ಬೆಂಗಳೂರಿನಿಂದ ಬಳ್ಳಾರಿಗೆ ಹೊರಡುವಾಗ ದರ್ಶನ್ ಪಶ್ಚಾತಾಪದ ಮಾತು
ಯಾರ ಎದುರಿಗೆ ನನ್ನ ಟೈಂ ಸರಿಯಿಲ್ಲ ಎಂದು ಹೇಳಿಕೊಂಡ್ರು ನಟ ದರ್ಶನ್
5 ಗಂಟೆ ಪ್ರಯಾಣದಲ್ಲಿ ಏನೆಲ್ಲಾ ಮಾತನಾಡಿದ್ರು, ಏನೆಲ್ಲಾ ಹಂಚಿಕೊಂಡ್ರು ದರ್ಶನ್
ಬೆಂಗಳೂರು: ನಟ ದರ್ಶನ್ ಈಗ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿ ಹೆಚ್ಚು ಕಡಿಮೆ ಎರಡು ತಿಂಗಳ ಮೇಲಾಯ್ತು. ಜೈಲಿನ ಕಂಬಿ ಹಿಂದೆ ಎರಡು ತಿಂಗಳು ಬದುಕು ಕಳೆದಿರುವ ದರ್ಶನ್ ಈಗ, ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದಾರೆ. ಬೆಂಗಳೂರಿನಿಂದ ಬಳ್ಳಾರಿಗೆ 5 ಗಂಟೆಗಳ ಕಾಲ ಪ್ರಯಾಣದಲ್ಲಿ ಪೊಲೀಸರ ಮುಂದೆ ಹಲವು ಪಶ್ಚಾತಾಪದ ಮಾತುಗಳನ್ನು ದರ್ಶನ್ ಆಡಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಬಳ್ಳಾರಿ ಹೆಸರು ಕೇಳಿ ಬೆಚ್ಚಿ ಬಿದ್ದಿದ್ದು ಇದಕ್ಕೆನಾ? ದರ್ಶನ್‌ಗೆ ಡಬಲ್ ಶಾಕ್; ದಾಸನ ಸೆರೆವಾಸ ಈಗ ಭಯಾನಕ!
‘ನನ್ನ ಟೈಂ ಸರಿಯಿಲ್ಲ ಸರ್ ಅಷ್ಟೇ, ಏನ್ ಮಾಡೋದು‘
ಬೆಂಗಳೂರಿನಿಂದ ಬಳ್ಳಾರಿಗೆ 334 ಕಿಲೋ ಮೀಟರ್ ಪೊಲೀಸರೊಂದಿಗೆ ಕ್ರಮಿಸಿದ ಆರೋಪಿ ದರ್ಶನ್ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನನ್ನ ಟೈಂ ಸರಿಯಿಲ್ಲ ಸರ್ ಅಷ್ಟೇ, ನನ್ನ ಗ್ರಹಚಾರ, ಟೈಂ ಎರಡು ಸರಿಯಿಲ್ಲ, ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಈಗ ನಾನು ಏನೇ ಹೇಳಿದ್ರು ತಪ್ಪಾಗುತ್ತೆ. ಕಾನೂನಿನ ಮೂಲಕವೇ ಎಲ್ಲವನ್ನು ಎದುರಿಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ಮಧ್ಯಾಹ್ನದವರೆಗೆ ಏನನ್ನೂ ತಿನ್ನಲಿಲ್ಲ; ಬಳ್ಳಾರಿ ಜೈಲಿನಲ್ಲಿ ನರಕ ದರ್ಶನ.. ಮೊದಲ ರಾತ್ರಿ ಕಳೆದ ಆರೋಪಿ..!
ಹೀಗೆ ಬೆಂಗಳೂರಿನಿಂದ ಬಳ್ಳಾರಿಗೆ ಹೊರಟ ಐದು ಗಂಟೆ ಪ್ರಯಾಣದಲ್ಲಿ ಅನೇಕ ವಿಷಯ ಮಾತನಾಡಿದ ದರ್ಶನ್ ಭಾವುಕರಾದ್ರು ಎಂದು ಹೇಳಲಾಗ್ತಿದೆ. ಕೆಲವೊಂದಿಷ್ಟು ವಿಚಾರಗಳನ್ನು ಮಾತನಾಡಿದ್ದನ್ನು ಬಿಟ್ಟರೆ ಉಳಿದಂತೆ ದರ್ಶನ್ ಸೈಲೆಂಟ್ ಆಗಿಯೇ ಕುಳಿತಿದ್ದರು ಎಂದು ಜೊತೆಗಿದ್ದ ಪೊಲೀಸರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ