newsfirstkannada.com

ದರ್ಶನ್​ ರಾಜಾತಿಥ್ಯಕ್ಕೆ ಖತರ್ನಾಕ್​ ಪ್ಲಾನ್​; ಫೇಮಸ್ ಮಿಲ್ಟ್ರಿ ಹೋಟೆಲ್​ನಿಂದಲೇ ಬಿರಿಯಾನಿ ಸಪ್ಲೈ!

Share :

Published August 27, 2024 at 6:10am

Update August 27, 2024 at 6:17am

    ಜೈಲಿಗೆ ಹೋದ ದಿನದಿಂದಲೂ ದರ್ಶನ್​ಗೆ ಸಿಕ್ಕಿದ್ಯಾ ಈ ರಾಜಾತಿಥ್ಯ?

    ರೌಡಿ ಶೀಟರ್​ನಿಂದ ನಟ ದರ್ಶನ್​ಗೆ ಜೈಲಿನಲ್ಲಿ ಸಕಲ ವ್ಯವಸ್ಥೆ

    ಡೇ ಒನ್ ನಿಂದಲೂ ಮನೆ ಊಟ, ಸಿಗರೇಟ್, ಟೀ ಸವಲತ್ತು?

ನಟ ದರ್ಶನ್ ಜೈಲಿನಲ್ಲಿ ಮನೆ ಊಟ ಸಿಕ್ತಿಲ್ಲ ಅಂತಾ ಅರ್ಜಿ ಸಲ್ಲಿಸಿದ್ದು ಬರೀ ನಾಟಕನಾ? ಜೈಲೂಟ ಸೇರುತ್ತಿಲ್ಲ. ತಿನ್ನೋಕೆ ಆಗದೇ ಸಣ್ಣ ಆಗಿದ್ದಾರೆ ಅನ್ನೋದೆಲ್ಲಾ ಸುಳ್ಳು ಅನ್ನೋ ಪ್ರಶ್ನೆ ಇದೀಗ ಮೂಡಿದೆ. ಕೊಲೆ ಕೇಸ್​ನಲ್ಲಿ ಜೈಲು ಸೇರಿರುವ ದಾಸನ ಬಿಂದಾಸ್​ ಲೈಫ್​ ಬಯಲಾಗಿದೆ. ಓರ್ವ ರೌಡಿಶೀಟರ್​ ಮತ್ತು ಜೈಲು ಅಧಿಕಾರಿಗಳ ಕೃಪಾಕಟಾಕ್ಷದಿಂದ ಪರಪ್ಪನ ಅಗ್ರಹಾರದಲ್ಲಿ ದರ್ಶನ್​ ದರ್ಬಾರ್​ ಜೋರಾಗಿದೆ. ಸದ್ಯ ಇದು ನಮ್ಮ ವ್ಯವಸ್ಥೆಯನ್ನೇ ಪ್ರಶ್ನಿಸುವಂತೆ ಮಾಡಿದೆ.

ಇದನ್ನೂ ಓದಿ: BREAKING: ದರ್ಶನ್ ಸ್ಲೇಟ್ ಹಿಡಿಯೋದು ಫಿಕ್ಸ್‌? A2 ಅಲ್ಲ A1 ವಿರುದ್ಧ ರೌಡಿಶೀಟ್ ಓಪನ್? 

ಜೈಲಿಗೆ ಹೋದ ದಿನದಿಂದಲೂ ದರ್ಶನ್​ಗೆ ಸಿಗ್ತಿತಾ ರಾಜಾತಿಥ್ಯ?
ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಕಳೆದ ಎರಡು ತಿಂಗಳಿಂದ ಜೈಲಿನಲ್ಲಿರುವ ದರ್ಶನ್​ ಜೈಲೂಟ ಸೇರ್ತಿಲ್ಲ, ತಿನ್ನೋಕೆ ಆಗದೇ ಸಣ್ಣ ಆಗಿದ್ದೀನಿ ಎಂದೆಲ್ಲ ಕೋರ್ಟ್​ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಹೇಳಿದ್ರು. ಆದ್ರೆ ಅದೆಲ್ಲವೂ ಬರೀ ನಾಟಕನಾ ಅನ್ನೋ ಅನುಮಾನ ಈಗ ಮೂಡ್ತಿದೆ. ಜೈಲು ಅಧಿಕಾರಿಗಳು ನಟ ದರ್ಶನ್​ಗೆ ಬಹುತೇಕ ಡೇ ಒನ್ ನಿಂದಲೂ ಮನೆ ಊಟ, ಸಿಗರೇಟ್, ಟೀ, ಸೇರಿದಂತೆ ಐಷಾರಾಮಿ ಸವಲತ್ತು ನೀಡ್ತಿದ್ದಾರಾ ಎಂಬ ಸಂಶಯ ಈ ಫೋಟೋದಿಂದ ಮೂಡಿದೆ.

ದರ್ಶನ್​ ರಾಜಾತಿಥ್ಯಕ್ಕೆ ಅಧಿಕಾರಿಗಳ ಖತರ್ನಾಕ್​ ಪ್ಲಾನ್​!
ಕೊಲೆ ಕೇಸ್​ನಲ್ಲಿ ಜೈಲು ಹಕ್ಕಿ ಆಗಿರುವ ಅಂಧಾಭಿಮಾನಿಗಳ ಪ್ರೀತಿಯ ರಾಮು ದರ್ಶನ್​​ಗೆ ಜೈಲಿನಲ್ಲಿ ಇಷ್ಟೆಲ್ಲ ವ್ಯವಸ್ಥೆ ಆಗಿದೆ ಅಂದ್ರೆ. ಕಾಸಿಗಾಗಿ ಕೈ ಚಾಚುವ ಅಧಿಕಾರಿಗಳು ಕೈಚಳಕವು ಇದ್ದೇ ಇರುತ್ತೆ. ಕೊಲೆ ಕೇಸ್​ನಲ್ಲಿ ದರ್ಶನ್​ ಜೈಲಿಗೆ ಹೋಗೋಕು ಕೆಲ ದಿನಗಳ ಮೊದಲು ಪ್ರಭಾವಿ ವ್ಯಕ್ತಿಯೊಬ್ಬರು ಜೈಲು ಪಾಲಾಗಿದ್ದರು. ಅವರಿಗೆ ಕಾನೂನು ಪ್ರಕಾರ ಮನೆ ಊಟಕ್ಕೆ ಅನುಮತಿ ಇತ್ತು. ಹೀಗಾಗಿ ಪ್ಲಾನ್​ ಮಾಡಿದ ಧನದಾಹದ ಕೆಲ ಅಧಿಕಾರಿಗಳು, ಆ ಮನೆ ಊಟದ ಜೊತೆಗೆ ದರ್ಶನ್‌ಗೂ ವ್ಯವಸ್ಥೆ ಮಾಡಿರುವ ಅನುಮಾನ ಮೂಡಿದೆ.

ಫೇಮಸ್ ಮಿಲ್ಟ್ರಿ ಹೋಟೆಲ್​ನಿಂದಲೇ ಬಿರಿಯಾನಿ ಸಪ್ಲೈ!
ದರ್ಶನ್​ ರಾಜಾತಿಥ್ಯದ ಬಗ್ಗೆ ಕೆದಕಿದಷ್ಟು ಸ್ಫೋಟಕ ವಿಷ್ಯಗಳು ಬಯಲಾಗುತ್ತಿದೆ. ದರ್ಶನ್​ಗೆ ಕೇವಲ ಊಟ, ಸಿಗರೇಟ್​ ಮಾತ್ರವಲ್ಲ. ತನಗೆ ಯಾವ ವಸ್ತು, ಎಲ್ಲಿಂದ ಬೇಕು ಅಂತಾರೋ ಅಲ್ಲಿಂದಲೇ ಸಪ್ಲೈ ಆಗುತ್ತೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ದರ್ಶನ್ & ಗ್ಯಾಂಗ್‌ ಬೇರೆ ಜೈಲಿಗೆ ಶಿಫ್ಟ್‌? ಎಲ್ಲಿಗೆ ಹೋಗ್ತಾರೆ? ಆ ಕತ್ತಲ ಕೋಣೆಯಲ್ಲಿ ಲಾಕ್‌ ಆಗ್ತಾರಾ?

ಬನಶಂಕರಿಯ ಫೇಮಸ್ ಮಿಲ್ಟ್ರಿ ಹೋಟೆಲ್​ನಿಂದಲೇ ದರ್ಶನ್​ಗೆ ಬಿರಿಯಾನಿ ಸಪ್ಲೈ ಆಗಿತ್ತಂತೆ. ಜೈಲಿನ ವ್ಯವಸ್ಥೆ ಬಗ್ಗೆ ಮಾಹಿತಿ ಸಿಕ್ಕಿ ಶನಿವಾರ ಮುಂಜಾನೆಯೇ ಸಿಸಿಬಿ ಅಧಿಕಾರಿಗಳು ಜೈಲಿನ ಮೇಲೆ ದಾಳಿ ನಡೆಸಿದ್ದರು. ಆದ್ರೆ ದಾಳಿ ವೇಳೆ ಯಾವುದೇ ವಸ್ತುಗಳೂ ಕೂಡ ಪತ್ತೆ ಆಗಿರಲಿಲ್ಲ. ಯಾಕಂದ್ರೆ ಸಿಸಿಬಿ ಅಧಿಕಾರಿಗಳ ದಾಳಿಗೂ ಮೊದಲೇ ಮಾಹಿತಿ ಸೋರಿಕೆ ಆಗಿದ್ದು, ಜೈಲಿನ ಅಧಿಕಾರಿಗಳು ಕೈದಿಗಳಿಂದ ನಿಷೇಧಿತ ವಸ್ತುಗಳನ್ನು ಶಿಫ್ಟ್​ ಮಾಡಿಸಿರುವ ಸಂಶಯ ಮೂಡಿದೆ.

ರೌಡಿ ಶೀಟರ್​ನಿಂದ ದರ್ಶನ್​ಗೆ ಜೈಲಿನಲ್ಲಿ ಸಕಲ ವ್ಯವಸ್ಥೆ
ನಟ ದರ್ಶನ್​ಗೆ ಜೈಲಿನಲ್ಲಿ ಇಷ್ಟೆಲ್ಲ ವ್ಯವಸ್ಥೆ ಮಾಡ್ತಿರೋದು ಒಬ್ಬ ರೌಡಿ ಶೀಟರ್​ ಅನ್ನೋದು ತಿಳಿದು ಬಂದಿದೆ. ರೌಡಿ ವಿಲ್ಸನ್ ಗಾರ್ಡನ್ ನಾಗನಿಂದ ದರ್ಶನ್​ಗೆ ಬೇಕಾದ ವ್ಯವಸ್ಥೆ ಮಾಡಲಾಗ್ತಿದೆ ಎನ್ನಲಾಗಿದೆ. ಸದ್ಯ ಸಿದ್ದಾಪುರ ಮಹೇಶ್ ಕೊಲೆ ಕೇಸ್​ನಲ್ಲಿ ಜೈಲಿನಲ್ಲಿರೋ ನಾಗ, ಪರಪ್ಪನ ಅಗ್ರಹಾರ ಜೈಲನ್ನೂ ನಿಯಂತ್ರಣ ಮಾಡ್ತಿದ್ದಾನೆ. ಯಾವ ವ್ಯವಸ್ಥೆಗೆ ಎಷ್ಟು ಕೊಡಬೇಕು ಅನ್ನೋದು ಈತನಿಗೆ ಗೊತ್ತು. ಹೀಗಾಗಿ ಅಧಿಕಾರಿಗಳಿಗೆ ಹಣದ ಆಸೆ ತೋರಿಸಿ, ಬಿರಿಯಾನಿ, ಎಣ್ಣೆ, ಸಿಗರೇಟ್, ಮಸಾಜ್ ವ್ಯವಸ್ಥೆ ಮಾಡಿಸಿದ್ದಾನೆ ಎನ್ನಲಾಗಿದೆ. ಈತನಿಗೆ ಮತ್ತಿಬ್ಬರು ರೌಡಿಗಳಾದ ಬೇಕರಿ ರಘು, ಕುಳ್ಳ ಸೀನ ಕೂಡ ಸಾಥ್​ ನೀಡಿದ್ದಾರೆ. ಇದಕ್ಕೆಲ್ಲ ಪುಷ್ಟಿ ನೀಡುವಂತಿದೆ ಇದೊಂದು ಫೋಟೋ.

ಇದನ್ನೂ ಓದಿ: ನಟ ದರ್ಶನ್ ಮೇಲೆ ಮತ್ತೊಂದು FIR; ಎಡಿಜಿಪಿ ಮಾಲಿನಿ ಕೃಷ್ಣಮೂರ್ತಿಯಿಂದ ಸ್ಫೋಟಕ ಮಾಹಿತಿ ಬಹಿರಂಗ

ಒಟ್ಟಿನಲ್ಲಿ ಕಷ್ಟದಲ್ಲಿದ್ದೀನಿ ಅಂತ ಹೇಳುತ್ತಲೇ ನಟ ದರ್ಶನ್​ ಜೈಲಿನಲ್ಲಿ ರಾಜಾತಿಥ್ಯ ಪಡೀತಿರೋದು ಬೆಳಕಿಗೆ ಬಂದಿದೆ. ಜೈಲು ಅಧಿಕಾರಿಗಳು ವಿಶೇಷ ಸೌಲಭ್ಯ ಇಲ್ಲ, ಇಲ್ಲ ಅನ್ನುತ್ತಲೇ ಎಲ್ಲಾ ವ್ಯವಸ್ಥೆ ಮಾಡ್ತಿರೋ ಬಟಾ ಬಯಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್​ ರಾಜಾತಿಥ್ಯಕ್ಕೆ ಖತರ್ನಾಕ್​ ಪ್ಲಾನ್​; ಫೇಮಸ್ ಮಿಲ್ಟ್ರಿ ಹೋಟೆಲ್​ನಿಂದಲೇ ಬಿರಿಯಾನಿ ಸಪ್ಲೈ!

https://newsfirstlive.com/wp-content/uploads/2024/08/Darshan-New-Photo-In-Jail.jpg

Load More