ಜೈಲಿನಲ್ಲಿರುವ ನಟ ದರ್ಶನ್ ಅವರು ಸ್ಲೇಟ್ ಹಿಡಿಯೋದು ಫಿಕ್ಸ್?
ಪರಪ್ಪನ ಅಗ್ರಹಾರ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲು
ಜೈಲಿನಲ್ಲಿ ರಾಜಾತಿಥ್ಯ ಪಡೆದ ಆರೋಪದಲ್ಲಿ ದರ್ಶನ್ ವಿರುದ್ಧ 2 FIR
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರು ರೌಡಿಗಳ ಜೊತೆ ಪಾರ್ಟಿ ಮಾಡಿ ಹೊಸ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊಲೆ ಕೇಸ್‌ನಲ್ಲಿ A2 ಆಗಿದ್ದ ದರ್ಶನ್ ಅವರನ್ನು ಸಿಗರೇಟ್, ಕಾಫಿ ಮಗ್ ಹಿಡಿದ ಫೋಟೋ ಪ್ರಕರಣದಲ್ಲಿ ಈಗ A1 ಮಾಡಲಾಗಿದೆ. ಸಾಲು, ಸಾಲು FIR ದಾಖಲಾಗಿದ್ದು ಸೆಂಟ್ರಲ್ ಜೈಲಿನಲ್ಲಿರುವ ದರ್ಶನ್ ಅವರು ಸ್ಲೇಟ್ ಹಿಡಿಯೋದು ಫಿಕ್ಸ್ ಎನ್ನಲಾಗುತ್ತಿದೆ.
ಇದನ್ನೂ ಓದಿ: ರಚ್ಚು ಬಂದ ದಿನವೇ ದಚ್ಚು ಪಾರ್ಟಿ.. ದರ್ಶನ್‌ಗೆ ಸಿಗರೇಟ್, ಬಿರಿಯಾನಿ, ಕಾಫಿ ಸಿಕ್ಕಿದ್ದು ಹೇಗೆ? ಇಲ್ಲಿದೆ ಅಸಲಿ ವಿಷ್ಯ!
ಪರಪ್ಪನ ಅಗ್ರಹಾರದಲ್ಲಿ ದರ್ಶನ್‌ಗೆ ರಾಜಾತಿಥ್ಯ ಸಿಕ್ಕ ಕೇಸ್‌ಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಒಂದು ಕೈಯಲ್ಲಿ ಸಿಗರೇಟ್ ಮತ್ತೊಂದು ಕೈಯಲ್ಲಿ ಕಾಫಿ ಮಗ್ ಹಿಡಿದ ಫೋಟೋ ವೈರಲ್ ಆದ ಬಳಿಕ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿದೆ. ಮೊದಲ ಪ್ರಕರಣದಲ್ಲಿ ದರ್ಶನ್ A-1, ನಾಗರಾಜ್ A-2, ವಿಲ್ಸನ್ ಗಾರ್ಡನ್ ನಾಗ A-3, ಕುಳ್ಳ ಸೀನಾ- A-4 ಆಗಿದ್ದಾರೆ.
ಇನ್ನು, ವಿಡಿಯೋ ಕಾಲ್‌ನಲ್ಲಿ ಮುಖ ದರ್ಶನ ಮಾಡಿದ ಎರಡನೇ ಎಫ್‌ಐಆರ್‌ನಲ್ಲೂ ಕೂಡ ದರ್ಶನ್ ಅವರನ್ನು A-1 ಮಾಡಲಾಗಿದೆ. ಕೈದಿ ಧರ್ಮ A-2 ಹಾಗೂ ವಿಡಿಯೋ ಕಾಲ್ ಮಾಡಿದ ಸತ್ಯ A-3 ಆಗಿದ್ದಾರೆ.
ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಿದ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಒಟ್ಟು ಮೂರು FIRಗಳು ದಾಖಲಾಗಿದೆ. ಕೇಂದ್ರ ಕಾರಾಗೃಹಗಳ ಉಪನಿರ್ದೇಶಕರಾದ ಎಂ. ಸೋಮಶೇಖರ್‌ರಿಂದ ಈ ದೂರು ದಾಖಲಾಗಿದೆ.
ದರ್ಶನ್ ವಿರುದ್ಧ ರೌಡಿಶೀಟ್ ಫಿಕ್ಸ್?
ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಪಡೆದ ಆರೋಪದಲ್ಲಿ ದರ್ಶನ್ ವಿರುದ್ಧ 2 FIR ದಾಖಲಾಗಿದೆ. ಈ ಅಪರಾಧಗಳಿಂದ ಪೊಲೀಸ್ ಠಾಣೆಯಲ್ಲಿ ದರ್ಶನ್ ಸ್ಲೇಟ್ ಹಿಡಿದ ಫೋಟೋ ಹಾಕೋದು ಖಾಯಂ ಎನ್ನಲಾಗುತ್ತಿದೆ.
ಇದನ್ನೂ ಓದಿ: ಜೈಲಿನಲ್ಲಿ ದರ್ಶನ್ ಪಾರ್ಟಿ.. ವಿಲ್ಸನ್ ಗಾರ್ಡನ್ ನಾಗ ಧರಿಸಿದ ಟೀ ಶರ್ಟ್ ಬೆಲೆ ಎಷ್ಟು ಗೊತ್ತಾ? ಶಾಕ್ ಆಗ್ತೀರಾ!
ರೇಣುಕಾಸ್ವಾಮಿ ಕೊಲೆ ಕೇಸ್ ಬಳಿಕ ಈಗ ದರ್ಶನ್ ಅವರು ಮೂರು ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಪರಪ್ಪನ ಆಗ್ರಹಾರ ಠಾಣೆಯಲ್ಲಿ ದಾಖಲಾದ ಮೂರು ಪ್ರತ್ಯೇಕ ಎಫ್‌ಐಆರ್‌ನಲ್ಲಿ ಎರಡು ಕೇಸ್‌ನಲ್ಲಿ ದರ್ಶನ್ A1 ಆಗಿದ್ದಾರೆ. ಹೀಗಾಗಿ ದರ್ಶನ್‌ಗೆ ಜಾಮೀನು ಸಿಕ್ಕ ಬಳಿಕ ರೌಡಿಶೀಟ್ ತೆಗೆಯೋ ಸಾಧ್ಯತೆ ಹೆಚ್ಚಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ