newsfirstkannada.com

ರಚ್ಚು ಬಂದ ದಿನವೇ ದಚ್ಚು ಪಾರ್ಟಿ.. ದರ್ಶನ್​ಗೆ ಸಿಗರೇಟ್​, ಬಿರಿಯಾನಿ, ಕಾಫಿ ಸಿಕ್ಕಿದ್ದು ಹೇಗೆ? ಇಲ್ಲಿದೆ ಅಸಲಿ ವಿಷ್ಯ!

Share :

Published August 26, 2024 at 8:52pm

    ದರ್ಶನ್​ ರಾಜನಂತೆ.. ರಚಿತಾ ರಾಮ್​ ಹೇಳಿದ್ದು ನಿಜವಾಯ್ತಾ?

    ನಟ ದರ್ಶನ್​ಗಿದೆಯಾ ನಟೋರಿಯಸ್​ ರೌಡಿ ಗ್ಯಾಂಗ್‌ನ ಕೃಪೆ?

    ಆ ಒಂದು ಹೋಟೆಲ್‌ ಮೂಲಕ ಸಿಗರೇಟ್ ಸಪ್ಲೈ ಆಗ್ತಿದೆಯಾ?

ಬೆಂಗಳೂರು:  ಜೈಲೊಳಗೆ ದರ್ಶನ್‌ಗೆ ಸಿಗರೇಟ್ ಕೊಟ್ಟವಱರು? ಅಧಿಕಾರಿಗಳಾ? ಆಪ್ತರಾ? ರೌಡಿಗಳಾ? ಆ ಪ್ರಭಾವಿ ರಾಜಕಾರಣಿಗಳಾ? ರಾಜ್ಯವನ್ನೇ ಕಾಡುತ್ತಿರೋ ಈ ಅತಿದೊಡ್ಡ ಪ್ರಶ್ನೆಯ ಉತ್ತರದ ಜಾಡು ಹಿಡಿದು ಹೊರಟಾಗ ನಮ್ಮೆದುರು ತೆರೆದುಕೊಂಡಿದ್ದು ಒಂದಲ್ಲ ಭರ್ತಿ 5 ಅನುಮಾನಗಳು. ಹಾಗಾದ್ರೆ, ದರ್ಶನ್ ಕೈಲಿಸೋ ಸಿಗರೇಟ್‌ನ ರಹಸ್ಯವೇನು? ತಂದುಕೊಟ್ಟವರು ಯಾರು? ದಾಸನ ಕೈಗಿಟ್ಟವರು ಯಾರು? ಕಡ್ಡಿ ಗೀರಿದವರು ಯಾರು? ಇದೆಲ್ಲದರ ಬಗ್ಗೆ ತಿಳಿದುಕೊಳ್ಳೋಕೆ ಹೊರಟರೆ ಹಲವು ಅಚ್ಚರಿಗಳು ಕಣ್ಮುಂದೆ ಬರುತ್ತೆ.

ಇದನ್ನೂ ಓದಿ: ಜೈಲಿನಲ್ಲಿ ದರ್ಶನ್ ಪಾರ್ಟಿ.. ವಿಲ್ಸನ್ ಗಾರ್ಡನ್ ನಾಗ ಧರಿಸಿದ ಟೀ ಶರ್ಟ್ ಬೆಲೆ ಎಷ್ಟು ಗೊತ್ತಾ? ಶಾಕ್ ಆಗ್ತೀರಾ! 

ನಟ ದರ್ಶನ್ ತಮಗಿರುವ ಸಿಗರೇಟ್ ಅಭ್ಯಾಸದ ಬಗ್ಗೆ ಅನೇಕ ಸಾರಿ ಓಪನ್ ಆಗಿಯೇ ಹೇಳಿದ್ದಾರೆ. ಬೆಳಗ್ಗೆ ಎದ್ದ ತಕ್ಷಣ ತಮ್ಮ ಜೀವನ ಸಿಗರೇಟ್​ನಿಂದಲೇ ಶುರುವಾಗುತ್ತೆ ಅನ್ನೋದನ್ನ ಹೇಳಿದ್ದ ದರ್ಶನ್​ಗೆ ಇವತ್ತು ಕೊಲೆ ಕೇಸ್​ ಜೊತೆಗೆ ಆ ಸಿಗರೇಟೇ ಮತ್ತೊಂದು ಕಂಟಕ ತಂದೊಡ್ಡಿದೆ. ಜೈಲಲ್ಲಿರೋ ದರ್ಶನ್​ ತಮ್ಮ ರೌಡಿ ಪಟಾಲಂ ಜೊತೆಗೆ ಬಿಂದಾಸ್​​ ಆಗಿ ಧಮ್​ ಹೊಡೀತಾ ಇರೋದು ವ್ಯವಸ್ಥೆಯನ್ನೇ ಶೇಕ್​ ಮಾಡ್ತಿದೆ. ದೊಡ್ಡ ದೊಡ್ಡ ಐಪಿಎಸ್​ ಅಧಿಕಾರಿಗಳಿಂದ ಹಿಡಿದು ಸರ್ಕಾರದ ಪ್ರತಿನಿಧಿಗಳವರೆಗೂ ಪರಪ್ಪನ ಅಗ್ರಹಾರ ಜೈಲಲ್ಲಿ ನಡೀತಿರೋ ಅಕ್ರಮಗಳ ಬಗ್ಗೆ ಮುಜುಗರಕ್ಕೀಡಾಗುವಂತೆ ಮಾಡಿದೆ. ಯಾಕಂದ್ರೆ, ಈಗ ಇಡೀ ರಾಜ್ಯವನ್ನ ಕಾಡ್ತಿರೋ ಆ ಎರಡು ಪ್ರಶ್ನೆಗಳಿಗೆ ಉತ್ತರ ಕೊಡಲೇಬೇಕಾದ ಸ್ಥಿತಿ ಬಂದಿದೆ.

ಇದನ್ನೂ ಓದಿ: ಸೆಂಟ್ರಲ್‌ ಜೈಲಿಗೆ ಪರಪ್ಪನ ಅಗ್ರಹಾರ ಅನ್ನೋ ಹೆಸರು ಹೇಗೆ ಬಂತು? ಯಾರು ಈ ಪರಪ್ಪ? ಏನಿದರ ಇತಿಹಾಸ?

ಜೈಲಲ್ಲಿ ಸಿಗರೇಟ್ ಸಿಕ್ಕಿದ್ದೇಗೆ? ದರ್ಶನ್​ಗೆ ಕೊಟ್ಟವಱರು?

ಜೈಲಿನಲ್ಲಿ ನಟ ದರ್ಶನ್‌ಗೆ ಸಿಗರೇಟ್ ಕೊಟ್ಟವರು ಯಾರು? ಕೈದಿಗಳ ಮನಪರಿವರ್ತನೆಗೆ ಇರುವ ಜಾಗದಲ್ಲಿ ಸಿಗರೇಟ್​ನಂತಹ ಅನಾರೋಗ್ಯಕರ ವಸ್ತು ಹೇಗೆ ಬಂತು? ಈ ಎರಡು ಪ್ರಶ್ನೆಗಳು ಇಡೀ ರಾಜ್ಯದೆಲ್ಲೆಡೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗ್ತಿವೆ. ಜೈಲಿನೊಳಗಿರೋ ಆರೋಪಿಗಳಿಗೆ, ಖೈದಿಗಳಿಗೆ ಪರ್ಮಿಷನ್ ಇಲ್ದೆ ಸಣ್ಣ ಹುಲ್ಲಕಡ್ಡಿಯನ್ನೂ ತಂದು ಕೊಡಲು ಸಾಧ್ಯವಿಲ್ಲ ಅಂತಾರೆ. ಜೈಲೊಳಗೆ ಶಿಕ್ಷೆ ಅನುಭವಿಸಿ ಬಂದವರೆಲ್ಲಾ ಜೈಲಂದ್ರೆ ನರಕ ಸಾರ್ ಅಂತಾರೆ. ಆದ್ರೆ, ದರ್ಶನ್ ಮಾತ್ರ ಜೈಲಿನ ಬ್ಯಾರಕ್ ಮುಂದೆಯೇ ರೌಡಿಗಳ ಜೊತೆ ಕುರ್ಚಿ ಹಾಕ್ಕೊಂಡು ಕೂತು ಧಮ್ ಹೊಡೆಯುತ್ತಾ ಮಜಾ ಮಾಡ್ತಿದ್ದಾರೆ. ಹಾಗಾದ್ರೆ, ದರ್ಶನ್‌ಗೆ ಜೈಲೊಳಗೆ ಸಿಗರೇಟ್ ಕೊಟ್ಟವರು? ಸಿಕ್ಕಿದ್ದು ಹೇಗೆ? ಯಾಱರ ಕೈವಾಡ ಇದೆ? ಈ ಎಲ್ಲಾ ಪ್ರಶ್ನೆಗಳ ಸುತ್ತ ಹತ್ತಾರು ಶಂಕೆಗಳು ಶುರುವಾಗಿವೆ. ಆ ಶಂಕೆಗಳ್ಯಾವು ಅಂತ ಕೇಳಿಬಿಟ್ರೆ ನಿಜಕ್ಕೂ ದಂಗಾಗ್ತೀರ.

ಇದನ್ನೂ ಓದಿ: ಜೈಲಲ್ಲಿ ದರ್ಶನ್​​ ಪಾರ್ಟಿ ಕೇಸ್​​.. ನಟಿ ರಚಿತಾ ರಾಮ್​​ಗೆ ಎದುರಾಯ್ತು ಸಂಕಷ್ಟ; ಕಾರಣವೇನು?

ಕೆಲ ದಿನಗಳ ಹಿಂದಷ್ಟೇ ಡಿಂಪಲ್ ಕ್ವೀನ್ ರಚಿತಾ ರಾಮ್ ಜೈಲಿಗೆ ಹೋಗಿ ದರ್ಶನ್‌ರನ್ನು ಭೇಟಿಯಾಗಿ ಬಂದಿದ್ರು. ದರ್ಶನ್‌ರನ್ನು ಸಿನಿಮಾ ಫೀಲ್ಡ್‌ನ ಗಾಡ್‌ಫಾದರ್ ಎಂದು ಹೇಳಿಕೊಳ್ಳೋ ರಚಿತ್ ರಾಮ್, ದರ್ಶನ್‌ ಮೀಟ್ ಮಾಡಿ ಬಂದ್ಮೇಲೆ ಅಕ್ಷರಶಃ ಭಾವುಕರಾಗಿದ್ರು. ಆದ್ರೆ. ಟೈಮಲ್ಲಿ ರಚಿತಾ ರಾಮ್‌ ಬಾಯಿಂದ ಒಂದು ಮಾತು ಹೊರಬಂದಿತ್ತು. ದರ್ಶನ್ ರಾಜನಿದ್ದಂತೆ.. ರಾಜನನ್ನ ರಾಜನಂತೆಯೇ ನೋಡೋಕೆ ಚೆಂದ. ದರ್ಶನ್ ಈಗಲೂ ರಾಜನಂತೆಯೇ ಇದ್ದಾರೆ ಅಂತಾ ಹೇಳಿದ್ರು ರಚಿತಾ ರಾಮ್.

ಅದೇನು ಕಾಕತಾಳಿಯವೋ ಏನೋ ಕೊಲೆ ಕೇಸ್ ಆರೋಪಿಯಾಗಿ ಜೈಲು ಸೇರಿರೋ ದರ್ಶನ್ ಜೈಲೊಳಗೆ ರಾಜನ ರೀತಿಯಲ್ಲೇ ದರ್ಬಾರು ಮಾಡ್ತಿದ್ದಾರೆ ಅದೇ ರೀತಿಯಲ್ಲೇ, ದರ್ಶನ್‌ರ ಜೈಲೊಳಗಿನ ಫೋಟೋ ಮತ್ತು ವಿಡಿಯೋ ಸುತ್ತ ಒಂದಲ್ಲ. ಎರಡಲ್ಲ. ಭರ್ತಿ 5 ಅನುಮಾನಗಳು ಹುಟ್ಟಿಕೊಂಡಿವೆ.

1. ಭೇಟಿಗೆ ಬಂದವರೇ ದರ್ಶನ್​ಗೆ ಸಿಗರೇಟ್ ತಂದುಕೊಡ್ತಿದ್ದಾರಾ?
ನಟ ದರ್ಶನ್ ಜೈಲು ಸೇರಿದ ಬಳಿಕ ಅವ್ರನ್ನ ಹಲವರು ಭೇಟಿಯಾಗಿದ್ದಾರೆ ಕುಟುಂಬಸ್ಥರು, ವಕೀಲರು, ಸ್ನೇಹಿತರು, ಆಪ್ತರು, ನಿರ್ಮಾಪಕರು ಸೇರಿದಂತೆ ಹಲವಾರು ಮಂದಿ ದರ್ಶನ್ ಭೇಟಿಯಾಗಿ ಸಾಂತ್ವನ ಹೇಳಿ ಬಂದಿದ್ದಾರೆ. ಹೋದವರು ಖಾಲಿ ಕೈನಲ್ಲಿ ಹೋಗ್ತಾರಾ? ಹಣ್ಣು, ದರ್ಶನ್ ಇಷ್ಟದ ಸ್ನ್ಯಾಕ್ಸ್, ಪುಸ್ತಕ ಸೇರಿದಂತೆ ಹಲವಾರು ವಸ್ತುಗಳನ್ನ ಬ್ಯಾಗ್‌ನಲ್ಲಿ ತುಂಬಿಕೊಂಡು ಹೋಗಿ ಕೊಟ್ಟು ಬಂದಿದ್ರು. ದರ್ಶನ್‌ರ ಈ ಸಿಗರೇಟ್ ಫೋಟೋ ಹೊರಬೀಳೋಕೂ ಎರಡು ದಿನ ಹಿಂದೆಯೂ ಕೂಡ ಆಪ್ತರು ಹೋಗಿ ಬ್ಯಾಗ್ ತುಂಬಾ ವಸ್ತುಗಳನ್ನು ದರ್ಶನ್‌ ಕೈಗಿಟ್ಟು ಬಂದಿದ್ರು. ಬಟ್, ಈಗ ಹುಟ್ಟಿಕೊಂಡಿರೋ ಮೊದಲ ಶಂಕೆ ಏನಂದ್ರೆ, ದರ್ಶನ್‌ರನ್ನು ಭೇಟಿಯಾಗಲು ಹೋದವರು ಬೇರೆ ಬೇರೆ ವಸ್ತುಗಳ ಜೊತೆಯಲ್ಲಿ ಸಿಗರೇಟ್ ಪ್ಯಾಕ್‌ ಕೂಡ ಕೊಟ್ಟು ಬಂದಿದ್ರಾ ಅನ್ನೋದು.

ಇದನ್ನೂ ಓದಿ: ದರ್ಶನ್​ಗೆ ವಿಡಿಯೋ ಕಾಲ್.. ಪೊಲೀಸ್ ಠಾಣೆಗೆ ಓಡೋಡಿ ಬಂದ ರೌಡಿ ಸತ್ಯ; ಬಾಯ್ಬಿಟ್ಟಿದ್ದೇನು?

ಫೋಟೋ ಮತ್ತು ವಿಡಿಯೋದಲ್ಲಿ ನಾವು ನೋಡ್ತಿರುವಂತೆ ದರ್ಶನ್ ಯಾವುದೋ ರೆಸಾರ್ಟ್‌ನಲ್ಲಿ ಇರುವವವರಂತೆ ರಿಲ್ಯಾಕ್ಸ್ ಮೂಡ್‌ನಲ್ಲಿ ಇದ್ದಾರೆ. ಅದು ಜೈಲು ಅಂತಅನ್ನಿಸೋದಕ್ಕೆ ಸಾಧ್ಯವೇ ಇಲ್ಲ. ಸಿಗರೇಟ್‌ನ ಇಷ್ಟು ರಾಜಾರೋಷವಾಗಿ ಹೊಡಿತಿರೋರು ಡ್ರಿಂಕ್ಸ್ ಮಾಡಿಲ್ಲ ಅಂದ್ರೆ ನಂಬೋಕಾಗುತ್ತಾ?

2. ಆ ಹೋಟೆಲ್‌ ಮೂಲಕ ಸಿಗರೇಟ್ ಸಪ್ಲೈ ಆಗ್ತಿದೆಯಾ?
ಜೈಲೊಳಗೆ ದರ್ಶನ್‌ ಸಿಗರೇಟ್ ಸೇದುತ್ತಾ ರೌಡಿಗಳ ಜೊತೆ ಬಿಂದಾಸ್ ಹರಟೆ ಹೊಡೆಯುತ್ತಿರೋ ಫೋಟೋ ವೈರಲ್ ಆದ ಬಳಿಕ ಒಂದೊಂದೇ ಶಾಕಿಂಗ್ ವಿಚಾರಗಳು ಬಯಲಾಗ್ತಿವೆ. ಮನೆಯೂಟ ಬೇಕು ಅಂತಾ ಕೋರ್ಟ್‌ ಮೆಟ್ಟಿಲೇರಿದ್ದ ದರ್ಶನ್‌ಗೆ ಜೈಲೊಳಗೆ ಫೇಮಸ್ ಮಿಲಿಟರಿ ಹೋಟೆಲ್‌ ಒಂದರಿಂದ ಊಟ ಸಪ್ಲೈ ಆಗ್ತಿದ್ದ ಅನುಮಾನ ಕೂಡ ಕೇಳಿಬಂದಿದೆ. ಒಂದೊಮ್ಮೆ ಈ ಶಂಕೆ ನಿಜವೇ ಆಗಿದ್ದಾದ್ರೆ.. ಆ ಊಟ ಬಾಕ್ಸ್‌ನಲ್ಲಿ ಸಿಗರೇಟ್ ಪ್ಯಾಕ್ ಕೂಡ ರವಾನೆಯಾಗ್ತಿತ್ತಾ ಎಂಬ ಪ್ರಶ್ನೆ ಮತ್ತು ಅನುಮಾನ ಕೂಡ ಹುಟ್ಟದೇ ಇರದು.

ಮತ್ತೊಂದು ಮೂಲದ ಪ್ರಕಾರ ಜೈಲೊಳಗಿರೋ ಬೇರೆೊಂದು ಕೇಸ್‌ನ ಆರೋಪಿಯೊಬ್ಬನಿಗೆ ಹೋಟೆಲ್ ಒಂದರಿಂದ ಊಟಕ್ಕೆ ಅವಕಾಶ ಕೊಡಲಾಗಿತ್ತಂತೆ. ಆ ಆರೋಪಿಗೆ ಬರುತ್ತಿದ್ದ ಊಟ ದರ್ಶನ್‌ಗೂ ಹೋಗ್ತಿತ್ತಾ ಎಂಬ ಶಂಕೆಯನ್ನು ವ್ಯಕ್ತಪಡಿಸಲಾಗ್ತಿದೆ. ಊಟದ ಬಾಕ್ಸ್‌ನಲ್ಲಿ ಸಿಗರೇಟ್ ಇಟ್ಟು ದರ್ಶನ್‌ ಬ್ಯಾರಕ್‌ನಲ್ಲಿ ತಂದಿಡಲಾಗ್ತಿತ್ತಾ? ಖಂಡಿತ ಗೊತ್ತಿಲ್ಲ. ಆದ್ರೆ. ಇಂಥಾದ್ದೊಂದು ಅನುಮಾನ ಮೂಡಿರೋದು ದೊಡ್ಡ ಸಂಚಲನಕ್ಕೆ, ಆಕ್ರೋಶಕ್ಕೆ ಕಾರಣವಾಗಿದೆ.

3. ದರ್ಶನ್​ಗಿದೆಯಾ ನಟೋರಿಯಸ್​ ರೌಡಿ ಗ್ಯಾಂಗ್‌ನ ಕೃಪೆ?
ಜೈಲು ಸೇರಿದ ಮೊದಲ ದಿನವೇ ನಟೋರಿಯಸ್ ರೌಡಿ ಶೀಟರ್, ಕೊಲೆ ಕೇಸ್‌ ಆರೋಪಿಯಾಗಿ ಪರಪ್ಪನ ಅಗ್ರಹಾರದಲ್ಲಿದ್ದ ಈ ವಿಲ್ಸನ್ ಗಾರ್ಡನ್‌ ನಾಗನನ್ನು ಭೇಟಿ ಮಾಡಿಸುವಂತೆ ದರ್ಶನ್‌ ಕೇಳಿಕೊಂಡಿದ್ರು ಎಂಬ ಮಾಹಿತಿ ಲಭ್ಯವಾಗಿತ್ತು. ಈ ಫೋಟೋ ವೈರಲ್ ಆದ್ಮೇಲೆ ದರ್ಶನ್ ಮತ್ತು ವಿಲ್ಸನ್ ನಾಗನ ಸುತ್ತ ಓಡಾಡ್ತಿದ್ದ ಸುದ್ದಿಗಳಿಗೆಲ್ಲಾ ರೆಕ್ಕ ಪುಕ್ಕ ಹುಟ್ಟಿಕೊಂಡಿದೆ.

ದರ್ಶನ್ ತಮ್ಮ ಬ್ಯಾರಕ್‌ ಎದುರು ಸಿಗರೇಟ್, ಕಾಫಿ ಮಗ್, ಕೈಲನಲ್ಲಿ ಕಡಗ ಹಾಕ್ಕೊಂಡು ನಗು ನಗುತ್ತಾ ಮಾತನಾಡ್ತಿರೋ ಫೋಟೋ ನೋಡಿದ್ಮೇಲೆ. ಎಲ್ಲರ ಕಣ್ಣು ರೌಡಿಗಳತ್ತಲೇ ನೆಟ್ಟಿದೆ. ಅದ್ರಲ್ಲೂ.. ಈ ವಿಲ್ಸನ್ ಗಾರ್ಡನ್ ನಾಗನ ಮೇಲೆಯೇ ಡೌಟ್ ಶುರುವಾಗ್ತಿದೆ. ಬೆಂಗಳೂರಿನ ನಂಬರ್ 2 ರೌಡಿ ಎನ್ನಲಾಗೋ ಈ ವಿಲ್ಸನ್ ನಾಗನೇ ತನ್ನ ನೆಟ್‌ವರ್ಕ್ ಬಳಸಿ ದರ್ಶನ್‌ ಕೇಳಿದ್ದೆಲ್ಲವನ್ನ ಸಪ್ಲೈ ಮಾಡ್ತಿದ್ನಾ ಎಂಬ ದೊಡ್ಡ ಅನುಮಾನ ಹುಟ್ಟಿದೆ. ಹಾಗಾಗಿ, ದರ್ಶನ್‌ ಕೈಲಿರೋ ಸಿಗರೇಟ್‌ ಹಿಂದೆಯೂ ವಿಲ್ಸನ್‌ ಗಾರ್ಡನ್‌ ನಾಗನ ಕೈವಾಡವಿರೋ ಶಂಕೆ ಶುರುವಾಗಿದೆ.

4. ದರ್ಶನ್​ಗೆ ಜೈಲಿನ ಕ್ಯಾಂಟೀನ್‌ನಲ್ಲೇ ಸಿಕ್ಕಿತ್ತಾ ಸಿಗರೇಟ್?
ಜೈಲು ಕ್ಯಾಂಟೀನ್‌ನಲ್ಲಿ ಸಿಗರೇಟಾ? ಈ ಒಂದು ಪ್ರಶ್ನೆ ನಿಮಗೆ ಶಾಕ್ ಅನಿಸಬಹುದು ಜೈಲಿನ ಕ್ಯಾಂಟೀನ್‌ಲ್ಲಿ ಸಿಗರೇಟ್, ಕಾಫಿ ಸಿಗುತ್ತೆ ಅನ್ನೋ ಆಘಾತಕಾರಿ ಸಂಗತಿಯನ್ನ ನಿವೃತ್ತ ಜೈಲು ಸಹಾಯಕ ಅಧೀಕ್ಷಕರೇ ಹೇಳಿದ್ದಾರೆ. ತಿಳಿಸಾರು, ಅನ್ನ, ಗಟ್ಟಿ ಮುದ್ದೆ, ಬಿಸ್ಕೇಟ್ ಬಿಟ್ಟು ಮತ್ತೇನೂ ಸಿಗಲ್ಲ ಅಂತಾ ನಾವು ಭಾವಿಸಿರೋ ನಮಗೆ ಜೈಲು ಕ್ಯಾಂಟೀನ್ ಸಿಗರೇಟ್ ಮಾರಾಟ ಮಾಡೋ ಅಡ್ಡೆಯಾಗಿದೆ ಎಂಬುದೇ ದಂಗುಬಂಡಿಸೋ ವಿಷ್ಯ!

5. ದರ್ಶನ್​ ಮೇಲೆ ಕೆಲ ಜೈಲು ಅಧಿಕಾರಿಗಳೇ ಕೃಪೆ ತೋರಿದ್ರಾ?
ಜೈಲೊಳಗೆ ಯಾವುದೇ ವಸ್ತುಗಳು ಹೋಗಬೇಕೆಂದರೂ ಜೈಲು ಅಧಿಕಾರಿಗಳು ಪರಿಶೀಲಿಸ್ತಾರೆ. ಅವರ ಕಣ್ಣು ತಪ್ಪಿಸಿ ಯಾವುದೇ ವಸ್ತುಗಳನ್ನು ಕೊಂಡೊಯ್ಯಲು ಸಾಧ್ಯವೇ ಇಲ್ಲ. ಹಾಗಾದ್ರೆ, ಕೆಲ ಜೈಲು ಅಧಿಕಾರಿಗಳೇ ಈ ದಾಸನಿಗೆ ಕೃಪೆ ತೋರಿದ್ರಾ? ಈಗ ಸಸ್ಪೆಂಡ್​ ಆಗಿರೋ ಆಫೀಸರ್ಸ್​​ನ ನೋಡ್ತಿದ್ರೆ ಆ ಅನುಮಾನ ನಿಜ ಅನ್ನಿಸುತ್ತೆ. ಯಾಕಂದ್ರೆ, ದರ್ಶನ್‌ ಯಾವುದಾದ್ರೂ ಮಾರ್ಗದಲ್ಲಿ ಸಿಗರೇಟ್ ತರಿಸಿಕೊಂಡಿರ್ಲಿ. ಅದು ಅಧಿಕಾರಿಗಳ ಗಮನಕ್ಕೆ ಬಂದಿರದೇ ಇರೋಕೆ ಸಾಧ್ಯವೇ ಇಲ್ಲ. ಎಲ್ಲೆಡೆ ಸಿಸಿಟಿವಿ ಕಣ್ಗಾವಲಿರುತ್ತೆ. ಅಧಿಕಾರಿಗಳು ಆಗಿಂದಾಗ್ಗೆ ಬ್ಯಾರಕ್‌ಗಳ ಸುತ್ತ ಓಡಾಡ್ತಾ ಇರ್ತಾರೆ. ಸಣ್ಣ ಸ್ಮೆಲ್ ಕೂಡ ಅಧಿಕಾರಿಗಳಿಗೆ ಹಿಂಟ್ ಕೊಟ್ಟುಬಿಡುತ್ತೆ. ಹಾಗಿರುವಾಗ, ದರ್ಶನ್ ಇಷ್ಟು ರಾಜಾರೋಷವಾಗಿ ಬ್ಯಾರಕ್ ಎದುರೇ ಸಿಗರೇಟ್ ಸೇದುತ್ತಿರೋದು ಅಧಿಕಾರಿಗಳ ಗಮನಕ್ಕೆ ಬರಲೇ ಇಲ್ವಾ? ಹಾಗಾಗಿನೇ.. ಈ ಧಮ್‌ ದರ್ಶನದ ಹಿಂದೆ ಕೆಲ ಜೈಲು ಅಧಿಕಾರಿಗಳೇ ಇನ್ವಾಲ್ವ್ ಆಗಿದ್ದಾರಾ ಎಂಬ ಶಂಕೆ ಹುಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಚ್ಚು ಬಂದ ದಿನವೇ ದಚ್ಚು ಪಾರ್ಟಿ.. ದರ್ಶನ್​ಗೆ ಸಿಗರೇಟ್​, ಬಿರಿಯಾನಿ, ಕಾಫಿ ಸಿಕ್ಕಿದ್ದು ಹೇಗೆ? ಇಲ್ಲಿದೆ ಅಸಲಿ ವಿಷ್ಯ!

https://newsfirstlive.com/wp-content/uploads/2024/08/rachitha-ram.jpg

Load More