೆ ಬಿಸಿ, ಬಿಸಿ ಕಜ್ಜಾಯ.. ಪೊಲೀಸರ ಲಾಠಿ ಚಾರ್ಜ್‌ಗೆ ಕರಿಯನ ಹುಡುಗರು ಚೆಲ್ಲಾಪಿಲ್ಲಿ!
Advertisment
  • ದರ್ಶನ್ ಅಭಿನಯದ ಕರಿಯ ಇಂದು ರಾಜ್ಯಾದ್ಯಂತ ರೀ ರಿಲೀಸ್
  • ದರ್ಶನ್ ಅಭಿಮಾನಿಯ ಗಲಾಟೆಗೆ ರೋಸಿ ಹೋದ ಪೊಲೀಸರು
  • ಪೊಲೀಸರ ಮುಂದೆ ಬಿಟ್ಟು ಬಿಡಿ ಅಂತ ಗೋಳಾಡಿದ ಅಭಿಮಾನಿ

ಬೆಂಗಳೂರು: ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಅಭಿನಯದ ಕರಿಯ ಸಿನಿಮಾ ಇಂದು ರಾಜ್ಯಾದ್ಯಂತ ರೀ ರಿಲೀಸ್ ಆಗಿದೆ. 20 ವರ್ಷಗಳ ಬಳಿಕ ಥಿಯೇಟರ್‌ಗಳಲ್ಲಿ ಮರು ಬಿಡುಗಡೆಯಾದ ಕರಿಯ ಚಿತ್ರವನ್ನು ದರ್ಶನ್ ಅಭಿಮಾನಿಗಳು ಸಂಭ್ರಮದಿಂದ ಸ್ವಾಗತಿಸಿದ್ದಾರೆ.

ಇದನ್ನೂ ಓದಿ: ಬಳ್ಳಾರಿ ಜೈಲು ಸೇರಿದರೂ ದರ್ಶನ್​ಗೆ ತಪ್ಪದ ಸಂಕಷ್ಟ.. ಚೈರ್​ ಮೇಲೂ ಕೇಸ್​, ಬೆಡ್​ ಮೇಲೆ ಕೂತಿದ್ದಕ್ಕೂ ಕೇಸ್ 

ಪ್ರಸನ್ನ ಚಿತ್ರಮಂದಿರದಲ್ಲಿ ಫ್ಯಾನ್ಸ್‌ ಕರಿಯ ಸಿನಿಮಾ ಪೋಸ್ಟರ್ ಜೊತೆಗೆ ವೈರಲ್ ಆದ ಜೈಲಿನ ಫೋಟೋಗೆ ಹಾಲಿನ ಅಭಿಷೇಕ ಮಾಡಿದರು. ಈ ವೇಳೆ ದರ್ಶನ್ ಅಭಿಮಾನಿಗಳಿಗೆ ಗಲಾಟೆ ಮಾಡದಂತೆ ಪೊಲೀಸರು ವಾರ್ನಿಂಗ್ ಕೊಟ್ಟರು. ಆದರೂ ದರ್ಶನ್ ಅಭಿಮಾನಿಯೊಬ್ಬ ಮಾಧ್ಯಮದವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ. ದರ್ಶನ್ ಅಭಿಮಾನಿಯ ಗಲಾಟೆಗೆ ರೋಸಿ ಹೋದ ಪೊಲೀಸರು ಆತನನ್ನು ವಶಕ್ಕೆ ಪಡೆದರು. ಥಿಯೇಟರ್‌ನಿಂದ ಹೊರಗೆ ಎಳೆದುಕೊಂಡು ಹೋಗುವಾಗ ನನ್ನ ಬಿಟ್ಟು ಬಿಡಿ ಅಂತ ಪೊಲೀಸರ ಮುಂದೆ ಗೋಳಾಡಿದ. ಆಟೋದಲ್ಲಿ ಡಿಬಾಸ್ ಫ್ಯಾನ್ ಕರೆದುಕೊಂಡು ಹೋದ ಪೊಲೀಸರು ವಾರ್ನಿಂಗ್ ಕೊಟ್ಟು ಕಳುಹಿಸಿದ್ದಾರೆ.

ಇದನ್ನೂ ಓದಿ: ನನ್ನ ಟೈಂ ಸರಿಯಿಲ್ಲ ಅಷ್ಟೇ, ದರ್ಶನ್ ಈ ಪಶ್ಚಾತಾಪದ ಮಾತುಗಳನ್ನು ಆಡಿದ್ದು ಯಾರ ಹತ್ತಿರ..? 

publive-image

ದರ್ಶನ್ ಫ್ಯಾನ್ಸ್‌ಗೆ ಲಾಠಿಚಾರ್ಜ್!
ರೀ ರಿಲೀಸ್ ಆದ ಕರಿಯ ಸಿನಿಮಾ ನೋಡಲು ಬಂದ ಅಭಿಮಾನಿಗಳ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿದ ಘಟನೆ ಕೂಡ ನಡೆದಿದೆ. ಪ್ರಸನ್ನ ಥಿಯೇಟರ್‌ ಮುಂದೆ ಜಮಾಯಿಸಿದ ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದರು. ಪೊಲೀಸರ ಏಟಿಗೆ ಚೆಲ್ಲಾಪಿಲ್ಲಿಯಾದ ದರ್ಶನ್ ಅಭಿಮಾನಿಗಲು ಥಿಯೇಟರ್‌ನಲ್ಲಿ ಹೊರಗೆ ಓಡಿ ಹೋಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment