/newsfirstlive-kannada/media/post_attachments/wp-content/uploads/2024/08/darshan7.jpg)
ಬೆಂಗಳೂರು: ಕೇಸ್​ವೊಂದರಲ್ಲಿ ನಟ ದರ್ಶನ್ ಮತ್ತು ಗ್ಯಾಂಗ್​​ಗೆ ಮತ್ತೆ 3 ದಿನಗಳ ಕಾಲ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ ಆದೇಶ ನೀಡಿದೆ. ಕೇಸ್​ ಕುರಿತು ನಟ ದರ್ಶನ್​​ ಪೊಲೀಸ್ರ ಮುಂದೆ ಬಾಯ್ಬಿಟ್ಟ ಅಸಲಿ ಸತ್ಯವನ್ನು ಚಾರ್ಜ್​ಶೀಟ್​​ನಲ್ಲಿ ಉಲ್ಲೇಖ ಮಾಡಲಾಗಿದೆ.
ಇನ್ನು, ರೇಣುಕಾಸ್ವಾಮಿ ಜೀವ ತೆಗೆದ ಬಳಿಕ ನಟ ದರ್ಶನ್​ ಮತ್ತು ಗ್ಯಾಂಗ್​ ಖತರ್ನಾಕ್​ ಪ್ಲಾನ್​ ಮಾಡಿದ್ದಾರೆ. ಈ ಬಗ್ಗೆ ಖುದ್ದು ನಟ ದರ್ಶನ್​ ಅವರೇ ಎಲ್ಲಾ ಮಾಹಿತಿಯನ್ನು ಪೊಲೀಸ್ರ ಮುಂದೆ ಬಿಚ್ಚಿಟ್ಟಿದ್ದಾರೆ. ಮೃತದೇಹ ಸಾಗಿಸಲು ಇವರು ಏನು ಪ್ಲಾನ್​ ಮಾಡಿದ್ರು? ಬಳಿಕ ಏನೆಲ್ಲಾ ಎಡವಟ್ಟು ಅನ್ನೋ ಬಗ್ಗೆ ಡೀಟೈಲ್ಸ್ ಚಾರ್ಜ್​ಶೀಟ್​ನಲ್ಲಿ ಬರೆಯಲಾಗಿದೆ.
ರೇಣುಕಾಸ್ವಾಮಿ ಜೀವ ತೆಗೆದ ನಂತರ ಏನಾಯ್ತು? ದರ್ಶನ್​​ ಹೇಳಿದ್ದೇನು?
- ರಾ.9ಕ್ಕೆ ಪ್ರದೂಷ್, ವಿನಯ್, ನಾಗರಾಜ್, ಲಕ್ಷ್ಮಣ್ ಮತ್ತೆ ಮನೆಗೆ ಬಂದ್ರು
- ರೇಣುಕಾಸ್ವಾಮಿ ಸತ್ತಿದ್ದಾನೆ, ನಾನು ಹ್ಯಾಂಡಲ್ ಮಾಡುತ್ತೇನೆಂದಿದ್ದ ಪ್ರದೂಷ್
- 30 ಲಕ್ಷ ಹಣ ಕೇಳಿದ್ದಕ್ಕೆ, ಮನೆಯಲ್ಲಿಟ್ಟಿದ್ದ ಹಣವನ್ನ ನಾನು ಕೊಟ್ಟು ಕಳಿಸಿದ್ದೆ
- ಮತ್ತೆ ಕೆಲ ಹೊತ್ತಲ್ಲಿ ವಿನಯ್ ಮನೆ ಬಳಿ ಬಂದು, 10 ಲಕ್ಷ ಕೇಳಿ ಪಡೆದಿದ್ದರು
- ಮೈಸೂರಿಗೆ ಹೋಗೋ ಮುನ್ನ ನಾಗರಾಜ್, ಪ್ರದೂಷ್​ಗೆ ಕರೆ ಮಾಡಿದ್ದೆ
- 10ನೇ ತಾರೀಕು, ರಾ.9ಕ್ಕೆ ಪ್ರದೂಷ್, ನಾಗರಾಜ್, ವಿನಯ್ ಹೋಟೆಲ್​ಗೆ ಬಂದ್ರು
- ಧನರಾಜ್ ರೇಣುಕಾಸ್ವಾಮಿಗೆ ಕರೆಂಟ್ ಶಾಕ್ ನೀಡಿದ್ದನ್ನ ನನಗೆ ಹೇಳಿದ್ರು
- ಪವನ್ ಹಲ್ಲೆ, ನಂದೀಶ್ ಎತ್ತಿ ಕುಕ್ಕಿದ್ದನ್ನ ಕೂಡ ಅವರುಗಳು ನನಗೆ ಹೇಳಿದ್ರು
- ಯಾರಿಗಾದ್ರೂ ಹಣ ನೀಡಿ ನಾವು ಫಿಕ್ಸ್ ಮಾಡ್ತೀವಿ ಅಂತಲೂ ಹೇಳಿದ್ದರು
- ಇನ್ನೂ ಹೆಚ್ಚಿನ ಹಣವೂ ಬೇಕಾಗುತ್ತದೆ ಅಂತಲೂ ಅವ್ರು ನನಗೆ ಹೇಳಿದ್ದರು!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us